ಬೆಂಗಳೂರು, (ಮೇ.09): ಇತ್ತೀಚೆಗೆ ಉಡುಪಿ ಬಳಿಯ ರೆಸಾರ್ಟ್​ನಲ್ಲಿ ಚಿಕಿತ್ಸೆ ಪಡೆದು ಬೆಂಗಳೂರಿಗೆ ಮರಳಿದ್ದ ಸಿಎಂ ಎಚ್​.ಡಿ. ಕುಮಾರಸ್ವಾಮಿ ಮತ್ತೆ ರೆಸಾರ್ಟ್​ನತ್ತ ಮುಖ ಮಾಡಿದ್ದಾರೆ. 

ನಾಳೆ (ಶುಕ್ರವಾರ) ಸಂಜೆ ಕುಮಾರಸ್ವಾಮಿ ಅವರು ಮಡಿಕೇರಿ ಬಳಿಯ ರೆಸಾರ್ಟ್‌ಗೆ ತೆರಳಲಿದ್ದು, ತಮ್ಮ ಕುಟುಂಬದೊಂದಿಗೆ ಮೇ 11 ಮತ್ತು 12 ರಂದು 2 ದಿನರೆಸಾರ್ಟ್​ನಲ್ಲಿ ವಾಸ್ತವ್ಯ ಹೂಡಲಿದ್ದಾರೆ.

ಒಂದೇ ವಿಮಾನದಲ್ಲಿ ಕಾಪುವಿಗೆ ತೆರಳಿದ HDK ಮತ್ತು HDD

ಮತ್ತೊಂದೆಡೆ ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ  ಅವರು ಪತ್ನಿ ಚೆನ್ನಮ್ಮ ಜತೆ ಪ್ರಕೃತಿ ಚಿಕಿತ್ಸೆಗಾಗಿ ಉಡುಪಿ ಬಳಿಯ ರೆಸಾರ್ಟ್​ಗೆ ತೆರಳಿದ್ದಾರೆ.

ಇತ್ತೀಚೆಗೆ ಪುತ್ರ ಎಚ್​ಡಿಕೆ ಜತೆ ಚಿಕಿತ್ಸೆ ಪಡೆದಿದ್ದ ಎಚ್​.ಡಿ. ದೇವೇಗೌಡ ಅವರು ಪುನಃ ಪತ್ನಿ ಚೆನ್ನಮ್ಮ ಅವರೊಂದಿಗೆ ಪ್ರಕೃತಿ ಚಿಕಿತ್ಸೆಗಾಗಿ ಮತ್ತೆ ಉಡುಪಿಯ ರೆಸಾರ್ಟ್​ಗೆ ತೆರಳಿದ್ದಾರೆ.

ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಮುಳೂರಿನಲ್ಲಿರುವ ಸಾಯಿರಾಧ ರೆಸಾರ್ಟ್​ನಲ್ಲಿ 5 ದಿನ ಚಿಕತ್ಸೆ ಪಡೆಯಲಿದ್ದಾರೆ ಎಂದು ತಿಳಿದು ಬಂದಿದೆ.

ಈ ಹಿಂದೆ ಸಿಎಂ  ರೇಸಾರ್ಟ್‌ನಲ್ಲಿದ್ದಾಗ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದರು. ರಾಜ್ಯದಲ್ಲಿ ಕುಡಿಯುವ ನೀರಿಗೆ ತೀವ್ರ ಆಹಾಕಾರ ಉಂಟಾಗಿದ್ದು, ಬರಗಾಲ ಇದೆ.ಇದನ್ನು ಸಮರ್ಪಕವಾಗಿ ನಿಭಾಹಿಸುವ ಬದಲು ಸಿಎಂ ರೇಸಾರ್ಟ್ ನಲ್ಲಿ ಕುತುಳಿತ್ತಿದ್ದಾರೆ ಎಂದು ವಿರೋಧ ಪಕ್ಷ ಬಿಜೆಪಿ ನಾಯಕರು ಆರೋಪಿಸಿದ್ದರು.