Asianet Suvarna News Asianet Suvarna News

ಕುಲಗೆಟ್ಟ ಸೋಶಿಯಲ್ ಮೀಡಿಯಾ? HDK ನಕಲಿ ರಾಜೀನಾಮೆ ಪತ್ರ ವೈರಲ್!

ದೋಸ್ತಿ ಸರ್ಕಾರ ಮತ್ತು ಬಿಜೆಪಿ ನಡುವೆ ವಿಶ್ವಾಸದ ಕದನ ನಡೆಯುತ್ತಿದ್ದರೆ ಇನ್ನೊಂದು ಕಡೆ ಸಿಎಂ ಕುಮಾರಸ್ವಾಮಿ ರಾಜೀನಾಮೆ ನೀಡಿದ್ದಾರೆ ಎಂಬ ನಕಲಿ ಪತ್ರವೊಂದು ವೈರಲ್ ಆಗಿದೆ. ನಮ್ಮ ಸೋಶಿಯಲ್ ಮೀಡಿಯಾ ಮನಸ್ಥಿತಿ ಎಲ್ಲಿಗೆ ಬಂದಿದೆ ಎಂಬುದನ್ನು ಪ್ರಶ್ನೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ.

Karnataka Floor test CM HDK Fake resignation Letter Viral in Social Media
Author
Bengaluru, First Published Jul 22, 2019, 10:08 PM IST

ಬೆಂಗಳೂರು[ಜು. 22] ಇದು ಅಪ್ಪಟ ಸುಳ್ಳು ಸುದ್ದಿ... ಸಂವಿಧಾನಾತ್ಮಕವಾಗಿರುವ ಸಿಎಂ ಹುದ್ದೆಗೆ ಅದರದ್ದೇ ಆದ ಗೌರವ ಇದೆ. ಆದರೆ ನಮ್ಮ ಸೋಶಿಯಲ್ ಮೀಡಿಯಾ ಎಲ್ಲಿಗೆ ಬಂದಿದೆ ಎಂದರೆ ರಾಜಕೀಯ ಗೊಂದಲಗಳು ನಡೆಯುತ್ತಿರುವುದರಲ್ಲಿಯೂ ಕಿಡಿಗೇಡಿತನ ಮಾಡಿದೆ.

ಕಳೆದ 5 ದಿನಗಳಿಂದ ವಿಶ್ವಾಸ ಮತದ ಚರ್ಚೆ ನಡೆಯುತ್ತಿದ್ದರೂ ಸ್ನ ಯಾವುದೇ ತೀರ್ಮಾನಕ್ಕೆ ಸದನ ಬಂದಿಲ್ಲ. ಇದೆಲ್ಲದರ ನಡುವೆ ಸಿಎಂ ಕುಮಾರಸ್ವಾಮಿ ರಾಜೀನಾಮೆ ಕೊಟ್ಟಿದ್ದಾರೆ ಎಂಬ ರೀತಿಯ ಪತ್ರ ಸೃಷ್ಟಿ ಮಾಡಿ ಹರಿಯಬಿಡಲಾಗಿದೆ.

ನಾನು JDS ಬಿಟ್ಟಿದ್ದೇಕೆ? ಸದನದಲ್ಲಿ ಸಿದ್ದರಾಮಯ್ಯ ಹೇಳಿದ ಇತಿಹಾಸದ ಗುಟ್ಟು

ಸಿಎಂ ಕುಮಾರಸ್ವಾಮಿ ರಾಜ್ಯಪಾಲ ವಿ.ಆರ್.ವಾಲಾ ಉಲ್ಲೇಖಿಸಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಿದ್ದೇನೆ ಎಂದು ಬರೆದಿರುವ ಪತ್ರ ವೈರಲ್ ಆಗಿದೆ. ಸ್ವತಃ ಕುಮಾರಸ್ವಾಮಿ ಅವರ ಕೈಗೆ ಈ ಪತ್ರ ಬಂದು ತಲುಪಿದ್ದು ಅವರನ್ನೇ ಬೆಚ್ಚಿ ಬೀಳಿಸಿದೆ.

ಸೋಶಿಯಲ್ ಮೀಡಿಯಾ ಅದು ಯಾವ ಪರಿ ಕುಲಗೆಟ್ಟು ಹೋಗಿದೆ ಎನ್ನುವುದಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಇನ್ನೊಂದು ಬೇಕಿಲ್ಲ. ಜನರನ್ನು ದಿಕ್ಕು ತಪ್ಪಿಸುವ ಅಥವಾ ಈ ರೀತಿ ಕಿಡಗೇಡಿತನ ಮಾಡುವ ಸುದ್ದಿಗಳನ್ನು ಬಹಳ ಜಾಗರೂಕತೆಯಿಂದ ನಿರ್ವಹಿಸಬೇಕು.

Follow Us:
Download App:
  • android
  • ios