ಇದೇ ನವೆಂಬರ್ 2, 3 ರಂದು ಎರಡು ದಿಗಳ ಕಾಲ ಎಲ್ಲಾ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಎಲ್ಲಿ?ಯಾಕೆ? ಇಲ್ಲಿದೆ ವಿವರ.

ಮಂಡ್ಯ, [ಅ.27]: ಐದು ಕ್ಷೇತ್ರಗಳಿಗೆ ನಡೆಯುತ್ತಿರೋ ರಾಜ್ಯ ಉಪ ಚುನಾವಣೆಗೆ ಇನ್ನು ಆರೇ ದಿನ ಬಾಕಿ. ಮೂರು ಪಕ್ಷಗಳ ಘಟಾಘಟಿ ನಾಯಕರು ಭರ್ಜರಿ ಪ್ರಚಾರ ನಡೆಸ್ತಿದ್ದಾರೆ.. 

ಮಂಡ್ಯ ಲೋಕಸಭಾ ಉಪಚುನಾವಣೆ ಹಿನ್ನೆಲೆಯಲ್ಲಿ ಇದೇ ನವೆಂಬರ್ 2 ಹಾಗೂ 3ರಂದು ಎರಡು ದಿನ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ಚುನಾವಣಾ ಕರ್ತವ್ಯಕ್ಕೆ ಶಿಕ್ಷಕರ ನಿಯೋಜನೆ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯ ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳಿಗೆ ರಜೆ ಘೋಷಣೆ ಮಾಡಿ ಡಿಡಿಪಿಐ ಆದೇಶ ಹೊರಡಿಸಿದ್ದಾರೆ.

ಈ ಹಿಂದೆ ಜೆಡಿಎಸ್ ನ ಪುಟ್ಟರಾಜು ಅವರು ಮಂಡ್ಯ ಲೋಕಸಭಾ ಸದಸ್ಯರಾಗಿದ್ದರು. ಆದ್ರೆ 2018ರ ವಿಧಾನಸಭಾ ಚನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಇದ್ರಿಂದ ಮಂಡ್ಯ ಲೋಕಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು.

ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಇದೇ ನವೆಂಬರ್ 3ರಂದು ಮತದಾನ ನಡೆಯಲಿದ್ದು,ನವೆಂಬರ್ 6ರಂದು ಫಲಿತಾಂಶ ಹೊರಬೀಳಿದೆ.