Asianet Suvarna News Asianet Suvarna News

ಕೊನೆಯಾಯ್ತಾ ಬಿಎಸ್‌ವೈ  ನಾಯಕತ್ವ,  ರಾಜ್ಯ ಬಿಜೆಪಿಗೆ ಹೊಸ ಸಾರಥಿ?

ಉಪ ಚುನಾವಣೆ ಫಲಿತಾಂಶ ಹೊರಬಂದಿದೆ. ಬಿಜೆಪಿಗೆ ತೀವ್ರ ಹಿನ್ನಡೆ ಆಗಿರುವುದನ್ನು ಅದೇ ಪಕ್ಷದ ನಾಯಕರೆ ಒಪ್ಪಿಕೊಂಡಿದ್ದಾರೆ. ನಾಯಕತ್ವ ಬದಲಾವಣೆ ವಿಚಾರಕ್ಕೆ ಈ ಸೋಲು ನಾಂದಿ ಹಾಡುವುದೆ? ಕೆಲ ನಾಯಕರು ನೀಡುತ್ತಿರುವ ಹೇಳಿಕೆ  ಮತ್ತು ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತ ಮಾಡುತ್ತಿರುವ ಅಭಿಪ್ರಾಯ ಹೌದು ಎನ್ನುತ್ತಿದೆ.

Karnataka By Election 2018 results State BJP Leadership can change
Author
Bengaluru, First Published Nov 8, 2018, 3:48 PM IST

ಬೆಂಗಳೂರು(ನ.08)  ಬಿಜೆಪಿ ಮಂಡ್ಯದಲ್ಲಿ ಗಮನಾರ್ಹ ಮತಗಳನ್ನು ಪಡೆದುಕೊಂಡಿದ್ದು ಬಿಟ್ಟರೆ ಶಿವವಮೊಗ್ಗದಲ್ಲಿ ಗೆದ್ದರೂ ಮತಗಳ ಅಂತರದಲ್ಲಿ ಭಾರೀ ವ್ಯತ್ಯಾಸವಾಗಿದೆ.

ಹಿಂದೆ ಸಂಗೊಳ್ಳಿ ರಾಯಣ್ಣ ಬ್ರಿಗೆಡ್  ಹುಟ್ಟಿಕೊಂಡು ಬಿಜೆಪಿ ನಾಯಕತ್ವ ಬದಲಾವಣೆಗೆ ಕಸರತ್ತು ಶುರುಮಾಡಿದ್ದ ನಾಯಕರು ಈಗ ಸಹ ನಿಧಾನಕ್ಕೆ ಮುನ್ನೆಲೆಗೆ ಬಂದರೆ ಆಶ್ಚರ್ಯವಿಲ್ಲ. ಬಿಜೆಪಿ ಹೈಕಮಾಂಡಿಗೂ ಇರುವ ನಾಯಕತ್ವದ ಕುರಿತು ದೂರು ದಾಖಲಾಗಬಹುದು.

ನಾಯಕತ್ವದ ಕುರಿತು ಸೊಗಡು ಶಿವಣ್ಣ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ,. ಇನ್ಜು ಸಿಟಿ ರವಿ ಮತ್ತು ಸುರೇಶ್ ಕುಮಾರ್ ಇದು ಪಕ್ಷದ ಆತ್ಮಾವಲೋಕನಕ್ಕೆ ಸಕಾಲ ಎಂದು ಹೇಳಿದ್ದಾರೆ.

ಶಿವಮೊಗ್ಗ ಬಿಜೆಪಿ ಗೆಲುವಿಗೆ 6 ಕಾರಣ, ಕಾಂಗ್ರೆಸ್ ಕೊಡುಗೆಯೂ ಉಂಟು!

ಎಲ್ಲೆಡೆ ಒಂದೊಂದು ಬಣಗಳಾಗಿ ಮಾರ್ಪಟ್ಟಿದೆ. ಜಾತಿಗೊಬ್ಬ ನಾಯಕನಂತೆ ಎಲ್ಲಾ ಕಡೆ ಗುಂಪುಗಾರಿಕೆ ಮಾಡಿಕೊಂಡು ಪಕ್ಷವನ್ನು ಅವನತಿಯತ್ತ ಕೊಂಡೊಯ್ಯಲಾಗುತ್ತಿದೆ. ಇನ್ನಾದರೂ ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು ಎಂದರು. ಬಿಜೆಪಿ ಭದ್ರಕೋಟೆಗೆ ಕಾಂಗ್ರೆಸ್-ಜೆಡಿಎಸ್ ಸೇರಿದಂತೆ ಇತರೆ ಪಕ್ಷಗಳು ಲಗ್ಗೆ ಇಟ್ಟಿವೆ. ಬಿಜೆಪಿ ಶಕ್ತಿಯನ್ನು ಕುಂದುವಂತೆ ಮಾಡುತ್ತಿದ್ದಾರೆ. ಇದೆಲ್ಲಕ್ಕಿಂತ ಮುಖ್ಯವಾಗಿ ಅನ್ಯ ಪಕ್ಷಗಳಿಂದ ತಮ್ಮ ಪಕ್ಷಕ್ಕೆ ಕರೆತಂದು ಮೂಲ ಕಾರ್ಯಕರ್ತರನ್ನು, ಮುಖಂಡರನ್ನು ಕಡೆಗಣಿಸುತ್ತಿರುವುದೇ ಸಮಸ್ಯೆಗೆ ಮೂಲ ಕಾರಣ ಎಂದು ಸೊಗಡು ಶಿವಣ್ಣ ಹೇಳಿದ್ದಾರೆ.

5 ಕ್ಷೇತ್ರಗಳ ಉಪ ಚುನಾವಣೆ : ಯಾರಿಗೆ ಎಷ್ಟು ಮತಗಳು? ಫುಲ್ ಡಿಟೇಲ್ಸ್

ಲೋಕಸಭಾ ಚುನಾವಣೆ ವೇಳೆಗೆ ರಾಜ್ಯ ಬಿಜೆಪಿಗೆ ಹೊಸ ನಾಯಕತ್ವ ದೊರೆಯಲಿದೆಯೇ? ಈಗಿರುವ ನಾಯಕತ್ವ ಬದಲಾವಣೆಗೆ ತೆರೆಮರೆಯ ಕಸರತ್ತು ಆರಂಭವಾಗಿದೆಯೇ? ಉಪಚುನಾವಣೆ ವೇಳೆ ಜವಾಬ್ದಾರಿ ಪಡೆದುಕೊಂಡಿದ್ದ ನಾಯಕರನ್ನು ಹಿಂದಕ್ಕೆ ಸರಿಸಲಾಗುತ್ತದೆಯೇ? ಎಂಬೆಲ್ಲ ಪ್ರಶ್ನೆಗಳು ಸ್ವತಃ ಬಿಜೆಪಿ ನಾಯಕರ ಆದಿಯಾಗಿ ಕಾರ್ಯಕರ್ತರಿಗಿದೆ. ಒಟ್ಟಿನಲ್ಲಿ ಉಪಚುನಾವಣೆ ಸೋಲಿನ ನಂತರ ರಾಜ್ಯ ಬಿಜೆಪಿ ಕವಲುದಾರಿಗೆ ಬಂದು ನಿಂತಿದೆ.

Follow Us:
Download App:
  • android
  • ios