ಕುಡುಕರಿಗೆ ಇದೊಂದು ಸಿಹಿಸುದ್ದಿ ಇದೆ. ಇನ್ನು ಕುಡುಕರ ಮನೆ ಬಾಗಿಲಿಗೆ ಎಣ್ಣೆ ಡಿಲೆವರಿ ಆಗುತ್ತದೆ. ಕ್ಯೂ ದಲ್ಲಿ ನಿಂತು ಕಾದು ಮದ್ಯ ಖರೀದಿ ಮಾಡಿಕೊಂಡು ಬರಬೇಕಾದ ತಾಪತ್ರಯ ತಪ್ಪುತ್ತದೆ.

ನಾಗಪುರ(ಅ.14) ಮಹಾರಾಷ್ಟ್ರ ಸರಕಾರ ಕುಡುಕರಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ. ಮನೆ ಬಾಗಿಲಿಗೆ ಇನ್ನು ಮುಂದೆ ಮದ್ಯ ಸರಬರಾಜು ಮಾಡಲು ಅವಕಾಶ ನೀಡುವ ಚಿಂತನೆ ನಡೆಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಹಾರಾಷ್ಟ್ರ ಅಬಕಾರಿ ಖಾತೆ ಸಚಿವ ಚಂದ್ರಶೇಖರ್ ಬವಂಕುಲೆ ಈ ಬಗ್ಗೆ ಮಾಹಿತಿ ನೀಡಿದ್ದು ಇದು ಅಬಕಾರಿ ಇಲಾಖೆಯಲ್ಲಿನ ಹೊಸ ಬದಲಾವಣೆಗೆ ನಾಂದಿಯಾಗಲಿದ್ದು ದೇಶದ ಇತಿಹಾಸದಲ್ಲೇ ಮಹಾರಾಷ್ಟ್ರ ಮೊದಲ ರಾಜ್ಯವಾಗಲಿದೆ ಎಂದು ಹೇಳಿದ್ದಾರೆ.

ಕುಡಿದು ವಾಹನ ಚಾಲನೆ ಮಾಡುವುದಕ್ಕೆ ಬ್ರೇಕ್ ಹಾಕುವುದು ಮುಖ್ಯ ಉದ್ದೇಶ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದ ಇ ಕಾಮರ್ಸ್ ಸಂಸ್ಥೆಗಳ ರೀತಿಯಲ್ಲಿಯೇ ಕೆಲಸ ಮಾಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದ್ದಾರೆ. ಮದ್ಯ ಆರ್ಡರ್ ಮಾಡುವವರು ಕೆಲ ದಾಖಲೆಗಳನ್ನು ಸಲ್ಲಿಕೆ ಮಾಡಬೇಕಾಗುತ್ತದೆ ಎಂಬ ಮಾಹಿತಿಯನ್ನು ಇದೇ ಸಂದರ್ಭದಲ್ಲಿ ನೀಡಿದ್ದಾರೆ.