ಬೆಂಗಳೂರು[ಜು. 19] ಸರ್ಕಾರ ಉಳಿಯುತ್ತೆ ಎನ್ನುವ ವಿಶ್ವಾಸ ಇಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕರೊಬ್ಬರೆ ಹೇಳಿದ್ದಾರೆ. ರೆಬಲ್ ಶಾಸಕರು ವಾಪಸ್ ಬೆಂಬಲಕ್ಕೆ ಬರ್ತಾರೆ ಅನ್ನೋ ವಿಶ್ವಾಸ ಉಳಿದುಕೊಂಡಿಲ್ಲ ಎಂದು ಶಾಸಕ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಸರ್ಕಾರ ಎಲ್ಲ ವಿಚಾರವನ್ನು ಹೇಳಬೇಕಿದೆ. ಆ ಕಾರಣಕ್ಕಾಗಿ ಚರ್ಚೆ ಮಾಡುತ್ತಿದ್ದೇವೆ. ಸೋಮವಾರ ಸಂಜೆ ವಿಶ್ವಾಸ ಮತ ಯಾಚನೆಗೆ ಮತದಾನ ಆಗಲಿದೆ.  ರೆಬಲ್ ಶಾಸಕರ ಬಗ್ಗೆ ದೂರು ನೀಡಬಹುದು ಎಂದು ಸ್ಪೀಕರ್ ಹೇಳಿದ್ದಾರೆ ಎಂಬ ಮಾಹಿತಿಯನ್ನು ನೀಡಿದರು.

ಸದನದಲ್ಲಿ ಎಂಥಾ ಮಾತು.. ದುಡ್ಡು ಕೊಡ ಕಾಲದಲ್ಲಿ ನೀನೇನು ಮಾಡ್ತಿದ್ದೆ? ಕುಟುಂಬದವ್ರು ಕೇಳ್ತಾರೆ!

ರಕ್ತ ಸಂಬಂಧಿಗಳು ದೂರು ನೀಡಬಹುದು ಎಂಬ ಅವಕಾಶವೂ ಇದೆ. ರಮೇಶ್ ಜಾರಕಿಹೊಳಿ ನನ್ನ ಸಂಪರ್ಕದಲ್ಲಿ ಇಲ್ಲ. ಸ್ಪೀಕರ್ ಗೆ ದೂರು ನೀಡುವ ಸಂದರ್ಭ ಇಲ್ಲ. ಅಂತ ಸನ್ನಿವೇಶ ಇಲ್ಲ. ಸಂದರ್ಭ ಬಂದರೆ ನೋಡೋಣ ಎಂದು ಹೇಳಿ ಹೊರಟರು.