ದೋಹಾ, ಕತಾರ್‌ನಲ್ಲಿ ಕನ್ನಡ ಕಲರವ
ಕತಾರ್ ಕರ್ನಾಟಕ ಸಂಘದಿಂದ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗಿದ್ದು, ಎಸ್. ಎಲ್. ಭೈರಪ್ಪನವರು ಮತ್ತು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.
ಕತಾರ್(ನ.20): ಕತಾರ್ ಕರ್ನಾಟಕ ಸಂಘದಿಂದ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗಿದ್ದು, ಎಸ್. ಎಲ್. ಭೈರಪ್ಪನವರು ಮತ್ತು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.
ಅಲ್ ವಕ್ರಾದಲ್ಲಿಇರುವ ಡಿ.ಪಿ.ಎಸ್-ಎಂ.ಐ.ಎಸ್ ಶಾಲೆಯ ಸಭಾಂಗಣದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕತಾರ್‌ನಲ್ಲಿ ನ.15ರಂದು 64ನೇ ಕರ್ನಾಟಕ ರಾಜ್ಯೋತ್ಸವವನ್ನು ಹಾಗೂ ಸಂಘದ 20ನೇ ವಾರ್ಷಿಕೋತ್ಸವವನ್ನು ಆಚರಿಸಲಾಯಿತು. ಮಧುರವಾದ ಸಂಗೀತ, ಚಲನ ಚಿತ್ರದ ಹಾಡುಗಳು, ನೃತ್ಯ-ನಾಟಕಗಳು ಸಾಂಸ್ಕೃತಿಕ ಸಂಜೆಯ ವಿಜೃಂಭಣೆಯನ್ನು ದ್ವಿಗುಣಗೊಳಿಸಿತು.
ಕನ್ನಡದಲ್ಲಿ ಕನ್ನಡಿಗರಿಗೆ ಶುಭಾಶಯ: ಎಷ್ಟು ಚೆಂದ ಅನುಷ್ಕಾ ಭಾಷಾ ಲಯ!
ಕಾದಂಬರಿಕಾರ ಪದ್ಮಶ್ರೀ ಡಾ. ಎಸ್.ಎಲ್ ಭೈರಪ್ಪ ಅವರನ್ನು 2019ನೇ ಸಾಲಿನ ‘ಕತಾರ್ ಕನ್ನಡ ಸಮ್ಮಾನ್’ ಪುರಸ್ಕಾರವನ್ನು ನೀಡಿ ಸನ್ಮಾನಿಸಲಾಯಿತು. ಪುನೀತ್ ಅವರಿಗೆ “ ಕಲಾ ಸಾರ್ವಭೌಮ” ಎಂಬ ಬಿರುದನ್ನು ನೀಡಿ ಸನ್ಮಾನಿಸಲಾಯಿತು.
ಅಮೆರಿಕಾದ ಆಲ್ಬನಿಯಲ್ಲಿ ಅದ್ದೂರಿ ಕನ್ನಡ ರಾಜ್ಯೋತ್ಸವ
ಪದ್ಮಶ್ರೀ ಡಾ. ಎಸ್. ಎಲ್. ಭೈರಪ್ಪನವರು ಮತ್ತು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ವಿಶೇಷ ಗೌರವ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಾರ್ವಜನಿಕ ಸಮಾರಂಭದಲ್ಲಿ ಕರ್ನಾಟಕ ಸಂಘ ಕತಾರಿನ ಪ್ರತಿನಿಧಿಗಳು ಕತಾರಿನಲ್ಲಿರುವ ಭಾರತೀಯ ಸಮುದಾಯದ ಸಲುವಾಗಿ ಅನುದಾನ ನೀಡಿದ್ದಾರೆ.
ಭಾರತೀಯ ರಾಯಭಾರಿಗಳಾದ ಪಿ. ಕುಮರನ್, ವಿಶೇಷ ಅತಿಥಿಗಳಾಗಿ ಭಾಗವಹಿಸಿದ್ದ ಎಸ್. ಎಲ್. ಭೈರಪ್ಪ ಮತ್ತು ಶ್ರೀಪುನೀತ್ ರಾಜ್ ಕುಮಾರ್ 'ಭಾರತೀಯ ಸಮುದಾಯ ಹಿತ ನಿಧಿ ಸಂಘದ ತಾತ್ಕಾಲಿಕ ಅಧ್ಯಕ್ಷ ಶ್ರೀಮಹೇಶ ಗೌಡ ಹಾಗೂ ಸಂಘದ ಜಂಟಿ ಕಾರ್ಯದರ್ಶಿ ಶ್ರೀಸುಬ್ರಮಣ್ಯ ಹೆಬ್ಬಾಗಿಲು ಇವರನ್ನು ಆಮಂತ್ರಿಸಿ ಚೆಕ್ ನೀಡಿದ್ದಾರೆ.
ಪುನೀತ್ ದಂಪತಿ ಹಾಗು ಭೈರಪ್ಪನವರನ್ನು ವಾದ್ಯಗೋಷ್ಠಿಯ ಮೆರೆವಣಿಗೆಯಲ್ಲಿ ಸಭಾಂಗಣಕ್ಕೆ ಕರೆತಂದು, ಶ್ರೀ ಕುಮರನ್ ಹಾಗು ಸಂಘದ ಹಿರಿಯ ಸದಸ್ಯರ ಜೊತೆಗೂಡಿ ದೀಪ ಬೆಳಗಿಸಿದ ಬಳಿಕ, ಸಂಘದ ಕಾರ್ಯಕಾರಿ ಸಮಿತಿ ಹಾಗು ಸಲಹಾ ಸಮಿತಿಯ ಸದಸ್ಯರು ಕೂಡಿ ನಾಡಗೀತೆಯನ್ನು ಹಾಡಿದ್ದಾರೆ.
ಬೆಂಗಳೂರು: ಅಪೋಲೋ ಆಸ್ಪತ್ರೆಯಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮ
ಸಾಂಸ್ಕೃತಿಕ ಕಲರವ
ಹಿನ್ನೆಲೆ ಗಾಯಕರಾದ ಶೀ ಹರ್ಷಾ ಹಾಗು ಕು. ಮೈತ್ರಿ ಐಯ್ಯರ್‌ರವರ ಗಾಯನ ನೆರೆದವರೆಲ್ಲರನ್ನು ಕುಣಿಸಿ ನಲಿಸಿತು. ಡಾ. ಸಂಜಯ್ ಶಾಂತಾರಾಮ್‌ರವರ ಶಿವಪ್ರಿಯ ತಂಡ ಪ್ರದರ್ಶಿಸಿದ ನೃತ್ಯ ರೂಪಕವು ಅತ್ಯುನ್ನತ ಪ್ರದರ್ಶನವೆಂದು ಪ್ರಶಂಸೆ ಪಡೆಯಿತು. ಪ್ರಖ್ಯಾತ ಟಿ.ವಿ. ನಟ ಹಾಗು ನಿರೂಪಕ ವಿಜಯೇಂದ್ರ ಅಥಣೀಕರ್‌ರವರು ಕಾರ್ಯಕ್ರಮ ನಡೆಸಿಕೊಟ್ಟಿದ್ಧಾರೆ.
ಸಂಘದ ಸದಸ್ಯರು ಹಾಗು ಮಕ್ಕಳು ಪುನೀತ್‌ರವರು ಅಭಿನಯಿಸಿದಂತ ಸಿನಿಮಾ ಹಾಡುಗಳ ಮೆಡ್ಲೆ, ಹಾಗು ಡಾ. ರಾಜಕುಮಾರ್‌ರವರ ಕುರಿತು ನೃತ್ಯರೂಪಕವನ್ನು ಪ್ರದರ್ಶಿಸಿ ಪುನೀತ್‌ರವರ ಮೆಚ್ಚುಗೆಯನ್ನು ಪಡೆದರು. ಬಂಟ್ಸ್ ಕತಾರ್‌ನ ಸದಸ್ಯರು ಸಿದ್ಧಗಂಗೆಯ ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿಯವರ ಕುರಿತು, ತುಳು ಕೂಟದ ಸದಸ್ಯರು ಪಂಚಭೂತಗಳು ಹಾಗು ಅವುಗಳಲ್ಲಿ ಉಂಟಾಗುತ್ತಿರುವ ಮಾಲಿನ್ಯದ ಬಗೆಗೆ, ಕತಾರ್ ಬಿಲ್ಲವಾಸ್‌ರವರು ಪರಿಸರ / ಕಾಡುಗಳ ಸಂರಕ್ಷಣೆ ಹೀಗೆ ನಟನೆ-ನಾಟ್ಯ ತುಂಬಿದ ಕೃತಿಗಳನ್ನು ಪ್ರದರ್ಶಿಸಿದ್ದಾರೆ.
ಜೋಗಿ ಸವಾಲು ಸ್ವೀಕರಿಸಿ ಕುವೆಂಪು ಕವನ ವಾಚಸಿದ ಯಶ್.
ಕರ್ನಾಟಕ ಮೂಲದ ಸಂಘ ಸಂಸ್ಥೆಗಳಾದ ತುಳು ಕೂಟ, ಬಂಟ್ಸ್ ಕತಾರ್, ಎಸ್. ಕೆ.ಎಮ್. ಡಬ್ಲ್ಯೂ, ಕೆ.ಎಮ್.ಸಿ.ಎ., ಎಂ.ಸಿ.ಸಿ, ಕತಾರ್ ಬಿಲ್ಲವಾಸ್ ಹಾಗು ಎಂ.ಸಿ.ಎ ಸಂಘಟನೆಗಳ ಅಧ್ಯಕ್ಷರು ಹಾಗು ಕಾರ್ಯಕಾರಿ ಸಮಿತಿಯ ಸದಸ್ಯರು ಇದ್ದರು.