ಬೆಂಗಳೂರು(ಜ.16] ಅನಾರೋಗ್ಯದಿಂದ  ಆಸ್ಪತ್ರೆಗೆ ದಾಖಲಾಗಿದ್ದ  ಖಾಸಗಿ ಸುದ್ದಿ ವಾಹಿನಿ ದಿಗ್ವಿಜಯ ನ್ಯೂಸ್‌ನ ಸಿಬ್ಬಂದಿ ಅಮಿತ್ ತುಬಾಚಿ​ (24) ಬುಧವಾರ ಮಧ್ಯಾಹ್ನ ನಿಧನರಾಗಿದ್ದಾರೆ. ಅವರ ಅಂಗಾಂಗಗಳನ್ನು ಪೋಷಕರು ದಾನ ಮಾಡಿ ಆದರ್ಶಪ್ರಾಯರಾಗಿದ್ದಾರೆ.

ಒಂದೂವರೆ ವರ್ಷದಿಂದ ದಿಗ್ವಿಜಯ ನ್ಯೂಸ್ ಪ್ರೊಡಕ್ಷನ್ ವಿಭಾಗದಲ್ಲಿ ಪ್ರೊಡಕ್ಷನ್ ಅಸೋಸಿಯೇಟ್ ಆಗಿ ಅಮಿತ್ ಕಾರ್ಯನಿರ್ವಹಿಸುತ್ತಿದ್ದರು. 

ನೌಕರ ಹೃದಯಾಘಾತದಿಂದ ಮೃತಪಟ್ಟರೂ ವಿಮೆ ಹಣ

ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಯಮಕನಮರಡಿಯ ಅಮಿತ್ ಮೂರು ದಿನಗಳಿಂದ ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಕೊನೆಯುಸಿರೆಳೆದಿದ್ದಾರೆ. ಅವರ ಹುಟ್ಟೂರಿನಲ್ಲಿ ಗುರುವಾರ ಅಂತ್ಯಕ್ರಿಯೆ ನಡೆಯಲಿದೆ.