ನವದೆಹಲಿ [ಸೆ.23] ಭಾರತದ ಪ್ರಧಾನಿಯಾಗಿದ್ದುಕೊಂಡು ಮೋದಿ ಅಮೆರಿಕ ಅಧ್ಯಕ್ಷರ ಪರ ಪ್ರಚಾರ ಮಾಡುತ್ತಿದ್ದಾರೆ ಎಂದು ಹೂಸ್ಟನ್ ಭಾಷಣದ ನಂತರ ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ.

ಭಾರತದ ವಿದೇಶಾಂಗ ನೀತಿಯ ತತ್ವಗಳನ್ನು ಮೋದಿ ಉಲ್ಲಂಘಿಸಿದ್ದಾರೆ ಎಂದು ಕಾಂಗ್ರೆಸ್ ಆರೋಪ ಮಾಡಿದೆ.

'ನೆನಪಿರಲಿ ಭಾರತದ ಪಿಎಂ ಆಗಿ ಅಮೆರಿಕಾದಲ್ಲಿದ್ದೀರಿ, ಟ್ರಂಪ್ ಪ್ರಚಾರಕರಾಗಿ ಅಲ್ಲ'

ಸರಣಿ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್ ಸಹ ಅನೇಕ ಪ್ರಶ್ನೆಗಳನ್ನು ಕೇಳಿದೆ. ತೈಲ ದರ ಏರುತ್ತಿದೆ.. ಉತ್ತರ ಕರ್ನಾಟಕದ ಜನರಿಗೆ ನೆರೆ ಪರಿಹಾರ ಸಿಕ್ಕಿಲ್ಲ.. ಉದ್ಯೋಗ ಮತ್ತು ಆರ್ಥಿಕತೆಯ ಕತೆ ಏನು ಎಂದು ಪ್ರಶ್ನೆ ಮಾಡಿದೆ.