Asianet Suvarna News Asianet Suvarna News

#BJPKidnapsMLAs ಟ್ವಿಟರ್‌ನಲ್ಲಿ ಪ್ರತಿಧ್ವನಿಸಿದ ರಾಜಕೀಯ ಡ್ರಾಮಾ

ಕಾಂಗ್ರೆಸ್ ಮತ್ತು ಜೆಡಿಎಸ್ ನ ಶಾಸಕರು ರಾಜೀನಾಮೆ ನೀಡಿ ಮುಂಬೈನ ಖಾಸಗಿ ಹೋಟೆಲ್ ನಲ್ಲಿ ಉಳಿದುಕೊಂಡಿದ್ದರೆ ಇತ್ತ ಸೋಶಿಯಲ್ ಮೀಡಿಯಾ ತನ್ನದೇ ಆದ ರೀತಿ ಪ್ರತಿಕ್ರಿಯೆ ನೀಡಿದೆ.

Karnataka Political Crisis Social Media Trends BJP Kidnaps MLAs
Author
Bengaluru, First Published Jul 10, 2019, 4:16 PM IST

ಬೆಂಗಳೂರು(ಜು. 10)  ತಮ್ಮ ಶಾಸಕರನ್ನು ಒತ್ತಾಯ ಪೂರ್ವಕವಾಗಿ ಕರೆದುಕೊಂಡು ಹೋಗಿದ್ದು ಅವರನ್ನು ಕಿಡ್ನಾಪ್ ಮಾಡಲಾಗಿದೆ ಎಂದು ಕಾಂಗ್ರೆಸ್ ಆರೋಪ ಮಾಡಿದ ನಂತರ ಸೋಶಿಯಲ್ ಮೀಡಿಯಾ ಸಹ ಅದೆ ತೆರನಾದ ಪ್ರತಿಕ್ರಿಯೆ ನೀಡಿದೆ.

ಶಾಸಕರು ವೈಯಕ್ತಿಕ ಕಾರಣಕ್ಕೆ ರಾಜೀನಾಮೆ ನೀಡಿಲ್ಲ. ಅವರನ್ನು ಹಣ, ಹುದ್ದೆ ಸೇರಿದಂತೆ ವಿವಿಧ ಆಮಿಷ ನೀಡಿ ಕಿಡ್ನಾಪ್ ಮಾಡಲಾಗಿದೆ ಎಂದು ಕಾಂಗ್ರೆಸ್ ಮಾಡಿರುವ ಆರೋಪ ಸೋಶಿಯಲ್ ಮೀಡಿಯಾದಲ್ಲಿ  #BJPKidnapsMLAs ಟ್ರೆಂಡ್ ಆಗಲು ಕಾರಣವಾಗಿದೆ.

ಕಾನೂನು ಮೇಷ್ಟ್ರಿಗೆ ವ್ಯಾಕರಣ ಮೇಷ್ಟ್ರ ಸಂವಿಧಾನ ಪಾಠ!

ಶಾಸಕರು ಅವರದ್ದೇ  ಆದ ವೈಯಕ್ತಿಕ ಕಾರಣಕ್ಕೆ ರಾಜೀನಾಮೆ ನೀಡಿ ಹೋಗಿದ್ದೆ ಆದಲ್ಲಿ ಬಿಜೆಪಿ ನಾಯಕರು ಅವರನ್ನು ಯಾಕೆ ಕಾಯಬೇಕು? ಅಮಿತ್ ಶಾ ಮತ್ತು ಯಡಿಯೂರಪ್ಪ ರಾಜಕಾರಣವನ್ನು ಮಾಫಿಯಾವನ್ನಾಗಿ ಬದಲಾಯಿಸಿದ್ದಾರೆ ಎಂದು ಆರೋಪ ಮಾಡಲಾಗಿದೆ.

 

Follow Us:
Download App:
  • android
  • ios