Asianet Suvarna News Asianet Suvarna News

BSY ಸಚಿವ ಸಂಪುಟ ರಚನೆಗೆ ಡೇಟ್ ಫಿಕ್ಸ್ : ಮೊದಲ ಹಂತದಲ್ಲಿ 14 ಶಾಸಕರ ಪ್ರಮಾಣ ವಚನ

ಕೊನೆಗೂ ಬಿ.ಎಸ್.ಯಡಿಯೂರಪ್ಪ ಅವರ ಸರ್ಕಾರದ ಸಚಿವ ಸಂಪುಟ ರಚನೆಗೆ ಮುಹೂರ್ತ ಫಿಕ್ಸ್ ಆಗಿದ್ದು, ಮೊದಲ ಹಂತದಲ್ಲಿ 14 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ. ಹಾಗಾದ್ರೆ ಸಂಪುಟ ರಚೆನೆ ಯಾವಾಗ..?ಮೊದಲ ಹಂತದಲ್ಲಿ ಸಚಿವರಾಗುವವರು ಯಾರ್ಯಾರು..?  ಮುಂದೆ ಓದಿ.

yediyurappa Govt cabinet expansion likely on August 9 or 10
Author
Bengaluru, First Published Aug 6, 2019, 7:02 PM IST

ಬೆಂಗಳೂರು, [ಆ.06]:  ಇದೇ ಆಗಸ್ಟ್​ 9 ಅಥವಾ 10ಕ್ಕೆ ರಾಜ್ಯ ಬಿಜೆಪಿ ಸರ್ಕಾರದ ಸಚಿವ ಸಂಪುಟ ರಚನೆಯಾಗಲಿದೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ.

ಸಂಪುಟ ರಚನೆ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಇಂದು [ಮಂಗಳವಾರ] ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗಿ ಚರ್ಚೆ ಮಾಡಿದ್ದಾರೆ. ಆದ್ರೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಶಾ ಅವರು ಬ್ಯುಸಿಯಾಗಿರುವುದರಿಂದ ಬಿಎಸ್ ವೈ, ಶಾರನ್ನು ಭೇಟಿ ಮಾಡಲು ಆಗಿಲ್ಲ.

BSY ಸಚಿವ ಸಂಪುಟ ವಿಸ್ತರಣೆಗೆ ವಿಳಂಬ ಏಕೆ?: ಕಾರಣ ಕೊಟ್ಟ ಬಿಜೆಪಿ ಶಾಸಕ

ಆಗಸ್ಟ್ 9 ಶುಕ್ರವಾರ ವರಮಹಾಲಕ್ಷ್ಮಿ ಹಬ್ಬ ಇರುವ ಕಾರಣ ಅಂದೇ ನೂತನ ಸಚಿವ ಸಂಪುಟ ರಚನೆ ಮಾಡಬೇಕೆನ್ನುವುದು ಯಡಿಯೂರಪ್ಪನವರ ಅಭಿಲಾಷೆಯಾಗಿದೆಯಂತೆ. ಎಲ್ಲವೂ ಅಂದುಕೊಂಡಂತೆ ಆದರೆ, ಆ.9ಕ್ಕೆ ಬಿಎಸ್ ವೈ ನೇತೃತ್ವದಲ್ಲಿ ಸಚಿವ ಸಂಪುಟ ರಚನೆಯಾಗುವ ಸಾಧ್ಯತೆಗಳು ಹೆಚ್ಚಿವೆ.

ಇನ್ನು ಮೊದಲ ಹಂತದಲ್ಲಿ ಯಾರೆಲ್ಲ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎನ್ನುವ ಕುತೂಹಲ ಮೂಡಿಸಿದ್ದು, 'ಎ' ಗ್ರೇಡ್ ದರ್ಜೆಯ ಶಾಸಕರು ಮೊದಲ ಹಂತದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎನ್ನವ ಮಾಹಿತಿ ಲಭ್ಯವಾಗಿದೆ.

ಮೋದಿ ಹಾದಿಯಲ್ಲಿ BSY, ಸಂಪುಟ ರಚನೆಗೆ ಪಂಚಸೂತ್ರ! ಯಾರಿಗೆ ಚಾನ್ಸ್?

ಬೆಂಗಳೂರಿನಿಂದ 4 ಶಾಸಕರು ಅಂದರೆ, ಆರ್ ಅಶೋಕ್, ಸುರೇಶ್ ಕುಮಾರ್, ಅರವಿಂದ್ ಲಿಂಬಾವಳಿ, ಡಾ. ಅಶ್ವತ್ ನಾರಾಯಣ್  ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ. 

ಇವರ ಜತೆಗೆ ಕೆ.ಎಸ್. ಈಶ್ವರಪ್ಪ,ಜಗದೀಶ್  ಶೆಟ್ಟರ್, ಮಾಧುಸ್ವಾಮಿ, ಶ್ರೀರಾಮಲು, ಪ್ರಭು ಚೌಹಾಣ್, ಗೋವಿಂದ್ ಕಾರಜೋಳ, ಸಿಟಿ ರವಿ, ಕೆಜಿ ಬೋಪಯ್ಯ, ಅಂಗಾರ, ಬಸವರಾಜ್ ಪಾಟೀಲ್ ಯತ್ನಾಳ್ ಇವರೆಲ್ಲರೂ ಮೊದಲ ಹಂತದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಗಳು ಹೆಚ್ಚಿವೆ.

Follow Us:
Download App:
  • android
  • ios