ಬೆಂಗಳೂರು[ಮೇ. 29] ಮಾಜಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಕಾರೆಂದು ಭಾವಿಸಿ ಗೊಂದಲದಲ್ಲಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಅವರ ಕಾರನ್ನು ಏರಲು ಮುಂದಾಗಿ ಬಳಿಕ ಎಚ್ಚೆತ್ತು ವಾಪಸ್​ ತಮ್ಮ ಕಾರು ಏರಿರುವ ವಿಚಿತ್ರ ಘಟನೆಗೆ ಬುಧವಾರ ಸಾಕ್ಷಿಯಾಯಿತು.

 ರಾಜ್ಯ ಸಚಿವ ಸಂಪುಟ ವಿಸ್ತರಣೆ ಹಾಗೂ ಅತೃಪ್ತ ಶಾಸಕರ ಬಗೆಗಿನ ಚರ್ಚೆ ನಡೆಸಿದ ನಂತರ ಕುಮಾರಕೃಪಾ ಗೆಸ್ಟ್ ಹೌಸ್ ನಲ್ಲಿ ಸಭೆ ಮುಗಿಸಿ ಹೊರಡುವ ವೇಳೆ ಸಿದ್ದರಾಮಯ್ಯ ಅವರಿಗೆ ಕನ್ ಫ್ಯೂಷನ್ ಉಂಟಾಗಿದೆ.

ರಾಜ್ಯ ಸಚಿವ ಸಂಪುಟಕ್ಕೆ ಮೂವರ ಸೇರ್ಪಡೆ. ಯಾರ್ಯಾರಿಗೆ ಅದೃಷ್ಟ?

ಸಿದ್ದರಾಮಯ್ಯ ಸಭೆ ಮುಗಿಸಿ ತೆರಳುವ ವೇಳೆ ಮಾಧ್ಯಮದವರು ಪ್ರಶ್ನೆ ಕೇಳಲು ಮುಂದಾಗಿದ್ದಾರೆ. ಈ ವೇಳೆ ಹೆಜ್ಜೆ ಹಾಕುತ್ತ ಸಿದ್ದರಾಮಯ್ಯ ಕುಮಾರಸ್ವಾಮಿ ಕಾರಿನ ಬಳಿ ತೆರಳಿಬಿಟ್ಟಿದ್ದಾರೆ.