ಬೆಂಗಳೂರು, [ಆ.22]:  ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ 13 ನೂತನ ಸಚಿವರಿಗೆ ಸರ್ಕಾರಿ ಬಂಗಲೆಗಳನ್ನು ಹಂಚಿಕೆ ಮಾಡಲಾಗಿದೆ. 4ನೇ ಬಾರಿಗೆ ಮುಖ್ಯಮಂತ್ರಿಯಾದರೂ ತಮ್ಮ ಲಕ್ಕಿ ರೇಸ್ ವ್ಯೂ ಕಾಟೇಜ್-2 ನಿವಾಸವನ್ನು ಬಿಎಸ್.ಯಡಿಯೂರಪ್ಪ ಬಿಡುತ್ತಿಲ್ಲ.

ಇದೀಗ ಬಿಎಸ್‌ವೈ ಮರಳಿ ರೇಸ್ ವ್ಯೂ ಕಾಟೇಜ್-2 ಬಂಗಲೆ ಪಡೆದುಕೊಂಡಿದ್ದಾರೆ. ಬಿ.ಎಸ್.ಯಡಿಯೂರಪ್ಪನವರು, ಮುಖ್ಯಮಂತ್ರಿಯಾದರೂ ಗೃಹ ಕಚೇರಿ ಕೃಷ್ಣಾದಲ್ಲಿ ನೆಲೆಸದೆ, ತಮ್ಮ ಹಳೇ ‘ರೇಸ್ ವ್ಯೂ ಕಾಟೇಜ್’ ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. 

ವಿಧಾನಸೌಧ, ವಿಕಾಸಸೌಧದಲ್ಲಿ ಕೊಠಡಿ ಹಂಚಿಕೆ: ನಿಮ್ ಸಚಿವರ ರೂಮ್ ಸಂಖ್ಯೆ ತಿಳ್ಕೊಳ್ಳಿ

ಇನ್ನುಳಿದಂತೆ  ಸಿಎಂ ಬಿಎಸ್ ವೈ ಮನೆ ಪಕ್ಕದಲ್ಲೇ ಇರುವ ರೇಸ್ ಕೋರ್ಸ್‌ ರಸ್ತೆಯ ರೇಸ್ ವ್ಯೂ ಕಾಟೇಜ್ - 1 ಅನ್ನು ಅಶ್ವಥ್ ನಾರಾಯಣ್‌  ಅವರಿಗೆ ನೀಡಲಾಗಿದೆ. ಇನ್ನು ಮಾಧುಸ್ವಾಮಿಗೆ ರೇಸ್ ವ್ಯೂ ಕಾಟೇಜ್ -4 ಹಂಚಿಕೆ ಮಾಡಲಾಗಿದೆ. ವಿ. ಸೋಮಣ್ಣ, ಸಿಟಿ ರವಿ, ಲಕ್ಷಣ್ ಸವದಿ, ಶ್ರೀರಾಮುಲುಗೆ 7 ಮಿನಿಸ್ಟರ್ ಕ್ವಾಟ್ರಸ್‌ನಲ್ಲಿ ಮನೆ ನೀಡಲಾಗಿದೆ. 

ಕಾವೇರಿ ನಿವಾಸ ಮುಟ್ಟದ ಸರ್ಕಾರ
ಪ್ರಸ್ತುತ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಇರುವ ಕಾವೇರಿ ನಿವಾಸವನ್ನು ಸರ್ಕಾರ ಹಂಚಿಕೆ ಮಾಡಿಲ್ಲ. ಈ ಹಿಂದೆ  ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಇದೇ ಕಾವೇರಿ ನಿವಾಸದಲ್ಲಿದ್ದರು. ನಂತರ 2019ರಲ್ಲಿ ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ಕಾವೇರಿ ನಿವಾಸವನ್ನು ಕೆ.ಜೆ.ಜಾರ್ಜ್ ಅವರಿಗೆ ನೀಡಲಾಗಿತ್ತು. ಆದ್ರೆ ಜಾರ್ಜ್ ಅವರು ತಮ್ಮ ಕಾವೇರಿ ಮನೆಯನ್ನು ಸಿದ್ದರಾಮಯ್ಯ ಅವರಿಗೆ ನೀಡಿದ್ದರು. ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯ ಅವರು ಪ್ರತಿಪಕ್ಷದ ನಾಯಕರಾದರೆ ಆಗ ಸರ್ಕಾರ ಅವರಿಗೆ ಒಂದು ಮನೆ ನೀಡಬೇಕಾಗುತ್ತದೆ.

ಕಾವೇರಿ ಶಾಪ’ : ಇದು ಸಿಎಂ ನಿವಾಸಕ್ಕೆ ಅಂಟಿಕೊಂಡಿರುವ ಶಾಪದ ಕಥೆ!

ಮತ್ತೆ ಲಕ್ಕಿ ಮನೆಗೆ ಬಿಎಸ್ ವೈ


ಹೌದು.. ರೇಸ್ ಕೋರ್ಸ್‌ ರಸ್ತೆಯ ರೇಸ್ ವ್ಯೂ ಕಾಟೇಜ್ - 1 ಒಂದು ರೀತಿಯಲ್ಲಿ ಬಿಎಸ್‍ವೈಗೆ ಇದು ಲಕ್ಕಿ ಮನೆ.  ಈ ಲಕ್ಕಿ ಮನೆಯಲ್ಲಿ ಉತ್ತಮವಾದ ಪರಿಸರ ವಾತಾವರಣ ಇದೆ. ಅಲ್ಲದೆ, ವಾಕಿಂಗ್ ಪಾಥ್, ಹುಲ್ಲು ಹಾಸು, ಬೃಹತ್ ಮರಗಳ ನೆರಳು ಈ ರೇಸ್ ಕೋರ್ಸ್ ನಿವಾಸದಲ್ಲಿ ಇದೆ. ಹೀಗಾಗಿ ಯಡಿಯೂರಪ್ಪ ಅವರಿಗೆ ಈ ಮನೆ ಇಷ್ಟ ಆಗಿದೆ. ಮುಖ್ಯವಾಗಿ 

ಈ ಹಿಂದೆಯೂ ಸಿಎಂ ಆಗಿದ್ದಾಗ ಯಡಿಯೂರಪ್ಪನವರು ಅದೇ ನಿವಾಸದಲ್ಲಿದ್ದರು. ಅಲ್ಲದೆ, 2004ರಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದಾಗಲೂ ಇದೇ ನಿವಾಸದಲ್ಲಿ ವಾಸವಾಗಿದ್ದರು. ಇದೇ ಮನೆಯಲ್ಲಿಯೇ ಇದ್ದಾಗ ಬಿಎಸ್‍ವೈ ಉಪ ಮುಖ್ಯಮಂತ್ರಿ ಮತ್ತು  ಮುಖ್ಯಮಂತ್ರಿಯಾಗಿದ್ದರು.

2008ರಲ್ಲಿ ಸಿಎಂ ಆದಾಗ ಯಡಿಯೂರಪ್ಪ ಇದೇ ಮನೆಯಲ್ಲಿ ಇದ್ದರು. ಈ ಮನೆಗೆ ಬಂದ ಮೇಲೆ ಸಿಎಂ ಸ್ಥಾನ ಸಿಕ್ಕಿತು ಎಂಬ ನಂಬಿಕೆ ಯಡಿಯೂರಪ್ಪ ಅವರಿಗೆ ಇದೆ. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪರಿಗೆ `ರೇಸ್ ವ್ಯೂ ಕಾಟೇಜ್’ ಅದೃಷ್ಟ ಮನೆ ಎಂದು ಹೇಳಲಾಗುತ್ತಿದೆ.

ಲಕ್ಕಿ ಮನೆ ಕೈತಪ್ಪಿಸಿದ್ದ HDK
ಸಮ್ಮಿಶ್ರ ಸರ್ಕಾರ ಬಂದ ಸಮಯದಲ್ಲಿ ಯಡಿಯೂರಪ್ಪ ವಿರೋಧ ಪಕ್ಷದ ನಾಯಕರಾಗಿದ್ದಾಗಲೂ ನನಗೆ ಇದೇ ಮನೆ ಬೇಕು ಎಂದು ಸಿಎಂ ಕುಮಾರಸ್ವಾಮಿಗೆ ಮನವಿ ಮಾಡಿದ್ದರು. ಆದರೆ, ಯಡಿಯೂರಪ್ಪನವರ ಮನವಿಯನ್ನು ತಿರಸ್ಕರಿಸಿ ಶಿವಾನಂದ ಸರ್ಕಲ್ ಬಳಿಯ ನಿವಾಸವನ್ನು ನೀಡಿದ್ದರು. 

ಆದರೆ, ಯಡಿಯೂರಪ್ಪ ಮಾತ್ರ ಶಿವಾನಂದ ಸರ್ಕಲ್ ಬಳಿ ನಿವಾಸಕ್ಕೆ ಹೋಗಿರಲಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿದ್ದ ಸಾರಾ ಮಹೇಶ್ ನನಗೆ ರೇಸ್ ಕೋರ್ಸ್ ಮನೆಯೇ ಬೇಕು ಎಂದು ಹಠ ಹಿಡಿದು, ಅದೇ ಮನೆ ಪಡೆದಿದ್ದರು. ಬದಲಾದ ಕಾಲ ಘಟ್ಟದಲ್ಲಿ ಮತ್ತೆ ಯಡಿಯೂರಪ್ಪ ಸಿಎಂ ಆಗಿದ್ದು, ಮಾಜಿ ಸಚಿವರಾಗಿದ್ದ ಸಾರಾ ಮಹೇಶ್ ಮನೆ ಖಾಲಿ ಮಾಡಬೇಕಾಗಿದೆ.