ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಗೆ ಮತ್ತೆ ಸಂಕಷ್ಟ

Karnataka Control Of Organised Crime Act  Against  Janardhan Reddy
Highlights

ಜನರ್ದಾನ ರೆಡ್ಡಿ, ಪತ್ನಿ ಲಕ್ಷಿ ಅರುಣಾ, ಶಾಸಕರಾದ ಆನಂದ್ ಸಿಂಗ್, ನಾಗೇಂದ್ರ, ಸತೀಶ್ ಸೈಲ್,  ಸೇರಿದಂತೆ 25 ಮಂದಿ ವಿರುದ್ಧ ಪಿಸಿಆರ್ ದೂರು ದಾಖಲಾಗಿದೆ.

ಬೆಂಗಳೂರು(ಮಾ.02): ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಗೆ ಮತ್ತೆ ಸಂಕಷ್ಟ ಶುರುವಾಗಿದೆ. ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಕಾ(ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ) ಕಾಯಿದೆಯಡಿ ಪ್ರಕರಣ ದಾಖಲಾಗಿದೆ.

ಸಿಸಿಎಚ್ 1ನೇ ನ್ಯಾಯಾಲಯಕ್ಕೆ ವಕೀಲ ಪ್ರದೀಪ್ ಅವರು ಪಿಸಿಆರ್ ದೂರು ದಾಖಲಿಸಿದ್ದಾರೆ. ಜನರ್ದಾನ ರೆಡ್ಡಿ, ಪತ್ನಿ ಲಕ್ಷಿ ಅರುಣಾ, ಶಾಸಕರಾದ ಆನಂದ್ ಸಿಂಗ್, ನಾಗೇಂದ್ರ, ಸತೀಶ್ ಸೈಲ್,  ಸೇರಿದಂತೆ 25 ಮಂದಿ ವಿರುದ್ಧ ಪಿಸಿಆರ್ ದೂರು ದಾಖಲಾಗಿದೆ.

ಪಿಸಿಆರ್ ದೂರು ದಾಖಲಿಸಿಕೊಂಡಿರುವ ನ್ಯಾಯಾಧೀಶರಾದ ಅಮರಣ್ಣನವರ್ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದ್ದಾರೆ.

loader