Asianet Suvarna News Asianet Suvarna News

ನ.3ರಂದು ಈ 5 ಕ್ಷೇತ್ರಗಳಲ್ಲಿ ಸರ್ಕಾರಿ ರಜೆ ಘೋಷಿಸಿದ ರಾಜ್ಯ ಸರ್ಕಾರ

ರಾಜ್ಯ ಸರ್ಕಾರ ನ.3ರಂದು ಈ 5 ಕ್ಷೇತ್ರಗಳಲ್ಲಿ ಸರ್ಕಾರಿ ರಜೆ ಘೋಷಿಸಿದೆ. ಯಾವವು ಆ ಐದು ಕ್ಷೇತ್ರ? ಏಕೆ ರಜೆ? ಇಲ್ಲಿದೆ ವಿವರ.

Karnataka Government announces holiday on November 3 for byelection
Author
Bengaluru, First Published Oct 30, 2018, 9:57 PM IST

ಬೆಂಗಳೂರು, [ಅ.30]: ಉಪಚುನಾವಣೆ ಹಿನ್ನೆಲೆಯಲ್ಲಿ ನವೆಂಬರ್​ 3ರಂದು 5 ಕ್ಷೇತ್ರಗಳಲ್ಲಿ ಸರ್ಕಾರಿ ರಜೆ ಘೋಷಣೆ ಮಾಡಿ ಇಂದು [ಮಂಗಳವಾರ] ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ..

ಬಳ್ಳಾರಿ, ಶಿವಮೊಗ್ಗ, ಮಂಡ್ಯ ಲೋಕಸಭಾ ಕ್ಷೇತ್ರ ಹಾಗೂ ರಾಮನಗರ ವಿಧಾನಸಭಾ ಕ್ಷೇತ್ರಗಳಿಗೆ ನ.03ರಂದು ಮತದಾನ ನಡೆಯಲಿದೆ. ಇದ್ರಿಂದ ಈ ಐದು ಕ್ಷೇತ್ರಗಳ ವ್ಯಾಪ್ತಿಗೆ ಬರುವ ಸರ್ಕಾರಿ ಶಾಲಾ-ಕಾಲೇಜು, ಖಾಸಗಿ, ಅನುದಾನಿತ ಶಾಲೆ ಹಾಗೂ ಸರ್ಕಾರಿ ಕಚೇರಿ ಹಾಗೂ ಖಾಸಗಿ ಕಂಪನಿಗಳಿಗೆ ನ.03ರಂದು ರಜೆ ಘೋಷಣೆ ಮಾಡಿದೆ.

ನವೆಂಬರ್ 2, 3 ರಂದು ಶಾಲೆಗಳಿಗೆ ರಜೆ ಘೋಷಣೆ

ಶ್ರೀರಾಮುಲು ಅವರ ರಾಜೀನಾಮೆಯಿಂದ ಬಳ್ಳಾರಿ ಲೋಕಸಭೆಗೆ ಉಪಚುನಾವಣೆ ನಡೆಯಲಿದೆ. ಇನ್ನು ಶಿವಮೊಗ್ಗಕ್ಕೆ ಬಿಎಸ್ ಯಡಿಯೂರಪ್ಪ ಹಾಗೂ ಮಂಡ್ಯ ಲೋಕಸಭಾ ಸದಸ್ಯ ಸ್ಥಾನಕ್ಕೆ ಪುಟ್ಟರಾಜು ರಾಜೀನಾಮೆ ನೀಡಿದ್ದಾರೆ. 

ನವೆಂಬರ್‌ನಲ್ಲಿ 11 ದಿನ ಬ್ಯಾಂಕ್ ರಜಾ: ಪ್ಲ್ಯಾನ್ ಇಲ್ದಿದ್ರೆ ಕೆಡಲಿದೆ ಮಜಾ!

ಇನ್ನು ಸಿದ್ದು ನ್ಯಾಮೇಗೌಡ ಅಕಾಲಿಕ ಮರಣದಿಂದ ಜಮಖಂಡಿ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆದರೆ, ಸಿಎಂ ಕುಮಾರಸ್ವಾಮಿ ಅವರ ರಾಜೀನಾಮೆಯಿಂದ ರಾಮನಗರ  ವಿಧಾನಸಭೆ ಕ್ಷೇತ್ರಕ್ಕೆ ಇದೇ ನವೆಂಬರ್ 3ರಂದು ಮತದಾನ ನಡೆಯಲಿದೆ. ನವೆಂಬರ್ 6ರಂದು ಈ ಎಲ್ಲಾ ಉಪಚುನಾವಣೆಯ ಮತ ಎಣಿಕೆ ನಡೆಯಲಿದೆ.

Follow Us:
Download App:
  • android
  • ios