ಬೆಂಗಳೂರು[ಜು. 12] ಮಳೆಗಾಲದ ವಿಧಾನಸಭಾ ಅಧಿವೇಶನದ ಮೊದಲನೆ ದಿನ ಅಂತ್ಯವಾಗಿದೆ. ಶಾಸಕರು ಚುಕ್ಕೆ ಗುರುತಿನ ಪ್ರಶ್ನೆ ಹುಡುಕುವ ಬದಲು ರೆಸಾರ್ಟ್ ಸೇರಿದ್ದಾರೆ. ಅವರ ಮಾತೃಪಕ್ಷಗಳೆ ಅವರನ್ನು ಕರೆದುಕೊಂಡು ಹೋಗಿವೆ.

ಕ್ಷೇತ್ರ ಬಿಟ್ಟ ಪ್ರತಿನಿಧಿಗಳಿಗೆ ಈಗ ರೆಸಾರ್ಟ್ ಗಳೆ ಕಾರ್ಯಕ್ಷೇತ್ರ. ವಿಪ್ ನ್ನು ಪಡೆದುಕೊಂಡಿರುವ ಶಾಸಕರು ಎಲ್ಲೆಲ್ಲಿ ಇದ್ದಾರೆ?

ಮೂರೂ ಪಕ್ಷದ ಶಾಸಕರಿಗೆ ಮೂಗುದಾರ...ಅಷ್ಟಕ್ಕೂ ವಿಪ್ ಅಂದ್ರೇನು?

1. ರಾಜೀನಾಮೆ ಕೊಟ್ಟು ಹೋಗಿರುವ ಶಾಸಕರು ಮುಂಬೈನ ಖಾಸಗಿ ಹೊಟೆಲ್ ನಲ್ಲಿ ಉಳಿದುಕೊಂಡಿದ್ದಾರೆ.

2.  ಪಕ್ಷದಲ್ಲೇ ಉಳಿದುಕೊಂಡಿರುವ ಕಾಂಗ್ರೆಸ್ ಶಾಸಕರು ದೇವನಹಳ್ಳಿ ಸಮೀಪದ ರೆಸಾರ್ಟ್ ನಲ್ಲಿ ಮುಂದಿನ ತಂತ್ರ ಸಿದ್ಧ  ಮಾಡುತ್ತಿದ್ದಾರೆ.

3.  ಬಿಜೆಪಿ ಶಾಸಕರು ಬೆಂಗಳೂರಿನ ಯಲಹಂಕ ಸಮೀಪದಲ್ಲಿ ತಮ್ಮ ವಾಸ್ತವ್ಯ ಮಾಡಿಕೊಂಡಿದ್ದಾರೆ.

4. ಜೆಡಿಎಸ್ ಶಾಸಕರಿಗೆ ನಂದಿ ಗಿರಿಧಾಮದ ಸಮೀಪದಲ್ಲಿನ ರೆಸಾರ್ಟ್ ನಲ್ಲಿ ಸಕಲ ವ್ಯವಸ್ಥೆ ಮಾಡಲಾಗಿದೆ.