Asianet Suvarna News Asianet Suvarna News

ನನ್ನ ಕಾರಲ್ಲೇ ಶೋಭಾ ಕುಳಿತುಕೊಳ್ಳಲಿ : ಡಿಕೆಶಿ ವ್ಯಂಗ್ಯ

ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆಯೇ ಬಂದು ನನ್ನ ಕಾರಲ್ಲಿ ಕುಳಿತುಕೊಳ್ಳಿ ಹೀಗೆಂದು ಡಿಕೆ ಶಿವಕುಮಾರ್ ವ್ಯಂಗ್ಯವಾಡಿದ್ದಾರೆ. ಯಾಕೆ..?

Karnataka Minister DK Shivakumar Slams Shobha Karndlaje
Author
Bengaluru, First Published May 12, 2019, 10:59 AM IST

ಹುಬ್ಬಳ್ಳಿ : ನನ್ನ ಬಳಿ ಹಣ ಇದ್ದರೆ ಶೋಭಕ್ಕನ ಬ್ಯಾಗ್‌ನಲ್ಲಿ ಇಟ್ಟು ಕಳುಹಿಸುತ್ತೇನೆ! ಡಿ.ಕೆ.ಶಿವಕುಮಾರ್ ಚುನಾವಣಾ ಅಕ್ರಮ ಮಾಡುತ್ತಿದ್ದಾರೆ, ಗೋಣಿ ಚೀಲದಲ್ಲಿ ಹಣ ತಂದಿದ್ದಾರೆ. ಅವರ ಕಾರಿನ ಟೈರ್‌ನಲ್ಲಿ ಹಣವಿದೆ ಎಂಬ ಸಂಸದೆ ಶೋಭಾ ಕರಂದ್ಲಾಜೆ ಆರೋಪಕ್ಕೆ ಸಚಿವ ತಿರುಗೇಟು ನೀಡಿದ್ದು ಹೀಗೆ. ನನ್ನ ಕಾರಿನ ಟೈರ್‌ನಲ್ಲಿ ಹಣ ಇದೆ ಎಂದು ಶೋಭಾ ಕರಂದ್ಲಾಜೆ ಆರೋಪಿಸಿ ದ್ದಾರೆ. 

ಹಾಗೊಂದು  ವೇಳೆ ಇದ್ದರೆ ಅವರೇ ಬಂದು ನನ್ನ ಕಾರಿನಲ್ಲಿ ಕೂರಲಿ ಎಂದು ವ್ಯಂಗ್ಯವಾಡಿದರು. ಜತೆಗೆ, ನಾನು ಗೋಣಿ ಚೀಲದಲ್ಲಿ ಹಣ ತಂದಿದ್ದೇನೆ ಎಂಬ ಅನುಮಾನವಿದ್ದರೆ ಅದನ್ನು ಶೋಭಾ ಕರಂದ್ಲಾಜೆ ಅವರ ಬ್ಯಾಗ್‌ನಲ್ಲಿ ಇಟ್ಟು ಕಳುಹಿಸುತ್ತೇನೆ ಎಂದು ಲೇವಡಿ ಮಾಡಿದರು.

ಬೇಡ ಅಂದರವರ್ಯಾರು: ಮೈತ್ರಿ ಸರ್ಕಾರ ಬಂದಾಗಿಂದ ಬಿಜೆಪಿಗರು ಸರ್ಕಾರ ಬೀಳುತ್ತೆ, ಬಿಜೆಪಿ ಮತ್ತೆ ಅಧಿಕಾರದ ಗದ್ದುಗೆ ಏರುತ್ತದೆ ಎಂದು ಹೇಳುತ್ತಲಿದ್ದಾರೆ. ಬೇಡ ಎಂದವರಾರು ಎಂದೂ ತಿರುಗೇಟು ನೀಡಿದರು.

Follow Us:
Download App:
  • android
  • ios