ಬೆಂಗಳೂರು[ಜು. 22]  ಬನ್ನಿ ಅಥವಾ ಅನರ್ಹರಾಗಲು ಸಿದ್ಧರಾಗಿ ಹೀಗೆಂದು ಟ್ರಬಲ್ ಶೂಟರ್ ಎಂದು ಕರೆಸಿಕೊಂಡಿರುವ ಡಿಕೆ ಶಿವಕುಮಾರ್ ಗುಡುಗಿದ್ದಾರೆ.

ಮಧ್ಯರಾತ್ರಿ ಯಾಗುತ್ತಿದ್ದರೂ ಸದನದಲ್ಲಿ ಕಲಾಪ ಮುಂದುವರಿದಿದೆ. ವಿಶ್ವಾಸ ಮತ ಯಾಚನೆ ನಡೆಯಲೇ ಬೇಕು ಎಂದು ಬಿಜೆಪಿ ಪಟ್ಟುಹಿಡಿದಿದ್ದರೆ, ಕಾಂಗ್ರೆಸ್-ಜೆಡಿಎಸ್ ಶಾಸಕರು ನಾಳೆಗೆ ಮುಂದೂಡಲು ಹರಸಾಹಸ ಪಡುತ್ತಿದ್ದಾರೆ.

ಕುಲಗೆಟ್ಟ ಸೋಶಿಯಲ್ ಮೀಡಿಯಾ? HDK ನಕಲಿ ರಾಜೀನಾಮೆ ಪತ್ರ ವೈರಲ್!

ಈ ನಡುವೆ ಸುದ್ದಿಗಾರರೊಂದಿಗೆ ಮಾತನಾಡಿದ, ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಬಂಡಾಯ ಶಾಸಕರಿಗೆ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ. ಮುಂಬೈಯಲ್ಲಿದ್ದೀರೋ, ಲೋನವಾಲದಲ್ಲಿದ್ದೀರೋ, ನೀವೆಲ್ಲಿದ್ದೀರೋ, ನಾಳೆ 11 ಗಂಟೆಗೆ ಸದನಕ್ಕೆ ಬರಬೇಕು. ಇಲ್ಲದಿದ್ದರೆ ಅನರ್ಹರಾಗಲು ಸಿದ್ಧರಾಗಿ ಎಂದಿದ್ದಾರೆ.

ಇದಕ್ಕೆ ದೂರವಾಣಿ ಮೂಲಕ ಸುವರ್ಣನ್ಯೂಸ್ ಗೆ ಪ್ರತಿಕ್ರಿಯಿಸಿದ ಎಚ್. ವಿಶ್ವನಾಥ್, ನಾವ್ಯಾವ ಬೆದರಿಕೆಗೆ ಬಗ್ಗುವವರಲ್ಲ, ಡಿಕೆ ಶಿವಕುಮಾರ್ ಅವರ ಇತಿಹಾಸ ನಮಗೆ ಗೊತ್ತಿದೆ ಎಂದು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.