ಬೆಂಗಳೂರು [ಜು.07]:  ರಾಮಲಿಂಗಾರೆಡ್ಡಿ ಅವರ ಷರತ್ತನ್ನು ಸಂಪೂರ್ಣವಾಗಿ ಒಪ್ಪಲು ಕಾಂಗ್ರೆಸ್‌ ಸಿದ್ಧವಿಲ್ಲ. ಹಾಲಿ ಸಂಪುಟದಲ್ಲಿರುವ ಪಕ್ಷನಿಷ್ಠರಾದ ಐದಾರು ಸಚಿವರ ರಾಜೀನಾಮೆ ಪಡೆಯುವ ದಿಸೆಯಲ್ಲಿ ಮಾತ್ರ ಕಾಂಗ್ರೆಸ್‌ ಚಿಂತಿಸುತ್ತಿದೆ.

ಏಕೆಂದರೆ, ಎಲ್ಲಾ ಸಚಿವರ ರಾಜೀನಾಮೆ ಪಡೆದರೆ ಹುದ್ದೆ ಕಳೆದುಕೊಂಡವರು ಅತೃಪ್ತರಾಗುವ ಸಾಧ್ಯತೆಯಿದೆ. ಇದು ಮತ್ತಷ್ಟುಸಮಸ್ಯೆಗೆ ಕಾರಣವಾಗಬಹುದು ಎಂಬ ಚಿಂತೆ ಕಾಂಗ್ರೆಸ್‌ ನಾಯಕರಿಗೆ ಇದೆ ಎನ್ನಲಾಗುತ್ತಿದೆ.

ಸಿದ್ದರಾಮಯ್ಯ ಅವರಂತೂ ಈ ರೀತಿಯ ಷರತ್ತುಗಳಿಗೆ ಒಪ್ಪಿಗೆ ನೀಡಿದರೆ ಪರಿಸ್ಥಿತಿ ಮತ್ತಷ್ಟುಹದಗೆಡಲು ನಾವೇ ಆಸ್ಪದ ಮಾಡಿಕೊಟ್ಟಂತಾಗುತ್ತದೆ. ಅದಕ್ಕಿಂತ ಪ್ರತಿಪಕ್ಷದಲ್ಲಿ ಕೂರುವುದೇ ಮೇಲು ಎಂದು ವೇಣುಗೋಪಾಲ್‌ ಅವರಿಗೆ ಹೇಳಿದ್ದಾರೆ ಎನ್ನಲಾಗಿದೆ.