Asianet Suvarna News Asianet Suvarna News

ಮೂಲೆ ಗುಂಪಾಗಿದೆ ಸಿದ್ದರಾಮಯ್ಯ ಸರ್ಕಾರದ ಈ ಯೋಜನೆ

ಸಿದ್ದರಾಮಯ್ಯ ಸರ್ಕಾರ ಆರಂಭ ಮಾಡಿದ್ದ ಯೋಜನೆಯೊಂದು ಈ ಸರ್ಕಾರದ ಅವಧಿಯಲ್ಲಿ ಸ್ಥಗಿತವಾಗಿದೆ. ಇದರಿಂದ ವಿತರಣೆಯಾಗಬೇಕಿದ್ದ ಕಿಟ್ ಗಳು ತುಕ್ಕು ಹಿಡಿದಿವೆ. 

Karnataka governments Anila Bhagya Scheme Discontinued
Author
Bengaluru, First Published Jul 11, 2018, 9:23 AM IST

ಕೆ.ಎಂ ಮಂಜುನಾಥ್

ಬೆಂಗಳೂರು :  ಬಡ ಕುಟುಂಬಗಳನ್ನು ಸೀಮೆಎಣ್ಣೆ ಬಳಕೆಯಿಂದ ದೂರ ಇರಿಸಿ ಹೊಗೆಮುಕ್ತಗೊಳಿಸಬೇಕು ಎಂಬ ಆಶಯದಿಂದ ಹಿಂದಿನ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದ್ದ ‘ಅನಿಲ ಭಾಗ್ಯ ಯೋಜನೆ’ಯ ಸುಮಾರು 9 ಲಕ್ಷಕ್ಕೂ ಅಧಿಕ ಕಿಟ್‌ಗಳು ಫಲಾನುಭವಿಗಳಿಗೆ ತಲುಪದೆ ಗೋದಾಮುಗಳಲ್ಲಿ ತುಕ್ಕು ಹಿಡಿಯುತ್ತಿದೆ. ಕಿಟ್‌ಗಳನ್ನು ಇನ್ನೇನು ವಿತರಿಸಬೇಕೆನ್ನುವಷ್ಟರಲ್ಲಿಯೇ ಚುನಾವಣಾ  ನೀತಿ ಸಂಹಿತೆಯಿಂದಾಗಿ ಸ್ಥಗಿತಗೊಂಡಿತು.

ಚುನಾವಣೆ ಬಳಿಕ ವಿತರಿಸಲು ಈಗಿನ ಜೆಡಿಎಸ್ -ಕಾಂಗ್ರೆಸ್ ಸರ್ಕಾರದ ಮೈತ್ರಿ ಸರ್ಕಾರ ಈ ಕುರಿತು ಯಾವುದೇ ನಿಲುವು ತೆಗೆದುಕೊಂಡಿಲ್ಲ. ಜೊತೆಗೆ ಬಜೆಟ್‌ನಲ್ಲೂ ಪ್ರಸ್ತಾಪವಾಗಿಲ್ಲ. ಹೀಗಾಗಿ ಕಿಟ್‌ಗಳು ಗೋದಾಮಿನಲ್ಲೇ ಉಳಿದಿದ್ದು, ಕೋಟ್ಯಂತರ ರು. ವ್ಯಯಿಸಿರುವ ಈ ಬೃಹತ್ ಯೋಜನೆಯೂ ಮೂಲೆಗುಂಪಾಗು ವುದೋ ಎಂಬ ಆತಂಕ ಫಲಾನುಭವಿಗಳನ್ನು ಕಾಡುತ್ತಿದೆ. 

ಎಷ್ಟೆಷ್ಟು ಫಲಾನುಭವಿಗಳು?: ಅನಿಲ ಭಾಗ್ಯಯೋಜನೆಗೆ ಅರ್ಹ ಒಟ್ಟು 27,55,219 ಬಿಪಿಎಲ್ ಕುಟುಂಬಗಳು ರಾಜ್ಯದಲ್ಲಿವೆ. ಈ ಪೈಕಿ ಮೊದಲ ಹಂತದಲ್ಲಿ ಯೋಜನೆ ಜಾರಿಗೆ 9,99,994 ಕುಟುಂಬಗಳ ಗುರಿ  ಇಟ್ಟುಕೊಳ್ಳಲಾಗಿತ್ತು. 9,94,450 ಬಿಪಿಎಲ್ ಕುಟುಂಬಗಳು ಲಾಗಿನ್ ಆದವು. ಇದರಲ್ಲಿ 9,71,214 ಕುಟುಂಬಗಳನ್ನು ಅಂತಿಮಗೊಳಿಸಲಾಯಿತು. ಅಂತೆಯೇ ರಾಜ್ಯದಲ್ಲಿ ಎಲ್ಲ ಜಿಲ್ಲೆಗಳ ಎಲ್ಲ ತಾಲೂಕುಗಳಿಗೆ ಅರ್ಹ ಕುಟುಂಬಗಳಿಗೆ ಅನಿಲ ಭಾಗ್ಯ ಯೋಜನೆಯಡಿ 1500 ಮೌಲ್ಯದ ಸ್ಟವ್‌ಗಳನ್ನು ಕಳುಹಿಸಿಕೊಡಲಾಯಿತು. 

ಸಿಲಿಂಡರ್ ಪೂರೈಕೆಗೆ ಕ್ರಮ ವಹಿಸಲಾಗಿತ್ತು. ಏತನ್ಮಧ್ಯೆ ಚುನಾವಣೆ ಹತ್ತಿರವಾಗುತ್ತಿದೆ ಎಂಬ ಅರಿವಿದ್ದರೂ ಸರ್ಕಾರ ಯೋಜನೆ ತ್ವರಿತ ಜಾರಿಗೆ ಕ್ರಮ ವಹಿಸಲಿಲ್ಲ.  ಅಧಿಕಾರಿಗಳು ಕೂಡ ಕಾಳಜಿ ತೆಗೆದು ಕೊಳ್ಳಲಿಲ್ಲ. ಚುನಾವಣೆ ಘೋಷಣೆ ಯಾಗಿದ್ದರಿಂದ ವಿತರಣೆ ನೆನೆಗುದಿಗೆ ಬಿತ್ತು. 

ಏನಿದು ಯೋಜನೆ?: ಕೇಂದ್ರ ಸರ್ಕಾರದ ಉಜ್ವಲ ಯೋಜನೆ ಯಂತೆಯೇ ರಾಜ್ಯದಲ್ಲಿ ಹಿಂದಿನ ಕಾಂಗ್ರೆಸ್ ಸರ್ಕಾರ ‘ಅನಿಲ ಭಾಗ್ಯ ಯೋಜನೆ’ಯನ್ನು ಜಾರಿಗೊಳಿ ಸಿತು. ಉಜ್ವಲ ಯೋಜನೆಯಲ್ಲಿ ಕೇಂದ್ರ ಒಂದು ಸಿಲಿಂಡರ್ ಹಾಗೂ ಸ್ಟವ್ ನೀಡಿದರೆ, ರಾಜ್ಯ ಸರ್ಕಾರ ಪ್ರತಿ ಕುಟುಂಬಕ್ಕೆ ಎರಡು ಗ್ಯಾಸ್ ಸಿಲಿಂಡರ್ ಹಾಗೂ ಒಂದು ಸ್ಟವ್ ನೀಡಲು ನಿರ್ಧರಿಸಿತು. 

ಸರ್ಕಾರದ ಲೆಕ್ಕಾಚಾರದ ಪ್ರಕಾರ ಒಂದು ಕುಟುಂಬಕ್ಕೆ2600 ವ್ಯಯಿಸ ಬೇಕಿತ್ತು. ಮೊದಲ ಬಾರಿಗೆ ಗ್ಯಾಸ್ ಉಚಿತವಾಗಿ ನೀಡಲು ಸಹ ತೀರ್ಮಾನಿಸಲಾಗಿತ್ತು. ನ್ಯಾಯಬೆಲೆ ಅಂಗಡಿಗಳಲ್ಲಿ ಸೀಮೆಎಣ್ಣೆ ಪೂರೈಕೆಯನ್ನು ಸ್ಥಗಿತಗೊಳಿಸಬೇಕು ಎಂಬುದು ಮುಖ್ಯ ಉದ್ದೇಶವಾಗಿತ್ತಲ್ಲದೆ, ಎರಡು ಹಂತದಲ್ಲಿ ಯೋಜನೆಯನ್ನು ಜಾರಿಗೊಳಿಸುವ ನಿರ್ಧಾರಕ್ಕೆ ಬಂತು. ಅಂತೆಯೇ ಅಂದಿನ ಮುಖ್ಯಮಂತ್ರಿ ಸಿದ್ದ ರಾಮಯ್ಯ ಅವರ ಭಾವಚಿತ್ರ ಇರುವ ಸ್ಟವ್‌ಗಳನ್ನು ರಾಜ್ಯದ ಎಲ್ಲ ತಾಲೂಕುಗಳಿಗೆ ಪೂರೈಸಲಾಯಿತು. 

Follow Us:
Download App:
  • android
  • ios