ಬೆಂಗಳೂರು, [ಆ.21]: ಕೊನೆಗೂ ರಾಜ್ಯ ಬಿಜೆಪಿ ಸರ್ಕಾರದ ಸಚಿವ ಸಂಪುಟ ರಚನೆಯಾಗಿದೆ.  ನಿನ್ನೆ [ಮಂಗಳವಾರ] ರಾಜಭವನದ ಗಾಜಿನ ಮನೆಯಲ್ಲಿ 17 ಶಾಸಕರು ಕ್ಯಾಬಿನೆಟ್ ಸಚಿವರುಳಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. 

ಆದ್ರೆ ಯಾರಿಗೆ ಯಾವ ಖಾತೆ ಎನ್ನುವುದು ಮಾತ್ರ ಇನ್ನು ಹಂಚಿಕೆಯಾಗಿಲ್ಲ.  ಹಾಗೂ ನೂತನ ಸಚಿವರುಗಳಿಗೆ ಸರ್ಕಾರಿ ನಿವಾಸಗಳು ಸಹ ಇನ್ನು ಫೈನಲ್ ಆಗಿಲ್ಲ. ರಾಜ್ಯದಲ್ಲಿ ಉಂಟಾಗಿರುವ ನೆರೆ ಪ್ರವಾಹಕ್ಕೆ ಮೊದಲು ಆಧ್ಯತೆ ನೀಡಿರುವ ಸರ್ಕಾರ, ನೂತನ ಸಚಿವರುಗಳೆಲ್ಲರೂ ಪ್ರವಾಹ ಪೀಡಿತ ಪ್ರದೇಶಗಳ ವೀಕ್ಷಣೆಗೆ ತೆರಳಿದ್ದಾರೆ.

ನೂತನ ಸಚಿವರನ್ನು ಸಂಪರ್ಕಿಸ್ಬೇಕಾ? ಇಲ್ಲಿದೆ ಸುಲಭ ಐಡಿಯಾ!

ಇತ್ತ ಸಿಎಂ ಯಡಿಯೂರಪ್ಪ ಅವರು ತಮ್ಮ 17 ಸಚಿವರುಗಳಿಗೆ ವಿಧಾನಸೌಧ ಹಾಗೂ ವಿಕಾಸಸೌಧದಲ್ಲಿ ಆಫೀಸ್ ಕೊಠಡಿಗಳನ್ನು ಹಂಚಿಕೆ ಮಾಡಿ ಇಂದು [ಬುಧವಾರ] ಆದೇಶ ಹೊರಡಿಸಿದ್ದಾರೆ. ಈ ಸಂಖ್ಯೆಯ ಕೊಠಡಿಗೆ ಹೋದರೆ ಸಚಿವರನ್ನು ನೋಡಬಹುದು.ಎಲ್ಲರಿಗೂ ವಿಧಾನಸೌಧದಲ್ಲಿ ಪ್ರವೇಶವಿರುವುದಿಲ್ಲ. ಇದಕ್ಕೆ ಸಚಿವರ ಕೊಠಡಿಯಿಂದ ಅನುಮತಿ ಪಾಸ್ ಪಡೆದಿರಬೇಕು. ಯಾರಿಗೆ ಎಷ್ಟನೇ ನಂಬರಿನ ಕೊಠಡಿ? ಈ ಕೆಳಗಿನಂತಿದೆ ಪಟ್ಟಿ.


1.  ಗೋವಿಂದ ಕಾರಜೋಳ-340,340ಎ-ವಿಧಾನಸೌಧ
2.  ಅಶ್ವತ್ಥ್ ನಾರಾಯಣ್-242,243-ವಿಧಾನಸೌಧ
3. ಲಕ್ಷ್ಮಣ್ ಸವದಿ-301,301ಎ-ವಿಧಾನಸೌಧ
4. ಕೆ.ಎಸ್.ಈಶ್ವರಪ್ಪ-329,329ಎ-ವಿಧಾನಸೌಧ
5. ಆರ್.ಅಶೋಕ್-317,317ಎ-ವಿಧಾನಸೌಧ
6. ಜಗದೀಶ್ ಶೆಟ್ಟರ್-315,315ಎ-ವಿಧಾನಸೌಧ
7. ಶ್ರೀರಾಮುಲು-328,328ಎ-ವಿಧಾನಸೌಧ
8. ಸುರೇಶ್ ಕುಮಾರ್-262,262ಎ-ವಿಧಾನಸೌಧ
9. ವಿ.ಸೋಮಣ್ಣ-314,314ಎ-ವಿಧಾನಸೌಧ
10. ಸಿ.ಟಿ.ರವಿ-344,344ಎ-ವಿಧಾನಸೌಧ
11. ಬಸವರಾಜ ಬೊಮ್ಮಾಯಿ-327,327ಎ-ವಿಧಾನಸೌಧ
12. ಕೋಟಾ ಶ್ರೀನಿವಾಸ್ ಪೂಜಾರಿ-336,336ಎ-ವಿಧಾನಸೌಧ
13.  ಮಾಧುಸ್ವಾಮಿ-316,316ಎ-ವಿಧಾನಸೌಧ
14. ಸಿ.ಸಿ.ಪಾಟೀಲ್-305,305ಎ-ವಿಧಾನಸೌಧ
15.  ಎಚ್.ನಾಗೇಶ್-342-343-ವಿಕಾಸಸೌಧ
16. ಪ್ರಭು ಚವ್ಹಾಣ್-143-146-ವಿಕಾಸಸೌಧ
17. ಶಶಿಕಲಾ ಜೊಲ್ಲೆ-ನಿಪ್ಪಾಣಿ-141,142-ವಿಕಾಸಸೌಧ