ಈತ ಕನ್ನಡ ಸಂಘಟನೆಯವನ್ನು ಅಂತ ಹೇಳ್ತಾನೆ ಆದ್ರೆ ಮಹಿಳೆಯರ ಮೇಲೆ ದೌರ್ಜನ್ಯಕ್ಕೆ ಯತ್ನಿಸ್ತಾನೆ, ಈ ಕನ್ನಡ ಸಂಘಟನೆ ಕಾರ್ಯಕರ್ತನ ಕಾಮಲೀಲೆ ಕೇಳಿದ್ರೆ ನೀವು ಬಿಚ್ಚಿಬೀಳ್ತಿರಿ.
ಬೆಂಗಳೂರು(ಅ.05): ಈತ ಕನ್ನಡ ಸಂಘಟನೆಯವನ್ನು ಅಂತ ಹೇಳ್ತಾನೆ ಆದ್ರೆ ಮಹಿಳೆಯರ ಮೇಲೆ ದೌರ್ಜನ್ಯಕ್ಕೆ ಯತ್ನಿಸ್ತಾನೆ, ಈ ಕನ್ನಡ ಸಂಘಟನೆ ಕಾರ್ಯಕರ್ತನ ಕಾಮಲೀಲೆ ಕೇಳಿದ್ರೆ ನೀವು ಬಿಚ್ಚಿಬೀಳ್ತಿರಿ.
ಆನೇಕಲ್'ನ ಮಹದೇವಪುರದಲ್ಲಿ ಸೆಪ್ಟೆಂಬರ್ 22ರಂದು ಮಹಿಳೆಯರು ವಾಸವಾಗಿರುವ ಮನೆಗೆ ನುಗ್ಗಿ ಅತ್ಯಾಚಾರಕ್ಕೆ ಈ ಕಾಮುಖಿ ಮರುಳಿಧರ ಯತ್ನಿಸಿದ್ದಾನೆ. ಈ ವೇಳೆ ಮಹಿಳೆಯರ ಚೀರಾಟ ಕಂಡು ಮನೆಯಿಂದ ಹಾರಿ ಪರಾರಿಯಾಗಿದ್ದಾನೆ. ಈ ವೇಳೆ ಕಾಮುಕನನ್ನ ಕಂಡು ಮಹಿಳೆಯರು ಕೂಗಾಡಿದಕ್ಕೆ ಮನೆಯ ಮಾಲೀಕರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಬೀದಿ ಕಾಮುಕ ಮುರಳಿಯನ್ನ ಮಹದೇವಪುರ ಪೊಲೀಸರು ಬಂಧಿಸಿದ್ದಾರೆ. ಕಾಮುಕ ರಸ್ತೆಗೆ ಹಾರಿ ಪರಾರಿಯಾಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
