ವಿಮಾನದಲ್ಲಿ ಕನ್ನಡದಲ್ಲಿ ಸೇವೆ ನೀಡದ್ದಕ್ಕೆ IAS ಅಧಿಕಾರಿ ಆಕ್ರೋಶ
ನಮ್ಮ ರಾಜ್ಯದಲ್ಲೇ ಕನ್ನಡ ಕಡೆಗಣನೆ ಆಗಾಗ ಸುದ್ದಿಯಾಗುತ್ತಲೇ ಇರುತ್ತದೆ. ಇದಕ್ಕೆ ಮತ್ತೊಂದು ನಿದರ್ಶನ ಎನ್ನುವಂತೆ ಐಎಎಸ್ ಅಧಿಕಾರಿ ಎಲ್.ಕೆ.ಅತೀಕ್ ವಿಮಾನಯಾನದ ವೇಳೆ ತಮಗೆದುರಾದ ಕನ್ನಡ ಕಡಗಣನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದ ನೋಡಿ.
ಬೆಳಗಾವಿ(ಡಿ.17): ಕನ್ನಡದಲ್ಲಿ ಸೇವೆ ನೀಡದ ವಿಮಾನಯಾನ ಸಂಸ್ಥೆಗಳ ವಿರುದ್ಧ ಹಿರಿಯ ಐಎಎಸ್ ಅಧಿಕಾರಿ ಎಲ್.ಕೆ.ಅತೀಕ್ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
"
ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ವೀಕ್ಷಕರಾಗಿರುವ ಐಎಎಸ್ ಅಧಿಕಾರಿ ಎಲ್.ಕೆ.ಅತೀಕ್ ಅವರು ಬುಧವಾರ ಬೆಂಗಳೂರಿನಿಂದ ಬೆಳಗಾವಿಗೆ ಇಂಡಿಗೋ ಏರ್‌ಲೈನ್ಸ್ ವಿಮಾನದ ಮೂಲಕ ಆಗಮಿಸಿದ್ದರು. ಈ ವೇಳೆ ಐಎಎಸ್ ಅಧಿಕಾರಿ ಕನ್ನಡದಲ್ಲಿ ಮಾಹಿತಿ ಬಯಸಿದ್ದರೂ ಏರ್‌ಲೈನ್ಸ್ ಸಂಸ್ಥೆಯ ಸಿಬ್ಬಂದಿ ಕನ್ನಡದಲ್ಲಿ ಮಾಹಿತಿ ನೀಡಲಿಲ್ಲ. ಇದರಿಂದ ಕೆರಳಿದ ಅತೀಕ್ ಅವರು ವಿಮಾನಯಾನ ಸಂಸ್ಥೆಗಳ ವಿರುದ್ಧ ಟ್ವೀಟರ್‌ನಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಿಂಗಾಪುರ ಏರ್‌ಲೈನ್ಸ್‌ನಲ್ಲೂ ಕನ್ನಡ; ದೇಶಿಯ ವಿಮಾನಗಳಲ್ಲೇಕಿಲ್ಲ?
ವಿದೇಶಿ ವಿಮಾನಯಾನ ಸಂಸ್ಥೆಗಳೇ ಕನ್ನಡದಲ್ಲಿ ಸೇವೆ ನೀಡುತ್ತಿವೆ. ಕರ್ನಾಟಕದಲ್ಲಿ ಇಂಡಿಗೋ ಹಾಗೂ ಇತರೆ ವಿಮಾನಯಾನ ಕಂಪನಿಗಳಿಗೆ ಕನ್ನಡದಲ್ಲಿ ಸೇವೆ ಸಲ್ಲಿಸಲು ಇರುವಂತಹ ಸಮಸ್ಯೆಯಾದರೂ ಏನು ಎಂದು ಟ್ವೀಟ್ ಮಾಡುವ ಮೂಲಕ ಪ್ರಶ್ನಿಸಿದ್ದಾರೆ.
ವಿದೇಶಿ ವಿಮಾನಯಾನ ಸಂಸ್ಥೆಗಳಾದ ಬ್ರಿಟಿಷ್ ಏರ್‌ವೇಸ್ ಎಮಿರೇಟ್ಸ್, ಸಿಂಗಾಪುರ್ ಏರ್‌ಲೈನ್ಸ್‌ಗಳು ಕನ್ನಡದಲ್ಲಿ ಸೇವೆ ನೀಡುತ್ತಿವೆ. ಆದರೆ, ಇಂಡಿಗೋ ಸಿಬ್ಬಂದಿಗೆ ಕನ್ನಡದಲ್ಲಿ ಸೇವೆ ಮಾಡಲು ಇರುವ ಕಷ್ಟವಾದರೂ ಏನು ಎಂದು ಐಎಎಸ್ ಅಧಿಕಾರಿ ಅತೀಕ್ ಪ್ರಶ್ನಿಸಿದ್ದಾರೆ.