ರಾಜೀನಾಮೆ ಕೊಟ್ಟವರು ಈಗ ಏನು ಮಾಡುತ್ತಿದ್ದಾರೆ ಎನ್ನುವುದು ಎಲ್ಲರ ಮುಂದಿರುವ ಪ್ರಶ್ನೆ.  ಆನಂದ್ ಸಿಂಗ್ ಅವರನ್ನು ಸೇರಿ ರಾಜೀನಾಮೆ ಕೊಟ್ಟಿರುವ 14 ಜನ ಶಾಸಕರಲ್ಲಿ 10 ಜನ ಮುಂಬೈಗೆ ಹಾರಿದ್ದಾರೆ. ಇನ್ನು ಉಳಿದವರು ಬೆಂಗಳೂರಿನಲ್ಲಿಯೇ ಇದ್ದಾರೆ.

ಬೆಂಗಳೂರು[ಜು. 06] ರಾಜೀನಾಮೆ ನೀಡಿರುವ 14 ರಲ್ಲಿ 10 ಜನ ಶಾಸಕರು ಮುಂಬೈ ಹಾರಿದ್ದರೆ ಉಳಿದ ನಾಲ್ಕು ಜನ ಬೆಂಗಳೂರಿನಲ್ಲೇ ಇದ್ದಾರೆ. ಹಾಗಾದರೆ ಬೆಂಗಳೂರಿನಲ್ಲಿಯೇ ಉಳಿದುಕೊಂಡಿರುವ ಆ ನಾಲ್ಕು ಶಾಸಕರು ಯಾರು?

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಾಜೀನಾಮೆ ಕೊಟ್ಟು ಬೆಂಗಳೂರಿನಲ್ಲೇ ಉಳಿದುಕೊಂಡಿರುವ ಶಾಸಕರೊಂದಿಗೆ ಕಾಂಗ್ರೆಸ್ ನಾಯಕರು ಸಂಧಾನ ಮಾಡುವ ಪ್ರಯತ್ನ ಮಾಡಿದರೂ ಅದು ಯಶಸ್ವಿಯಾಗಿಲ್ಲ.

ರಾಜೀನಾಮೆ ಕೊಟ್ಟು ಮುಂಬೈಗೆ ಹಾರಿದ ಶಾಸಕರ ಲಿಸ್ಟ್..ನಿಮ್ಮವರಿದ್ದಾರಾ?

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬೆಂಗಳೂರಿನಲ್ಲೇ ಉಳಿದುಕೊಂಡವರು

1. ಮುನಿರತ್ನ - ರಾಜರಾಜೇಶ್ವರಿ ನಗರ ಶಾಸಕ[ಕಾಂಗ್ರೆಸ್]

2. ರಾಮಲಿಂಗಾ ರೆಡ್ಡಿ- ಬಿಟಿಎಂ ಲೇಔಟ್[ಕಾಂಗ್ರೆಸ್]

3. ಸೌಮ್ಯಾ ರೆಡ್ಡಿ- ಜಯನಗರ [ಕಾಂಗ್ರೆಸ್]

4. ಆನಂದ್ ಸಿಂಗ್-ವಿಜಯನಗರ, ಬಳ್ಳಾರಿ [ಕಾಂಗ್ರೆಸ್]