'ನೆನಪಿರಲಿ ಭಾರತದ ಪಿಎಂ ಆಗಿ ಅಮೆರಿಕಾದಲ್ಲಿದ್ದೀರಿ, ಟ್ರಂಪ್ ಪ್ರಚಾರಕರಾಗಿ ಅಲ್ಲ'
ಹೌಡಿ ಮೋದಿ ಕಾರ್ಯಕ್ರಮದಲ್ಲಿ ವಿಶಿಷ್ಟ ರೀತಿಯಲ್ಲಿ ಟ್ರಂಪ್‌ರನ್ನು ಪರಿಚಯಿಸಿದ ಪ್ರಧಾನಿ ಮೋದಿ| ಅಬ್ ಕೀ ಬಾರ್ ಟ್ರಂಪ್ ಸರ್ಕಾರ, ಮೋದಿ ಘೋಷಣೆ| ಮೋದಿ ಘಷಣೆ ಬೆನ್ನಲ್ಲೇ ಕಾಂಗ್ರೆಸ್ ನಾಯಕನ ಟ್ವೀಟ್| ನೆನಪಿರಲಿ ನೀವು ಅಮೆರಿಕಾ ಚುನಾವಣೆಯ ಸ್ಟಾರ್ ಪ್ರಚಾರಕರಾಗಿ ಹೋಗಿಲ್ಲ, ಭಾರತದ ಪ್ರಧಾನಿಯಾಗಿ ಭೇಟಿ ನೀಡಿದ್ದೀರಿ
ನವದೆಹಲಿ[ಸೆ.23]: ಒಂದೆಡೆ ಹೌಡಿ ಮೋದಿ ಸಮಾವೇಶ ವಿಶ್ವದಾದ್ಯಂತ ಸದ್ದು ಮಾಡುತ್ತಿದೆ. ಹೀಗಿರುವಾಗ ಕಾಂಗ್ರೆಸ್ ರಾಜ್ಯಸಬಾ ಸದಸ್ಯ ಆನಂದ್ ಶರ್ಮಾ 'ನೀವು ಅಮೆರಿಕಾಗೆ ಭಾರತದ ಪ್ರಧಾನಿಯಾಗಿ ಹೋಗಿದ್ದೀರಿ, ಅಮೆರಿಕಾ ಚುನಾವಣೆಯ ಸ್ಟಾರ್ ಪ್ರಚರಕರಾಗಿ ಅಲ್ಲ' ಎನ್ನುವ ಮೂಲಕ ಮೋದಿಗೆ ಮಾತಿನ ಪೆಟ್ಟು ನೀಡಿದ್ದಾರೆ.
ಹೌಡಿ ಮೋದಿ? ಎಲ್ಲ ಚೆನ್ನಾಗಿದೆ!: ಅಮೆರಿಕಾದಲ್ಲಿ ಕನ್ನಡ ಮಾತನಾಡಿದ ಮೋದಿ!
ಈ ಕುರಿತಾಗಿ ಸರಣಿ ಟ್ವೀಟ್ ಮಾಡಿರುವ ಆನಂದ್ ಶರ್ಮಾ 'ನೀವು ಅಮೆರಿಕಾಗೆ ನಮ್ಮ, ಭಾರತದ ಪ್ರಧಾನಿಯಾಗಿ ತೆರಳಿದ್ದೀರಿ. ಅಲ್ಲಿನ ಚುನಾವಣೆಯ ಸ್ಟಾರ್ ಪ್ರಚಾರಕರಾಗಿ ಅಲ್ಲ ಎಂದು ನೆನಪಿಸುತ್ತಿದ್ದೇನೆ' ಎಂದಿದ್ದಾರೆ.
ಇದೇ ವೇಳೆ ಮತ್ತೊಂದು ಟ್ವೀಟ್ ಮಾಡಿರುವ ಶರ್ಮಾ 'ಪ್ರಧಾನ ಮಂತ್ರಿಗಳೇ, ಇತರ ದೇಶಗಳ ಆಂತರಿಕ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡಬಾರದೆಂಬ ಭಾರತದ ವಿದೇಶಾಂಗ ನೀತಿಯನ್ನು ನೀವು ಉಲ್ಲಂಘಿಸಿದ್ದೀರಿ. ಇದು ಭಾರತದ ದೀರ್ಘಕಾಲೀನ ಕಾರ್ಯತಂತ್ರದ ಹಿತಾಸಕ್ತಿಗಳಿಗೆ ಅವಮಾನ ಮಾಡಿದಂತೆ' ಎಂದಿದ್ದಾರೆ.
ಹಂಪಿಯ ಹಿನ್ನೆಲೆಯಲ್ಲಿ ಯೋಗ, ಹೂಸ್ಟನ್‌ನಲ್ಲಿ ಭಾರತೀಯ ಸಂಸ್ಕೃತಿ ಕಲರವ!
ಹೌಡಿ ಮೋದಿ ಕಾರ್ಯಕ್ರಮದಲ್ಲಿ ಭಾಷಣ ಆರಂಭಿಸಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಟ್ರಂಪ್ ರನ್ನು ಅತ್ಯಂತ ವಿಶಿಷ್ಟ ರೀತಿಯಲ್ಲಿ ಪರಿಚಯಿಸಿದ್ದರು. ಅಲ್ಲದೇ 'ಅಬ್ ಕೀ ಬಾರ್ ಟ್ರಂಪ್ ಸರ್ಕಾರ್' ಎಂಬ ಘೊಷಣೆಯನ್ನೂ ಕೂಗಿದ್ದರು. ಇದು ಅನೇಕರಲ್ಲಿ ಅಸಮಾಧಾನವುಂಟು ಮಾಡಿತ್ತು.
ಸ್ನೇಹಕ್ಕೆ ಸ್ನೇಹ..ಪ್ರೀತಿಗೆ ಪ್ರೀತಿ... ಮೋದಿ-ಟ್ರಂಪ್ ಜುಗಲ್‌ಬಂದಿ, ಪಾಕ್‌ಗೆ ಫಜೀತಿ