ಬೆಂಗಳೂರು, (ಅ.20): ಮದ್ಯ ಪ್ರಿಯರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಲು ಮುಂದಾಗಿದೆ. ಇನ್ಮುಂದೆ ಎಣ್ಣೆ ಕುಡಿಯಲು ಬಾರ್‌ಗೆ ಹೋಗ್ಬೇಕಿಲ್ಲ. ಮನೆ ಬಾಗಿಲಿಗೇ ಬರುತ್ತದೆ.

ಹೌದು, ಇನ್ನು ಮುಂದೆ ಆನ್‌ಲೈನ್‌ನಲ್ಲಿ ಮದ್ಯ ಬುಕ್‌ ಮಾಡಿ ಮನೆಗೆ ತರಿಸಿಕೊಳ್ಳಬಹುದಾಗಿದೆ. ಮಹಾರಾಷ್ಟ್ರ ಸರ್ಕಾರವು ಮದ್ಯವನ್ನು ಮನೆ-ಮನೆಗೆ ತಲುಪಿಸುವ ನಿರ್ಣಯ ಕೈಗೊಂಡಿದ್ದರ ಬಗ್ಗೆ ಇನ್ನೂ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ.

ಇದರ ಬೆನ್ನಲ್ಲೇ ಕರ್ನಾಟಕ ಸರ್ಕಾರ ಆನ್ ಲೈನ್ ಮದ್ಯ ಮಾರಾಟ ಯೋಜನೆಯನ್ನು ಜಾರಿಗೆ ತರಲು ಚಿಂತನೆ ನಡೆಸಿದೆ. ಒಂದು ವೇಳೆ ಆನ್ ಲೈನ್ ಮದ್ಯ ಮಾರಟವನ್ನು ರಾಜ್ಯ ಸರ್ಕಾರ ಜಾರಿಗೆ ತಂದರೆ, ಗ್ರಾಹಕರು ಇನ್ನು ಮುಂದೆ ಮದ್ಯವನ್ನು ಆನ್‌ಲೈನ್‌ನಲ್ಲೇ ಬುಕ್‌ ಮಾಡಿ ಖರೀದಿ ಮಾಡಬಹುದಾಗಿದೆ

ಮನೆ ಬಾಗಿಲಿಗೆ ಮದ್ಯ, ಕುಡುಕರಿಗೆ ಬಂಪರ್ ಕೊಡುಗೆ

 . ಈ ಮದ್ಯ ಮಾರಾಟದ ಬಗ್ಗೆ ಹಾಲಿ ಇರುವ ಕಾನೂನಿಗೆ ತಿದ್ದುಪಡಿ ತರಲು ರಾಜ್ಯ ಸರ್ಕಾರ ಮುಂದಾಗಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಮುಂದಿನ ಬೆಳಗಾವಿ ಅಧಿವೇಶನದಲ್ಲಿ ಕಾಯ್ದೆಯನ್ನು ಮಂಡಿಸಲು ಸರ್ಕಾರ ಯೋಜಿಸಿದೆ.