Asianet Suvarna News Asianet Suvarna News

8 ಕಾಂಗ್ರೆಸ್ ಶಾಸಕರಿಗೆ ಮಂತ್ರಿಭಾಗ್ಯ : ಯಾರವರು..?

ಕಡೆಗೂ ಕರ್ನಾಟಕ ಸಂಪುಟ ವಿಸ್ತರಣೆಗೆ ಮುಹೂರ್ತ ಕೂಡಿಬಂದಿದೆ. ಈ ವೇಳೆ ಕಾಂಗ್ರೆಸ್ 8 ಮಂದಿ ಶಾಸಕರಿಗೆ ಮಂತ್ರಿಭಾಗ್ಯ ದೊರೆಯುವ ಸಾಧ್ಯತೆ ಇದೆ. 

Karnataka Cabinet expansion 8 Congress MLAs May Get Ministerial Post
Author
Bengaluru, First Published Dec 22, 2018, 7:14 AM IST

ಬೆಂಗ​ಳೂರು :  ಕಡೆಗೂ ರಾಜ್ಯ ನಾಯ​ಕರು ಭರ​ವಸೆ ನೀಡಿ​ದ್ದಂತೆಯೇ ಶನಿ​ವಾರ (ಡಿ.22) ಸಚಿವ ಸಂಪುಟ ಪುನರ್‌ ರಚನೆ ನಡೆ​ಯ​ಲಿದೆ. ಇಬ್ಬರು ಹಾಲಿ ಸಚಿ​ವ​ರಿಗೆ ಕೊಕ್‌ ನೀಡಿ, ಎಂಟು ಮಂದಿ​ ಶಾಸ​ಕ​ರನ್ನು ಸಂಪು​ಟಕ್ಕೆ ಸೇರ್ಪಡೆ ಮಾಡಿ​ಕೊ​ಳ್ಳಲು ಹೈಕ​ಮಾಂಡ್‌ ಒಪ್ಪಿ​ಗೆ ಪಡೆ​ಯು​ವಲ್ಲಿ ರಾಜ್ಯ ನಾಯಕರು ಯಶ​ಸ್ವಿ​ಯಾ​ಗಿ​ದ್ದಾ​ರೆ.

ಸಂಪುಟ ಪುನಾರಚನೆಯಲ್ಲಿ ಬಿಜೆಪಿ ಸಖ್ಯ​ದ ಬಹಿ​ರಂಗ ಪ್ರದ​ರ್ಶನ ನೀಡಿದ ಪೌರಾ​ಡ​ಳಿತ ಸಚಿವ ರಮೇಶ್‌ ಜಾರ​ಕಿ​ಹೊಳಿ ಹಾಗೂ ಪಕ್ಷೇ​ತರರಾದ ಅರಣ್ಯ ಸಚಿವ ಶಂಕರ್‌ ಹುದ್ದೆ ಕಳೆದುಕೊಳ್ಳಲಿದ್ದಾರೆ. ಉನ್ನತ ಮೂಲ​ಗ​ಳಿಂದ ದೊರ​ಕಿ​ರುವ ಮಾಹಿತಿ ಪ್ರಕಾರ ಶಾಸ​ಕ​ರಾದ ಸತೀಶ್‌ ಜಾರ​ಕಿ​ಹೊಳಿ, ತುಕಾ​ರಾಂ, ರಹೀಂ ಖಾನ್‌, ಸಿ.ಎಸ್‌. ಶಿವಳ್ಳಿ, ಎಂ.ಟಿ.ಬಿ. ನಾಗ​ರಾಜ್‌, ಆರ್‌.ಬಿ. ತಿಮ್ಮಾ​ಪುರ ಹಾಗೂ ಪಿ.ಟಿ. ಪರ​ಮೇ​ಶ್ವರ್‌ ನಾಯ್ಕ ಸಂಪುಟ ಸೇರು​ವುದು ನಿಕ್ಕಿ.

ಆದರೆ, ಲಿಂಗಾ​ಯತ ಕೋಟಾ​ದಿಂದ ಎಂ.ಬಿ. ಪಾಟೀಲ್‌ ಹಾಗೂ ಬಿ.ಸಿ. ಪಾಟೀಲ್‌ ಪೈಕಿ ಯಾರನ್ನು ಸಂಪು​ಟಕ್ಕೆ ತೆಗೆ​ದು​ಕೊ​ಳ್ಳ​ಬೇಕು ಎಂಬ ಬಗ್ಗೆ ತೀವ್ರ ಗೊಂದ​ಲ​ವಿದೆ. ಹೈಕ​ಮಾಂಡ್‌ ಎಂ.ಬಿ. ಪಾಟೀಲ್‌ ಬಗ್ಗೆ ಒಲವು ಹೊಂದಿ​ದ್ದರೆ, ಶಾಸ​ಕಾಂಗ ಪಕ್ಷದ ನಾಯಕ ಸಿದ್ದ​ರಾ​ಮಯ್ಯ ಅವರು ಬಿ.ಸಿ. ಪಾಟೀಲ್‌ ಅವ​ರನ್ನು ಸಂಪು​ಟಕ್ಕೆ ತೆಗೆ​ದು​ಕೊ​ಳ್ಳು​ವಂತೆ ಪಟ್ಟು ಹಿಡಿ​ದಿದ್ದಾರೆ. ಈ ವಿಚಾರ ಇನ್ನೂ ಬಗೆ​ಹ​ರಿ​ದಿಲ್ಲ. ಬಹು​ತೇಕ ಶನಿ​ವಾರ ಮಧ್ಯಾ​ಹ್ನದ ವೇಳೆಗೆ ಈ ಇಬ್ಬರ ಪೈಕಿ ಒಬ್ಬರ ಹೆಸ​ರನ್ನು ಹೈಕ​ಮಾಂಡ್‌ ಅಂತಿ​ಮ​ಗೊ​ಳಿ​ಸ​ಲಿ​ದೆ. ಉನ್ನತ ಮೂಲ​ಗಳ ಪ್ರಕಾರ ಎಂ.ಬಿ. ಪಾಟೀಲ್‌ ಅವರೇ ಸಂಪುಟ ಸೇರುವ ಸಾಧ್ಯತೆ ಹೆಚ್ಚಿದೆ.

ಸಮ್ಮಿಶ್ರ ಸರ್ಕಾರದಲ್ಲಿ ಉತ್ತರ ಕರ್ನಾಟಕವನ್ನು ಕಡೆಗಣಿಸಲಾಗಿದೆ ಎಂಬ ಟೀಕೆಯಿರುವುದರಿಂದ ಈ ಬಾರಿಯ ಸಂಪುಟ ವಿಸ್ತರಣೆಯಲ್ಲಿ 8 ಸಚಿವ ಸ್ಥಾನಗಳ ಪೈಕಿ 7 ಸ್ಥಾನ ಉತ್ತರ ಕರ್ನಾಟಕಕ್ಕೇ ಲಭಿಸಲಿದೆ ಎಂಬುದು ವಿಶೇಷ.

ಇದೇ ವೇಳೆ ಕಾಂಗ್ರೆಸ್‌ ಪಾಲಿಗೆ ಬರುವ 20 ನಿಗಮ ಮಂಡಳಿ, ಒಂದು ರಾಜ​ಕೀಯ ಕಾರ್ಯ​ದರ್ಶಿ ಹಾಗೂ ಎಂಟು ಸಂಸ​ದೀಯ ಕಾರ್ಯ​ದ​ರ್ಶಿ​ಗಳ ನೇಮ​ಕಾ​ತಿ ಪಟ್ಟಿಗೂ ಹೈಕ​ಮಾಂಡ್‌ ಒಪ್ಪಿಗೆ ನೀಡಿದೆ. ಜತೆಗೆ, ಶಾಸಕ ಅಜಯ್‌ ಸಿಂಗ್‌ ಅವ​ರನ್ನು ದೆಹಲಿ ವಿಶೇಷ ಪ್ರತಿ​ನಿ​ಧಿ​ಯ​ನ್ನಾಗಿ ನೇಮಕ ಮಾಡಲು ಹಾಗೂ ವಿ. ಮುನಿ​ಯಪ್ಪ ಅವ​ರನ್ನು ರಾಜ​ಕೀಯ ಕಾರ್ಯ​ದ​ರ್ಶಿ​ಯ​ನ್ನಾಗಿ ನೇಮಿ​ಸಲು ಒಪ್ಪಿಗೆ ನೀಡಿದೆ ಎಂದು ತಿಳಿದು ಬಂದಿ​ದೆ.

ಮುಖ್ಯ​ಮಂತ್ರಿ ಎಚ್‌.ಡಿ. ಕುಮಾ​ರ​ಸ್ವಾಮಿ ಅವರ ಸಂಪು​ಟ​ದಲ್ಲಿ ಪ್ರಸ್ತುತ ಎಂಟು ಸಚಿವ ಸ್ಥಾನ​ಗಳು ಖಾಲಿ ಉಳಿ​ದಿದ್ದು, ಈ ಪೈಕಿ ಕಾಂಗ್ರೆಸ್‌ ಪಾಲು ಆರು ಸ್ಥಾನ​ಗಳು. ಸಂಪು​ಟ​ದಿಂದ ಇಬ್ಬರು ಸಚಿ​ವ​ರಿಗೆ ಕೊಕ್‌ ನೀಡಲು ನಿರ್ಧಾರ ಕೈಗೊಂಡಿ​ರು​ವು​ದ​ರಿಂದ ಒಟ್ಟು ಎಂಟು ಸ್ಥಾನ​ಗ​ಳನ್ನು ತುಂಬಲು ಕಾಂಗ್ರೆ​ಸ್‌ ಅವ​ಕಾಶ ಮಾಡಿ​ಕೊಂಡಿದ್ದು, ಎಲ್ಲಾ ಎಂಟು ಸ್ಥಾನ​ಗ​ಳನ್ನು ತುಂಬಲು ತೀರ್ಮಾ​ನಿ​ಸಿ​ದೆ.

ಆದರೆ, ಉಪ ಮುಖ್ಯ​ಮಂತ್ರಿ ಡಾ.ಜಿ. ಪರ​ಮೇ​ಶ್ವರ್‌ ಅವರು ಹಾಲಿ ಹೊಂದಿ​ರುವ ಮೂರು ಖಾತೆ​ಗಳ ಪೈಕಿ ಯುವಜನ ಹಾಗೂ ಕ್ರೀಡೆ ಖಾತೆ​ಯನ್ನು ಹಿಂಪ​ಡೆ​ಯಲು ಮಾತ್ರ ನಿರ್ಧಾ​ರ​ವಾ​ಗಿದ್ದು, ಉಳಿದ ಎರಡು ಖಾತೆ​ಗ​ಳಾದ ಬೆಂಗ​ಳೂರು ನಗ​ರಾ​ಭಿ​ವೃದ್ಧಿ ಹಾಗೂ ಗೃಹ ಖಾತೆ​ಯನ್ನು ಅವ​ರಿಗೇ ಉಳಿ​ಸಲು ತೀರ್ಮಾ​ನಿ​ಸ​ಲಾ​ಗಿದೆ. ಉಳಿ​ದಂತೆ ಒಂದ​ಕ್ಕಿಂತ ಹೆಚ್ಚು ಖಾತೆ ಹೊಂದಿ​ರುವ ಇತರ ಶಾಸ​ಕ​ರಿಂದ ಹೆಚ್ಚು​ವರಿ ಖಾತೆ​ಗ​ಳನ್ನು ಪಡೆ​ದು​ಕೊಂಡು ಹೊಸ​ದಾಗಿ ಸಚಿ​ವ​ರಾ​ದ​ವ​ರಿಗೆ ನೀಡಲು ತೀರ್ಮಾ​ನಿ​ಸ​ಲಾ​ಗಿದೆ ಎಂದು ಮೂಲ​ಗಳು ಹೇಳಿ​ವೆ.

ಬಿಜೆಪಿ ಸಖ್ಯ ರಮೇ​ಶ್‌ಗೆ ದುಬಾ​ರಿ:

ಬಿಜೆಪಿ ಜತೆಗಿನ ಸಖ್ಯ​ವನ್ನು ಬಹಿ​ರಂಗ​ವಾಗಿ ಪ್ರದ​ರ್ಶಿ​ಸಿದ ನಾಯ​ಕ ಸಮು​ದಾ​ಯದ ರಮೇಶ್‌ ಜಾರ​ಕಿ​ಹೊಳಿ ಅವ​ರಿಗೆ ಹೈಕ​ಮಾಂಡ್‌ ಶಿಕ್ಷೆ ನೀಡಿದ್ದು, ಸಂಪು​ಟ​ದಿಂದ ಕೊಕ್‌ ನೀಡ​ಲಾ​ಗಿದೆ. ಅವ​ರಿಂದ ತೆರ​ವಾದ ಸ್ಥಾನ​ವನ್ನು ಅವರ ಸಹೋ​ದರ ಸತೀಶ್‌ ಜಾರ​ಕಿ​ಹೊಳಿ ಅವ​ರಿಗೆ ನೀಡ​ಲಾ​ಗಿದೆ. ಇದ​ಲ್ಲದೆ, ನಾಯಕ ಸಮು​ದಾ​ಯ​ದ​ವರೇ ಆದ ಬಳ್ಳಾ​ರಿ ಜಿಲ್ಲೆಯ ತುಕಾರಾಂ ಅವ​ರಿಗೆ ಸಂಪು​ಟ​ದಲ್ಲಿ ಅವ​ಕಾಶ ನೀಡುವ ಮೂಲಕ ಆ ಸಮು​ದಾ​ಯಕ್ಕೆ ಎರಡು ಸ್ಥಾನ​ಗ​ಳನ್ನು ನೀಡಿ​ದಂತಾ​ಗಿ​ದೆ.

ಇದೇ ರೀತಿ ಈ ಬಾರಿ ಸಂಪು​ಟದಲ್ಲಿ ಎರಡು ಸ್ಥಾನ ಗಿಟ್ಟಿ​ಸಿ​ರು​ವುದು ಕುರುಬ ಸಮು​ದಾಯ. ಕುರುಬ ಸಮು​ದಾ​ಯ​ದಿಂದ ಈ ಬಾರಿ ಉತ್ತರ ಕರ್ನಾಟಕ ಭಾಗಕ್ಕೆ ಪ್ರಾತಿ​ನಿಧ್ಯ ನೀಡ​ಬೇಕು ಎಂಬ ಕಾರ​ಣಕ್ಕೆ ಸಿ.ಎಸ್‌. ಶಿವಳ್ಳಿ ಅವರ ಹೆಸರು ಚಾಲ್ತಿ​ಯ​ಲ್ಲಿತ್ತು. ಆದರೆ, ಎಂ.ಟಿ.ಬಿ. ನಾಗ​ರಾಜ್‌ ಸಚಿವ ಸ್ಥಾನ​ಕ್ಕಾಗಿ ಪಟ್ಟು​ಹಿ​ಡಿದ ಕಾರಣ ಶಂಕ​ರ್‌ಗೆ ಕೊಕ್‌ ನೀಡುವ ಮೂಲಕ ಇಬ್ಬ​ರಿಗೂ ಅವ​ಕಾಶ ಮಾಡಿ​ಕೊ​ಡ​ಲಾ​ಗಿ​ದೆ.

ಇದು​ವ​ರೆಗೂ ಸಂಪು​ಟ​ದಲ್ಲಿ ಯಾವುದೇ ಪ್ರಾತಿ​ನಿಧ್ಯ ಪಡೆ​ಯದೇ ಇದ್ದ ಬಳ್ಳಾರಿ ಜಿಲ್ಲೆಯು ಈ ಬಾರಿ ಎರಡು ಸ್ಥಾನ​ಗ​ಳನ್ನು ಗಿಟ್ಟಿ​ಸಿ​ಕೊಂಡಿದೆ. ಲಂಬಾ​ಣಿ ಸಮು​ದಾ​ಯದ ಪಿ.ಟಿ. ಪರ​ಮೇ​ಶ್ವರ್‌ ನಾಯ್‌್ಕ ಹಾಗೂ ನಾಯಕ ಸಮು​ದಾ​ಯದ ತುಕಾರಾಂ ಅವ​ಕಾಶ ಗಿಟ್ಟಿ​ಸಿ​ಕೊಂಡಿ​ದ್ದಾ​ರೆ.

ಇನ್ನು ಬಾದಾ​ಮಿ​ಯಲ್ಲಿ ತಮ್ಮ ಗೆಲು​ವಿ​ಗಾಗಿ ಶ್ರಮಿ​ಸಿದ ಆರ್‌.ಬಿ. ತಿಮ್ಮಾ​ಪುರ ಅವ​ರಿಗೆ ಸಚಿವ ಸ್ಥಾನ ದೊರ​ಕಿ​ಸಿ​ಕೊ​ಡು​ವಲ್ಲಿ ಶಾಸ​ಕಾಂಗ ಪಕ್ಷದ ನಾಯಕ ಸಿದ್ದ​ರಾ​ಮಯ್ಯ ಯಶ​ಸ್ವಿ​ಯಾ​ಗಿ​ದ್ದಾರೆ. ಪರಿ​ಶಿಷ್ಟಎಡಗೈ ಪಂಗ​ಡ​ದಿಂದ ತಮ್ಮ ಪುತ್ರಿ ರೂಪಾ ಶಶಿ​ಧ​ರ್‌ಗೆ ಅವ​ಕಾಶ ನೀಡು​ವಂತೆ ಸಂಸದ ಕೆ.ಎಚ್‌. ಮುನಿ​ಯಪ್ಪ ನಡೆ​ಸಿದ ಪ್ರಯ​ತ್ನ​ವನ್ನು ವಿಫ​ಲ​ಗೊ​ಳಿಸಿ ಆರ್‌.ಬಿ. ತಿಮ್ಮಾ​ಪುರ ಅವ​ರಿಗೆ ಸ್ಥಾನ ಗಿಟ್ಟಿ​ಸಿಕೊ​ಟ್ಟಿ​ದ್ದಾ​ರೆ.

ಅಲ್ಪ​ಸಂಖ್ಯಾತ ಸಮು​ದಾ​ಯದ ರಹೀಂ ಖಾನ್‌ ಅವ​ರಿಗೆ ಅವ​ಕಾಶ ನೀಡುವ ಮೂಲಕ ಉತ್ತರ ಕರ್ನಾ​ಟಕ ಭಾಗದ ಮುಸ್ಲಿ​ಮ​ರಿಗೆ ಅವ​ಕಾಶವನ್ನು ನೀಡಿ​ದಂತಾ​ಗಿ​ದೆ.

ರಾಜ್ಯ ಸಮ್ಮಿಶ್ರ ಸರ್ಕಾ​ರ​ದಲ್ಲಿ ಉತ್ತರ ಕರ್ನಾ​ಟಕ ಭಾಗಕ್ಕೆ ಪ್ರಾತಿನಿಧ್ಯ ನೀಡ​ಲಾ​ಗಿಲ್ಲ ಎಂಬ ಕೂಗು ಹೈಕ​ಮಾಂಡ್‌ಗೆ ಬಲ​ವಾ​ಗಿಯೇ ತಟ್ಟಿದ್ದು, ಸಂಪುಟ ಸೇರಿದ ಎಂಟು ಮಂದಿಯ ಪೈಕಿ ಏಳು ಮಂದಿ ಉತ್ತರ ಕರ್ನಾ​ಟ​ಕದ ಶಾಸ​ಕರೇ ಆಗಿ​ದ್ದಾರೆ.

Follow Us:
Download App:
  • android
  • ios