ಶಿವಮೊಗ್ಗ, [ಅ.30]: ಸಾಮಾಜಿಕ ಮಾಧ್ಯಮಗಳಲ್ಲಿ ಮಹಿಳೆಯರಿಗಾದ ಲೈಂಗಿಕ ಕಿರುಕುಳದ ಅನುಭವಗಳನ್ನು ಹಂಚಿಕೊಳ್ಳುವ ಮಿಟೂ ಅಭಿಯಾನ ಇದೀಗ ಚುನಾವಣಾ ಪ್ರಚಾರ ಸಂದರ್ಭದಲ್ಲಿಯೂ ಕೇಳಿಬಂದಿದೆ.

ಎಷ್ಟೇ ರಾಜಕೀಯ ವೈಷಮ್ಯವಿದ್ದರೂ ಮುಖ್ಯಮಂತ್ರಿ ಕುಮಾರಸ್ವಾಮಿಯವರ ವೈಯಕ್ತಿಕ ವಿಚಾರ ಅದರಲ್ಲೂ ಅವರ ಎರಡನೇ ಪತ್ನಿ ವಿಷಯವನ್ನು ಯಾವುದೇ ಪಕ್ಷದ ನಾಯಕರು ಇದುವರೆಗೂ ತೆಗೆದಿರಲಿಲ್ಲ.

 ಅದ್ರಲ್ಲೂ ಚುನಾವಣೆ ಪ್ರಚಾರಗಳಲ್ಲಿ ಈ ವಿಷಯವನ್ನು ತೆಗೆದವರು ಯಾರೂ ಇರಲಿಲ್ಲ. ಆದ್ರೆ, ಇಂದು ಸಿಡಿದೆದ್ದಿರುವ ಕುಮಾರ್ ಬಂಗಾರಪ್ಪ, ಸಿಎಂ ಕುಮಾರಸ್ವಾಮಿ ವೈಯಕ್ತಿಕ ವಿಚಾರವನ್ನು ಕೆದಕಿದ್ದಾರೆ. 

ಶಿವಮೊಗ್ಗದಲ್ಲಿ ಬೈ ಎಲೆಕ್ಷನ್ ಪ್ರಚಾರದ ವೇಳೆ ರಾಧಿಕಾ ಕುಮಾರಸ್ವಾಮಿ ಹೆಸರು ಪ್ರಸ್ತಾಪಿಸಿದ ಕುಮಾರ್ ಬಂಗಾರಪ್ಪ, ರಾಧಿಕಾ ಕುಮಾರಸ್ವಾಮಿಯನ್ನೂ ಅಭ್ಯರ್ಥಿಯನ್ನಾಗಿ ಮಾಡಲಿ. ಯಾರನ್ನು ಇಟ್ಟುಕೊಂಡಿದ್ದಾರೋ ಅವರನ್ನು ಆಭ್ಯರ್ಥಿ ಮಾಡಲಿ. 

ಕುಮಾರಸ್ವಾಮಿಗೆ ಮೀಟೂ ಪರಿಸ್ಥಿತಿ ಬರುತ್ತದೆ ಎಂದ ಕುಮಾರ್ ಬಂಗಾರಪ್ಪ ಅವರು ಸಿಎಂ ಕುಮಾರಸ್ವಾಮಿ ವಿರುದ್ಧ ಕೆರಳಿ ಕೆಂಡವಾದರು.