ಬೆಂಗಳೂರು,(ಮೇ.12): ಕುಮಾರಸ್ವಾಮಿ ಅವರಿಗೆ ಬೆಂಗಳೂರಿಗೆ ಸ್ವಾಗತ' ಎಂದು ಕರ್ನಾಟಕ ಬಿಜೆಪಿ ಟ್ವೀಟ್‌ ಮೂಲಕ ಸ್ವಾಗತ ಕೋರಿದೆ.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ರೆಸಾರ್ಟ್ ವಾಸ್ತವ್ಯ ಭಾನುವಾರ ಅಂತ್ಯಗೊಂಡಿದೆ. ಇದನ್ನು ಲೇವಡಿ ಮಾಡಿದ್ದ ಕರ್ನಾಟಕ ಬಿಜೆಪಿ ಟ್ವೀಟ್‌ ಮಾಡಿ ಮುಖ್ಯಮಂತ್ರಿಗಳಿಗೆ ಬೆಂಗಳೂರಿಗೆ ಸ್ವಾಗತ ಎಂದು ವ್ಯಂಗ್ಯವಾಡಿದೆ.

ಮತ್ತೆ ರೆಸಾರ್ಟ್​ನತ್ತ ಮುಖ ಮಾಡಿದ ಕುಮಾರಸ್ವಾಮಿ, ದೇವೇಗೌಡ್ರು..!

ಮುಖ್ಯಮಂತ್ರಿಗಳ ರೆಸಾರ್ಟ್ ವಾಸ್ತವ್ಯ ಅಂತ್ಯವಾಗಿದ್ದು, ಮುಂದೇನು? ಎಂದು ಪ್ರಶ್ನೆ ಮಾಡಿದೆ. ಅಲ್ಲದೆ ಇನ್ನೇನಾದರೂ ಬೇರೆ ರೆಸಾರ್ಟ್ ಗೆ ತೆರಳುವವರಿದ್ದೀರಾ? ವಿದೇಶ ಪ್ರವಾಸದ ಯೋಜನೆ ಏನಾದರೂ ಇದೆಯೆ? ಕಣ್ಣೀರು ಹಾಕುವ ಕಾರ್ಯಕ್ರಮ? ಬಿಜೆಪಿಯನ್ನು ದೂರುವ ಕಾರ್ಯಕ್ರಮಗಳಿದೆಯೆ? ಎಂದೂ ಪ್ರಶ್ನೆಸಿದೆ.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಡಿಕೇರಿಯ ಇಬ್ಬನಿ ರೆಸಾರ್ಟ್‌ನಲ್ಲಿ ಶುಕ್ರವಾರ ರಾತ್ರಿಯಿಂದ ವಾಸ್ತವ್ಯ ಹೂಡಿದ್ದರು. ಅನಿತಾ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ, ಸಚಿವ ಸಾ.ರಾ.ಮಹೇಶ್ ಅವರು ಸಹ ಜೊತೆಗಿದ್ದರು. ಇಂದು (ಭಾನುವಾರ) ಸಂಜೆ ಅವರು ಬೆಂಗಳೂರಿಗೆ ಆಗಮಿಸುವ ಸಾಧ್ಯತೆ ಇದೆ.