ಶಿವಮೊಗ್ಗ[ನ.06] ಶಿವಮೊಗ್ಗದಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ದೋಸ್ತಿ ಪಕ್ಷಗಳು ಒಟ್ಟಾಗೊ ಹೋರಾಟ ಮಾಡಿದರೂ ಬಿಜೆಪಿ ಹೇಗೆ ಜಯ ಸಾಧಿಸಿತು. ಬಿಜೆಪಿ ಗೆಲುವಿಗೆ ಕಾರಣಗಳು ಏನು? 

1. ಬಿಜೆಪಿ ಸಂಘಟಿತ ಹೋರಾಟ: ವಿಧಾನಸಭೆ ಚುನಾವಣೆ ವೇಳೆ ಒಟ್ಟಾಗಿ ಕೆಲಸ ಮಾಡಿದ್ದ ಯಡಿಯೂರಪ್ಪ ಮತ್ತು ಈಶ್ವರಪ್ಪ ಈ ಬಾರಿ ಸಹ ಜತೆಯಾಗಿ ಪ್ರಚಾರ ಕೈಗೊಂಡಿದ್ದರು.

2. ಪುತ್ರನ ಗೆಲುವಿಗೆ ಠಿಕಾಣಿ: ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಶಿವಮೊಗ್ಗವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದರು. ಕ್ಷೇತ್ರದಲ್ಲಿಯೇ ಠಿಕಾಣಿ ಹೂಡಿದ್ದ ನಾಯಕ ಮಗನ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಅಪ್ಪ-ಮಗ, ಅಪ್ಪ-ಮಗ, ಗಂಡ-ಹೆಂಡತಿ...ಸದ್ಯದ ಸ್ಥಿತಿ!

3.ಶಾಸಕರ ಬಲ: ಶಿವಮೊಗ್ಗ ವಿಧಾನಸಭಾ ಕ್ಷೇತ್ರಗಳಲ್ಲಿ ತೀರ್ಥಹಳ್ಳಿ, ಸಾಗರ, ಸೊರಬ ಮತ್ತು ಶಿವಮೊಗ್ಗ ನಗರ ಗ್ರಾಮಾಂತರಗಳನ್ನು ಬಿಜೆಪಿ ವಶ ಮಾಡಿಕೊಂಡು ಎಲ್ಲ ಶಾಸಕರ ಬೆಂಬಲವನ್ನು ಬಳಸಿಕೊಂಡಿತು.

4. ಬೈಂದೂರು ಲೀಡ್: ಸಾಂಪ್ರದಾಯಿಕವಾಗಿ ಬಿಜೆಪಿಗೆ ಲೀಡ್ ತಂದುಕೊಡುವ ಬೈಂದೂರು ಈ ಬಾರಿ ಸಹ 13 ಸಾವಿರಕ್ಕೂ ಅಧಿಕ ಮತಗಳನ್ನು ಕಮಲಕ್ಕೆ ನೀಡಿತು.

5. ಸಂಘಟನೆ ಕೊರತೆ: ಜೆಡಿಎಸ್ ಮತ್ತು ಕಾಂಗ್ರೆಸ್ ಗೆ ತಳಮಟ್ಟದ ಸಂಘಟನೆ ಕೊರತೆ ಇದ್ದದ್ದು ಬಹಳ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿತು.

6. ಅಂತಿಮ ಕ್ಷಣದ ಅಭ್ಯರ್ಥಿ: ದೋಸ್ತಿಗಳ ಪ್ರಕಾರ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಸ್ಪರ್ಧೆ ಮಾಡಬೇಕಾಗಿತ್ತು. ಆದರೆ ಅಂತಿಮ ಕ್ಷಣದಲ್ಲಿ ಅಭ್ಯರ್ಥಿ ಸಿಗದೇ ವಿದೇಶದಲ್ಲಿದ್ದ ಮಧು ಬಂಗಾರಪ್ಪಗೆ ಟಿಕೆಟ್ ನೀಡಲಾಗಿತ್ತು.