ಕೆ.ಸಿ. ವ್ಯಾಲಿ: ನೀರು ಹರಿಸುವಿಕೆಗೆ ಮಧ್ಯಂತರ ತಡೆಯಾಜ್ಞೆ

Karnataka High Court Issues Interim Stay To KC Valley
Highlights

  • ಬೆಂಗಳೂರಿನ ಕೊಳಚೆ ನೀರನ್ನು ಸಂಸ್ಕರಿಸಿ ಕೋಲಾರದ ಕೆರೆಗಳಿಗೆ ಬಿಡುವ ಯೋಜನೆ
  • ಕೊಳಚೆ ಮತ್ತು ಶುದ್ಧನೀರನ್ನು ಭೂಮಿಯಲ್ಲಿ ಹೇಗೆ ಪ್ರತ್ಯೇಕವಾಗಿ ಇಡುತ್ತೀರಿ?
  • ಹೈಕೋರ್ಟಿನಲ್ಲಿ ರಾಜ್ಯ ಸರ್ಕಾರಕ್ಕೆ ಹಿನ್ನಡೆ; ಮುಂದಿನ ವಿಚಾರಣೆ ಆ.01ಕ್ಕೆ

ಬೆಂಗಳೂರು: ರಾಜ್ಯ ಸರ್ಕಾರದ ಮಹಾತ್ವಾಕಾಂಕ್ಷೆಯ ಕೆ.ಸಿ. ವ್ಯಾಲಿ ಯೋಜನೆ ಮೂಲಕ ಸಂಸ್ಕರಿತ ಕೊಳಚೆ ನೀರನ್ನು ಹರಿಸುವುದಕ್ಕೆ ಹೈಕೋರ್ಟ್ ಮಂಗಳವಾರ ಮಧ್ಯಂತರ ತಡೆಯಾಜ್ಞೆ ನೀಡಿದೆ. 

ಸಂಸ್ಕರಿತ ಕೊಳಚೆ ನೀರನ್ನು ಕೆರೆಗಳಿಗೆ ಹರಿಸುವ ಸರ್ಕಾರದ ಯೋಜನೆಯಲ್ಲಿ ನೀರಿನ ಶುದ್ಧತೆಯ ಬಗ್ಗೆ ಆತಂಕ ವ್ಯಕ್ತಪಡಿಸಿ ಶಾಶ್ವತ ನೀರಾವರಿ ಹೋರಾಟ ಸಮಿತಿ ವತಿಯಿಂದ ದಾಖಲಿಸಿದ್ದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನುಇಂದು ವಿಚಾರಣೆ ನಡೆಸಿದ  ಹೈಕೋರ್ಟ್ ವಿಶೇಷ ಪೀಠ ಅರ್ಜಿದಾರರ ಆತಂಕಕ್ಕೆ ಮನ್ನಣೆ ನೀಡಿದೆ.

 ಸರ್ಕಾರದ ಸಮರ್ಥನೆಗಳನ್ನು ತಿರಸ್ಕರಿಸಿದ ಪೀಠ,  ಕೊಳಚೆ ನೀರನ್ನು ಹರಿಸುವುದಕ್ಕೆ ತಡೆಯಾಜ್ಞೆ ನೀಡಿದ್ದು, ಮುಂದಿನ ವಿಚಾರಣೆಯನ್ನು ಆಗಸ್ಟ 1ಕ್ಕೆ ಮುಂದೂಡಿದೆ.

ಇದನ್ನೂ ಓದಿ: ‘ಕೆ.ಸಿ. ವ್ಯಾಲಿ’ ಎಂಬ ಸುಂದರ ಹೆಸರಿನ ಯೋಜನೆಯ ‘ಕೊಳಕು’ ಮುಖ

ರಾಜ್ಯ ಸರ್ಕಾರದ ವಕೀಲರು ಈ ಕೊಳಚೆ ನೀರು ಕುಡಿಯಲು ಅಥವಾ ವ್ಯವಸಾಯಕ್ಕೆ ಅಲ್ಲ, ಅಂತರ್ಜಲದ ಅಭಿವೃದ್ಧಿಗೆ ಎಂದು ತೀಳಿಸಿದಾಗ, ನ್ಯಾಯಾಧೀಶರು ಕುಡಿಯಲು ಮತ್ತು ವ್ಯವಸಾಯಕ್ಕೆ ಎಲ್ಲಿಂದ ತರುತ್ತೀರಿ? ಹಾಗೂ ಕೊಳಚೆ ಮತ್ತು ಶುದ್ಧನೀರನ್ನು ಭೂಮಿಯಲ್ಲಿ ಹೇಗೆ ಪ್ರತ್ಯೇಕವಾಗಿ ಇಡುತ್ತೀರಿ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ‘ಕೆ.ಸಿ. ವ್ಯಾಲಿ ನೀರಿನ ಗುಣಮಟ್ಟ ಅಧ್ಯಯನಕ್ಕೆ ಸಮಿತಿ ರಚಿಸಿ’

ಬೆಂಗಳೂರಿನ ಕೊಳಚೆ ನೀರನ್ನು ಸಂಸ್ಕರಿಸಿ ಕೋಲಾರದ ಕೆರೆಗಳಿಗೆ ಹರಿಸುವ ಕೆ.ಸಿ. ವ್ಯಾಲಿ ಯೋಜನೆ  ಬಗ್ಗೆ ಕೋಲಾರ-ಚಿಕ್ಕಬಳ್ಳಾಪುರದ ಶಾಶ್ವತ ನೀರಾವರಿ ಹೋರಾಟಗಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.  ಕಳೆದ ಜೂನ್ ತಿಂಗಳಿನಿಂದ ಪ್ರಾಯೋಗಿಕವಾಗಿ ನರಸಾಪುರದ ಬಳಿಯ ಲಕ್ಷ್ಮೀ ಸಾಗರ ಕೆರೆಗೆ ನೀರು ಹರಿಸಲಾಗುತ್ತಿದೆ.  

loader