Asianet Suvarna News Asianet Suvarna News

ಉಪಚುನಾವಣೆಗೆ ಬ್ರೇಕ್, ಪರಿಣಾಮಗಳ ಲಾಭ-ನಷ್ಟ ಗೊತ್ತೆ ಆಗದ ಲೆಕ್ಕಾಚಾರ!

ಹದಿನೈದು ಕ್ಷೇತ್ರಗಳ ಉಪಚುನಾವಣೆಗೆ ಸುಪ್ರೀಂ ಕೋರ್ಟ್ ತಡೆ/ ಯಾರಿಗೆ ಲಾಭ? ಯಾರಿಗೆ ನಷ್ಟ?/ ಬಿಜೆಪಿಯ ಮುಂದಿನ ತಂತ್ರಗಾರಿಕೆ ಏನು? ಕಾಂಗ್ರೆಸ್-ಜೆಡಿಎಸ್ ಕಾಲಾವಕಾಶದ ಲಾಭ ಪಡೆದುಕೊಳ್ಳುತ್ತವೆಯೇ?

karnataka bypolls Stayed by Supreme Court who gain who loses
Author
Bengaluru, First Published Sep 26, 2019, 5:22 PM IST

ಬೆಂಗಳೂರು(ಸೆ. 25):  ಅನರ್ಹ ಶಾಸಕರ ಬಗ್ಗೆ ಸುಪ್ರೀಂ ಕೋರ್ಟ್ ಎಂದು ಆದೇಶ ನೀಡಬಹುದೆಂದು ಕುತೂಹಲದಿಂದ ನಿರೀಕ್ಷಿಸುತ್ತಿದ್ದ ಕರ್ನಾಟಕದ ರಾಜಕಾರಣಕ್ಕೆ ಒಂದು ಸಣ್ಣ ಬ್ರೇಕ್ ಹಾಕಿದೆ. ಅಧಿಕಾರವನ್ನು ಸುರಕ್ಷಿತವಾಗಿ ಕಾಪಾಡಿಕೊಳ್ಳಲು ಬಿಜೆಪಿಗೆ, ಮತ್ತೊಮ್ಮೆ ಅಧಿಕಾರದ ಹತ್ತಿರ ಸುಳಿಯಲು ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ಈ ಚುನಾವಣೆ ಬಹಳ ಪ್ರಮುಖವಾಗಿತ್ತು.

ಆದರೆ ರಾಜ್ಯದ 15 ಕ್ಷೇತ್ರಗಳಿಗೆ ಕೇಂದ್ರ ಚುನಾವಣಾ ಆಯೋಗ ನಿಗದಿಗೊಳಿಸಿದ್ದ ಉಪ ಚುನಾವಣೆಗೆ ಸುಪ್ರೀಂ ಕೋರ್ಟ್ ಸದ್ಯಕ್ಕೆ ತಡೆ ನೀಡಿದೆ. ಇದರೊಂದಿಗೆ ಎಲ್ಲ ರಾಜಕಾರಣದ ಲೆಕ್ಕಾಚಾರಗಳೂ ಅದಲು-ಬದಲಾಗುತ್ತಿವೆ.

ಬಿಜೆಪಿಗೆ ಒಂದರ್ಥದಲ್ಲಿ ಲಾಭ: 
ಚುನಾವಣೆ ನಡೆದು ಫಲಿತಾಂಶ ಬಂದು ಬಿಜೆಪಿ ಟಾರ್ಗೆಟ್ ಇಟ್ಟುಕೊಂಡ ಕ್ಷೇತ್ರಗಳನ್ನು ಗೆಲ್ಲುವಲ್ಲಿ ವಿಫಲವಾಗಿದ್ದರೆ, ಮತ್ತೆ  ವಿಪಕ್ಷಗಳು ಅಧಿಕಾರ ಹಿಡಿಯುವ ಸಾಧ್ಯತೆ ಇತ್ತು. ಆದರೆ ಸುಪ್ರೀಂ ಚುನಾವಣೆ ಮುಂದಕ್ಕೆ ಹಾಕುವುದರೊಂದಿಗೆ ಬಿಜೆಪಿಗೇ ತುಸು ಲಾಭವಾಗಿದೆ. ಅಥವಾ ಲಾಭ ಎನ್ನುವುದಕ್ಕಿಂತ ಸರಕಾರ ಉರುಳುವ ಭೀತಿಯಿಂದ ಸ್ವಲ್ಪ ಕಾಲ ಬಚಾವ್ ಆದಂತೆ ಆಗಿದೆ. 

ಕರ್ನಾಟಕ ಉಪಚುನಾವಣೆಗೆ ಸುಪ್ರೀಂ ತಡೆ ಕೊಡಲು ಅಸಲಿ ಕಾರಣ

ಜೆಡಿಎಸ್ ಕಾಂಗ್ರೆಸ್‌ಗೆ ದೊಡ್ಡ ನಷ್ಟ? 
ಅಖಾಡಲ್ಲಿ ಸೆಣೆಸಿ ಮತ್ತೆ ಜನರ ಬಳಿಗೆ ಹೋಗುವ ಇರಾದೆಯಲ್ಲಿದ್ದ ಕಾಂಗ್ರೆಸ್ ಜೆಡಿಎಸ್‌ಗೆ ಈ ತೀರ್ಮಾನ ಒಂದರ್ಥದಲ್ಲಿ ಶಾಕ್ ತಂದಿದೆ. ಹಳೆ ಮೈಸೂರು ಭಾಗದಲ್ಲಿ ಖಾಲಿ ಇರುವ ಕ್ಷೇತ್ರಗಳಲ್ಲಿ ಮತ್ತೆ ಹಕ್ಕು ಸ್ಥಾಪಿಸುವ ಅವಕಾಶಕ್ಕೂ ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಬಿಜೆಪಿ ಸರ್ಕಾರಕ್ಕೆ ಸುರಕ್ಷೆ, ಜೆಡಿಎಸ್ ಕಾಂಗ್ರೆಸ್‌‌ಗೆ ಕಾಯುಬೇಕಾದ ನಿರೀಕ್ಷೆ, ಅನರ್ಹರಿಗೆ ಮುಗಿಯದ ಪರೀಕ್ಷೆ  ಸದ್ಯದ ಕರ್ನಾಟಕದ ರಾಜಕಾರಣ ಎಂದಷ್ಟೇ ಹೇಳಬಹುದು.

ಒಂದರ್ಥದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಈ ಚುನಾವಣೆ ನಡೆಯಲಿ ಎಂದೇ ಭಯಸಿದ್ದವು. ಜನರ ಬಳಿಗೆ ಹೋಗೋಣ ಎಂಬ ಮಾತುಗಳನ್ನು ಹಲವು ಸಾರಿ ಹೇಳಿದ್ದರು. ಇದಾದ ಮೇಲೆ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ನಡುವೆ ಹದ್ದು-ಗಿಣಿ ಸಮರವೂ ನಡೆದಿತ್ತು. ಸದ್ಯ ರಾಜಕೀಯ ವಾಕ್ಸಮರಗಳಿಗೂ ತೆರೆ ಬೀಳಲಿದೆ.

ಕರ್ನಾಟಕ ಉಪಚುನಾವಣೆಗೆ ಬ್ರೇಕ್; ಕಳ್ಳಗಿವಿ ಪ್ರಕರಣಕ್ಕೆ ಟ್ವಿಸ್ಟ್; ಇಲ್ಲಿವೆ ಸೆ.26ರ ಟಾಪ್ 10 ಸುದ್ದಿ!.

ಕಾಂಗ್ರೆಸ್-ಜೆಡಿಎಸ್ ಸರಕಾರದಿಂದ ಬೇಸತ್ತ ಉಭಯ ಪಕ್ಷಗಳು 17 ಶಾಸಕರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ, ವಿವಿಧ ಕಾರಣಗಳನ್ನು ನೀಡಿದ ಸ್ಪೀಕರ್, ಈ ಶಾಸಕರನ್ನು ಅನರ್ಹಗೊಳಿಸಿದ್ದರು. ರಾಜೀನಾಮೆ ನೀಡಿದ್ದಕ್ಕೆ ಅನರ್ಹಗೊಳಿಸಿದ ಸ್ಪೀಕರ್ ಕ್ರಮ ಪ್ರಶ್ನಿಸಿ, ಶಾಸಕರು ಸುಪ್ರೀಂ ಮೆಟ್ಟಿಲೇರಿದ್ದರು. ವಾದ ವಿವಾದಗಳನ್ನು ಆಲಿಸಿದ ಕೋರ್ಟ್, ಪ್ರಕರಣವನ್ನು ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಲು ನಿರ್ಧರಿಸಿದೆ. ಅಲ್ಲದೇ ಈ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಸಿಗುವವರೆಗೂ ಚುನಾವಣೆಯನ್ನು ನಡೆಸುವಂತಿಲ್ಲ ಎಂದು ಆದೇಶಿಸಿರುವುದು ತ್ರಿಶಂಕು ಸ್ಥಿತಿಯಲ್ಲಿದ್ದ ಅನರ್ಹ ಶಾಸಕರಿಗೆ ತುಸು ನಿರಾಳವಾಗುವಂತೆ ಮಾಡಿದೆ.

Follow Us:
Download App:
  • android
  • ios