Asianet Suvarna News Asianet Suvarna News

ಉಪಚುನಾವಣೆ ಫಲಿತಾಂಶವನ್ನೇ ಬದಲಿಸಿದ್ದ ಆ ಒಂದು ಹೇಳಿಕೆ!

ರಾಜ್ಯದಲ್ಲಿ ಉಪಚುನಾವಣೆ ಬಿಸಿ ರಂಗೇರುತ್ತಿದೆ. ಈ ಸಂದರ್ಭದಲ್ಲಿ ಪ್ರತಿಯೊಬ್ಬ ಪ್ರಚಾರಕನ, ರಾಜಕೀಯ ನಾಯಕನ ಮಾತು ಮತ್ತು ನಡೆ ಬಹಳ ನಿರ್ಣಾಯಕವಾಗಿರುತ್ತದೆ. ಅವರಾಡುವ ಮಾತು ಚುನಾವಣೆ ಫಲಿತಾಂಶವನ್ನೇ ಬದಲಾಯಿಸಬಹುದು.. ಮಾತು ಆಡಿದರೆ ಹೋಯ್ತು..ಮುತ್ತು ಒಡೆದರೆ ಹೋಯ್ತು..!

Karnataka By Election 2018 BJP Leaders Personal Attack on HD Kumaraswamy
Author
Bengaluru, First Published Oct 30, 2018, 4:05 PM IST

ಬೆಂಗಳೂರು(ಅ.30) ಅದು ಗುಂಡ್ಲು ಪೇಟೆ ಮತ್ತು ನಂಜನಗೂಡು ಉಪಚುನಾವಣೆ ಸಮಯ. ಎರಡು ಕ್ಷೇತ್ರಗಳ ಉಪಚುನಾವಣೆ ಇಡೀ ರಾಜ್ಯದ ಗಮನ ಸೆಳೆದಿತ್ತು. ಜೆಡಿಎಸ್ ಅಖಾಡದಿಂದ ಹೊರಗೆ ಇದ್ದರೆ ಬಿಜೆಪಿ ಮತ್ತು ಕಾಂಗ್ರೆಸ್ ಪ್ರತಿಷ್ಠೆ ಪಣಕ್ಕೆ ಇಟ್ಟಿದ್ದವು. ಆದರೆ ಪ್ರಚಾರದ ವೇಳೆ ಬಿಜೆಪಿ ಸಂಸದ ಪ್ರತಾಪ್ ಸಿಂಹ ನೀಡಿದ ಒಂದು ಹೇಳಿಕೆ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಿತ್ತು.

ಸಚಿವರಾಗಿದ್ದಾಗಲೇ ನಿಧನರಾದ ಮಹದೇವ ಪ್ರಸಾದ್ ರಿಂದ ತೆರವಾದ ಸ್ಥಾನಕ್ಕೆ ಗುಂಡ್ಲುಪೇಟೆ ಚುನಾವಣೆ ನಡೆಯುತ್ತಿತ್ತು. ಪ್ರಚಾರದ ವೇಳೆ ಮಾತನಾಡುತ್ತ ಪ್ರತಾಪ್ ಸಿಂಹ 'ಮಹದೇವ ಪ್ರಸಾದ್ ಸಾವಿನ ನಾಲ್ಕೇ ದಿನಕ್ಕೆ, ಗೀತಾ ಕುರ್ಚಿ ಆಸೆ ಕಂಡಿದ್ದರು' ಎಂಬ ಅರ್ಥದಲ್ಲಿ ಮಾತನಾಡಿದ್ದರು. ಇದು ವ್ಯಾಪಕ ಟೀಕೆಗೆ ಗುರಿಯಾಗಿತ್ತು. ನಂತರ ಫಲಿತಾಂಶದಲ್ಲಿ ಗೀತಾ ಗೆದ್ದು ಬಂದಿದ್ದರು.

ಕಾಂಗ್ರೆಸ್ ಸೋಲಿನ ಅಸಲಿ ಕಾರಣ ಬಳ್ಳಾರಿಯಲ್ಲಿ ಬಹಿರಂಗ ಮಾಡಿದ ಮಾಜಿ ಸಿಎಂ!

ಈಗ ಮತ್ತೆ ಉಪಚುನಾವಣೆ ಎದುರಾಗಿದೆ. ಒಂದು ಕಡೆ ಬಿಜೆಪಿಯವರೇ ತಮಗೆ ಸಂಬಂಧ ಇಲ್ಲ ಎಂದು ಹೇಳಿರುವ ಜನಾರ್ದನ ರೆಡ್ಡಿ ಮಾಜಿ ಸಿಎಂ ಸಿದ್ದರಾಮಯ್ಯ ಹಿರಿಯ ಪುತ್ರ ರಾಕೇಶ್ ನಿಧನದ ಬಗ್ಗೆ ಮಾತನಾಡಿದ್ದಾರೆ. ತಮ್ಮನ್ನು ಅನವಶ್ಯಕವಾಗಿ ಜೈಲಿಗೆ ಕಳುಹಿಸಲಾಯಿತು ಎಂಬ ಅಸಮಾಧಾನ ಹೊರಹಾಕುವ ವೇಳೆ ರೆಡ್ಡಿ ಆಕ್ರೋಶ ಭರಿತರಾಗಿ ಮಾತನಾಡಿದ್ದಾರೆ. ರೆಡ್ಡಿ ಮಾತನ್ನು ಕೆಲ ಬಿಜೆಪಿ ನಾಯಕರೇ ವಿರೋಧಿಸಿದ್ದಾರೆ.

ಕುಮಾರಣ್ಣನಿಗೂ ಮೀಟೂ ಆರೋಪ ಎಂದ ಕುಮಾರ!

ಇನ್ನೊಂದು ಕಡೆ ಮೀ ಟೂ ಮುಂದಿಟ್ಟುಕೊಂಡು ಕುಮಾರ್ ಬಂಗಾರಪ್ಪ ಸಿಎಂ ಕುಮಾರಸ್ವಾಮಿ ಮೇಲೆಯೇ ಎರಗಿದ್ದಾರೆ. ರಾಧಿಕಾ ಅವರ ಹೆಸರನ್ನು ಎಳೆದು ತಂದಿದ್ದಾರೆ. ಒಟ್ಟಿನಲ್ಲಿ ಚುನಾವಣಾ ಸಂದರ್ಭದಲ್ಲಿ ಮತ್ತೆ ಬಿಜೆಪಿ ನಾಉಯಕರು ಮಾಡುತ್ತಿರುವ ಆರೋಪ ವೈಯಕ್ತಿಕ ಆರೋಪದ ಕಡೆ ಹೊರಳುತ್ತಿದೆ.

Follow Us:
Download App:
  • android
  • ios