ವಿಶ್ವಾಸಮತ ಸಾಬೀತಿಗೆ ರಾಜ್ಯಪಾಲರು ಶುಕ್ರವಾರ ಮಧ್ಯಾಹ್ನ 1.30ರವರೆಗೆ ಅವಕಾಶ ನೀಡಿದ್ದಾರೆ. ಸದನವನ್ನು ಶುಕ್ರವಾರಕ್ಕೆ ಮುಂದೂಡಿದ ನಂತರ ಬಿಜೆಪಿ ಶಾಸಕರು ಮಾತ್ರ ವಿಧಾನಸಭೆ ಬಿಟ್ಟು ಹೊರಗೆ ಹೋಗಿಲ್ಲ.  ಗುರುವಾರ ರಾತ್ರಿಯನ್ನು ಬಿಜೆಪಿ ಶಾಸಕರು ವಿಧಾನಸೌಧದಲ್ಲೇ ಕಳೆದಿದ್ದಾರೆ. ಅಲ್ಲಿಯೇ ಚಾಪೆ ದಿಂಬು ಹಾಕಿಕೊಂಡು ನಿದ್ರಿಸಿದ್ದಾರೆ.

ಬೆಂಗಳೂರು[ಜು. 18]  ಗುರುವಾರದ ಇಡೀ ದಿನದ ಕಲಾಪ, ಗಲಾಟೆ ಗೊಂದಲದಲ್ಲೇ ಕೊನೆಯಾಗಿದೆ. ಸ್ಪೀಕರ್ ಮತ್ತು ಸರಕಾರದ ಕ್ರಮ ವಿರೋಧಿಸಿ ಬಿಜೆಪಿ ಶಾಸಕರೆಲ್ಲರೂ ವಿಧಾನಸೌಧದಲ್ಲೇ ಧರಣಿ ನಡೆಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆದಿಯಾಗಿ ಎಲ್ಲ ಶಾಸಕರು ವಿಧಾನಸೌಧದಲ್ಲಿಯೇ ನಿದ್ರಿಸುತ್ತಿದ್ದಾರೆ ಒಟ್ಟಿನಲ್ಲಿ ರಾಜಕಾರಣದ ಹೈಡ್ರಾಮಕ್ಕೆ ಮಾತ್ರ ಕರ್ನಾಟಕದಲ್ಲಿ ಸದ್ಯಕ್ಕೆ ಕೊನೆ ಕಾಣುತಿಲ್ಲ. ಸುದ್ದಿಯಲ್ಲಿ ಏನ್ ಮಜಾ ಇಲ್ಲ .. ಪೋಟೋ ನೋಡ್ಕಂಡು ಬನ್ನಿ..