Asianet Suvarna News Asianet Suvarna News

ಕರ್ನಾಟಕದ 43 ಶಾಸಕರು, 21 MLCಗಳಿಗೆ ಲೋಕಾಯುಕ್ತ ನೋಟಿಸ್

2018-19ನೇ ಸಾಲಿನಲ್ಲಿ ಆಸ್ತಿ ವಿವರ ಸಲ್ಲಿಸದ ಜನಪ್ರನಿಧಿಗಳ ಹೆಸರುಗಳನ್ನು ಕರ್ನಾಟಕ ಲೋಕಾಯುಕ್ತ ಪಿ ವಿಶ್ವನಾಥ ಶೆಟ್ಟಿ ಅವರು ಪ್ರಕಟಿಸಿದ್ದಾರೆ. ಪಟ್ಟಿಯಲ್ಲಿ 43 ಶಾಸಕರು, 21 ವಿಧಾನಪರಿಷತ್ ಸದಸ್ಯರುಗಳ ಹೆಸರುಗಳಿದ್ದು, ಇವರೆಲ್ಲರಿಗೆ ನೋಟಿಸ್ ನೀಡಲಾಗಿದೆ.  ಹಾಗಾದ್ರೆ ಯಾರೆಲ್ಲ ಹೆಸರುಗಳಿವೆ ಎನ್ನುವುದನ್ನು ಮುಂದೆ ಓದಿ.

karnataka lokayukta issues notice to 43 mlas 21 mlcs over asset declaration
Author
Bengaluru, First Published Sep 1, 2019, 5:37 PM IST

ಬೆಂಗಳೂರು, [ಸೆ.01]:  ಆಸ್ತಿ ವಿವರ ಸಲ್ಲಿಸದ ಶಾಸಕರ ಹೆಸರುಗಳನ್ನು ಲೋಕಾಯುಕ್ತ ಸಂಸ್ಥೆ ಪಟ್ಟಿ ಮಾಡಿದ್ದು,  43 ಶಾಸಕರು ಹಾಗೂ 21 MLCಗಳು ತಮ್ಮ ಆಸ್ತಿ ವಿವರಗಳನ್ನು ಘೋಷಿಸಿಲ್ಲ ಎಂದು ಲೋಕಾಯುಕ್ತ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ. 

ಜನಪ್ರತಿನಿಧಿಗಳು ತಮ್ಮ ಆಸ್ತಿ ವಿವರಗಳನ್ನು ಲೋಕಾಯುಕ್ತ ಸಂಸ್ಥೆ ಹಾಗೂ ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕಾಗಿರುವುದು ಅವರ ಕರ್ತವ್ಯ ಮತ್ತು ಕಡ್ಡಾಯ ಕೂಡ. 

ಪ್ರತಿ ವರ್ಷ ಜೂನ್ 30ರೊಳಗೆ ಜನಪ್ರತಿನಿಧಿಗಳು ತಮ್ಮ ಹಾಗೂ ಕುಟುಂಬಸ್ಥರ ಆಸ್ತಿ ವಿವರಗಳನ್ನು ಸಲ್ಲಿಸಬೇಕು ಎಂಬ ನಿಯಮವಿದೆ. ಆದರೆ, ಪ್ರತಿ ವರ್ಷ ಈ ನಿಯಮ ಉಲ್ಲಂಘಿಸುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಇಂಥ ಜನಪ್ರತಿನಿಧಿಗಳಿಗೆ ಲೋಕಾಯುಕ್ತ ಸಂಸ್ಥೆ ನೋಟಿಸ್ ನೀಡಿದ್ದು,10 ದಿನಗಳೊಳಗೆ ಪ್ರತಿಕ್ರಿಯಿಸುವಂತೆ ಸೂಚಿಸಿದೆ. 

2017-18ನೇ ಸಾಲಿನಲ್ಲಿ 11 ಮಂದಿ ತಮ್ಮ ಆಸ್ತಿ ವಿವರನ್ನು ಸಲ್ಲಿಕೆ ಮಾಡಿಲ್ಲ. ಈ ರೀತಿ ಆಸ್ತಿ ವಿವರ ನೀಡದ ಜನಪ್ರತಿನಿಧಿಗಳ ಹೆಸರುಗಳನ್ನು ಮಾಧ್ಯಮಗಳಲ್ಲಿ ಪ್ರಕಟಿಸಲಾಗಿತ್ತು. ಈಗ 2018-19ನೇ ಸಾಲಿನಲ್ಲಿ ಆಸ್ತಿ ಘೋಷಿಸದ ಜನಪ್ರತಿನಿಧಿಗಳ ಹೆಸರುಗಳನ್ನು ಪ್ರಕಟಿಸಲಾಗಿದೆ ಎಂದು ಲೋಕಾಯುಕ್ತ  ರಿಜಿಸ್ಟಾರ್ ನಂಜುಡಸ್ವಾಮಿ ತಿಳಿಸಿದ್ದಾರೆ.

ಆಸ್ತಿ ವಿವರ ಸಲ್ಲಿಸದ ಶಾಸಕರು 
ಶಾಸಕರಾದ  ಎಚ್ ಡಿ ರೇವಣ್ಣ, ಜಮೀರ್ ಅಹ್ಮದ್, ಸಿ ಪುಟ್ಟರಂಗ ಶೆಟ್ಟಿ, ಹರೀಶ್ ಪೂಂಜಾ, ಕೆ. ವೈ ನಂಜೇಗೌಡ, ಡಾ. ಅಂಜಲಿ ಹೇಮಂತ್ ನಿಂಬಾಳ್ಕರ್, ಸಿದ್ದು ಸವದಿ, ಎಂಪಿ ರೇಣುಕಾಚಾರ್ಯ,ಸೋಮೇಗೌಡ ಬಿ ಪಾಟೀಲ ಸೇರಿ 43 ಶಾಸಕರು, ಸಿಎಂ ಇಬ್ರಾಹಿಂ, ಯು.ಬಿ ವೆಂಕಟೇಶ್, ಡಾ. ತೇಜಸ್ವಿನಿ ಗೌಡ, ಅರವಿಂದ್ ಕುಮಾರ್ ಅರಳಿ, ಟಿ.ಎ ಶರವಣ, ನಜೀರ್ ಅಹ್ಮದ್, ಕೆ.ಪಿ ನಂಜುಂಡಿ, ಡಿ. ಯು ಮಲ್ಲಿಕಾರ್ಜುನ, ಸುನೀಲ್ ಗೌಡ, ನಜೀರ್ ಅಹ್ಮದ್, ಬಸನಗೌಡ ಪಾಟೀಲ್, ಎಂ ನಾರಾಯಣ ಸ್ವಾಮಿ ಸೇರಿದಂತೆ 21 ಮಂದಿ ಎಂಎಲ್ಸಿಗಳು  ತಮ್ಮ ಹಾಗೂ ತಮ್ಮ ಕುಟುಂಬಸ್ಥರ ಆಸ್ತಿ ವಿವರಗಳನ್ನು ಸಲ್ಲಿಸಿಲ್ಲ ಎಂದು ಲೋಕಾಯುಕ್ತ ಸಂಸ್ಥೆ ಹೇಳಿದೆ.

Follow Us:
Download App:
  • android
  • ios