ಬೆಂಗಳೂರು(ಆ. 07)  ಸಿಎಂ ಬಿ.ಎಸ್ ಯಡಿಯೂರಪ್ಪ ದೆಹಲಿಯಿಂದ ಹಿಂದಿರುಗಿದ್ದು ದೆಹಲಿ ನಾಯರಿಂದ ಯಾವುದೇ ಸಂದೇಶ ಹೊತ್ತು ಬಂದಿಲ್ಲ. ಹಾಗಾಗಿ ಸಚಿವ ಸಂಪುಟ ಸದ್ಯ ವಿಸ್ತರಣೆ ಆಗಲ್ಲ ಎಂದೇ ಹೇಳಲಾಗಿತ್ತು.  ಆದರೆ ಈಗ ಸಿಕ್ಕಿರುವ ಮಾಹಿತಿ ಸಂಪುಟ ವಿಸ್ತರಣೆ ಗುಟ್ಟನ್ನು ಬಿಟ್ಟು ಕೊಟ್ಟಿದೆ.

ಈ ವಾರವೇ ಸಚಿವ ಸಂಪುಟ ವಿಸ್ತರಣೆ ಆಗಲಿದೆ ಎಂಬುದಕ್ಕೆ ಸಾಕ್ಷಿಯೊಂದು ಸಿಕ್ಕಿದೆ. ಸಚಿವರ ಪ್ರಮಾಣ ವಚನ ಕಾರ್ಯಕ್ರಮದ ಪೂರ್ವ ಭಾವಿ ಸಿದ್ದತೆಗಾಗಿ ಸಭೆ ಕರೆಯಲಾಗಿದೆ. 

ಮೊದಲ ಹಂತದಲ್ಲಿ ಯಾರಿಗೆಲ್ಲ ಸಚಿವ ಸ್ಥಾನ?

ಬೆಂಗಳೂರಿನ ನೂತನ ಕಮಿಷನರ್ ಭಾಸ್ಕರ್ ರಾವ್ ನಗರ ಎಲ್ಲಾ ಹಿರಿಯ ಪೋಲಿಸ್ ಅಧಿಕಾರಿಗಳ ಸಭೆ ಕರೆದಿದ್ದಾರೆ. ಶುಕ್ರವಾರ ಅಥವಾ ಶನಿವಾರ ಬಿಎಸ್ ವೈ ಸಂಪುಟದ ಮೊದಲ ಹಂತದ ಸಚಿವರು ಪ್ರಮಾಣ ತೆಗೆದುಕೊಳ್ಳಲ್ಲಿದ್ದಾರೆ ಎಂಬುದು ಖಾತ್ರಿಯಾಗಿದೆ. ಇನ್ನೊಂದು ಕಡೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ- ಯಡಿಯೂರಪ್ಪ ಮುಂದಿನ ಭೇಟಿ ಆ.12ಕ್ಕೆ ನಿಗದಿಯಾಗಿದೆ.