ಕಟ್ಟಪ್ಪ ಬಾಹುಬಲಿಯನ್ನು ಕೊಂದಿದ್ದು ಏಕೆ? ಈ ಪ್ರಶ್ನೆಗೆ ತಮಿಳು ನಟ ಸತ್ಯರಾಜ್‌ ಉತ್ತರ ನೀಡಬೇಕು. ಇಷ್ಟುದಿನ ಈ ಪ್ರಶ್ನೆಗೆ ಉತ್ತರ ನೀಡದೇ ಸತಾಯಿಸಿದ್ದಕ್ಕೆ ಕನ್ನಡಿ ಗರ ಕ್ಷಮೆ ಕೇಳಬೇಕು. ಕೇವಲ ವಿಷಾದ ವ್ಯಕ್ತಪಡಿಸಿ, ಕನ್ನಡಿಗರ ಕ್ಷಮೆ ಯಾಚಿಸದೇ ಇದ್ದರೆ ಮತ್ತೊಮ್ಮೆ ಪ್ರತಿಭ ಟನೆ ನಡೆಸಲಾಗುವುದು.

ಕನ್ನಡಿಗರ ಬಗ್ಗೆ ಅವಮಾನಕರ ಹೇಳಿಕೆ ನೀಡಿದ್ದಕ್ಕೆ ಕಟ್ಟಪ್ಪ ಪಾತ್ರಧಾರಿ ಸತ್ಯರಾಜ್‌ ಕ್ಷಮೆ ಯಾಚಿಸಿದ ಹಿನ್ನೆಲೆಯಲ್ಲಿ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ಹಿಂಪಡೆದಿವೆ. ಆದರೆ, ಕನ್ನಡ ಚಳವಳಿ ವಾಟಾಳ್‌ ಪಕ್ಷದ ಅಧ್ಯಕ್ಷ ವಾಟಾಳ್‌ ನಾಗರಾಜ್‌ ಹೊಸ ವರಸೆ ತೆಗೆದಿದ್ದಾರೆ.

 ಕಟ್ಟಪ್ಪ ಬಾಹುಬಲಿಯನ್ನು ಕೊಂದಿದ್ದು ಏಕೆ? ಈ ಪ್ರಶ್ನೆಗೆ ತಮಿಳು ನಟ ಸತ್ಯರಾಜ್‌ ಉತ್ತರ ನೀಡಬೇಕು. ಇಷ್ಟುದಿನ ಈ ಪ್ರಶ್ನೆಗೆ ಉತ್ತರ ನೀಡದೇ ಸತಾಯಿಸಿದ್ದಕ್ಕೆ ಕನ್ನಡಿ ಗರ ಕ್ಷಮೆ ಕೇಳಬೇಕು. ಕೇವಲ ವಿಷಾದ ವ್ಯಕ್ತಪಡಿಸಿ, ಕನ್ನಡಿಗರ ಕ್ಷಮೆ ಯಾಚಿಸದೇ ಇದ್ದರೆ ಮತ್ತೊಮ್ಮೆ ಪ್ರತಿಭ ಟನೆ ನಡೆಸಲಾಗುವುದು. ಕಟ್ಟಪ್ಪ ಬಾಹುಬಲಿಯನ್ನು ಕೊಂದಿದ್ದು ಏಕೆ ಎಂಬುದನ್ನು ಸತ್ಯರಾಜ್‌ ಕನ್ನಡದಲ್ಲೇ ತಿಳಿಸಬೇಕು. ಇಲ್ಲವಾದರೆ ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡುವುದಿಲ್ಲ ಎಂದು ವಾಟಾಳ ನಾಗರಾಜ್‌ ಸುಳ್‌ ಸುದ್ದಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಸೂಚನೆ: ಇದು ಕನ್ನಡಪ್ರಭ ಸುಳ್'ಸುದ್ದಿ ಅಂಕಣ: ಓದುಗರ ಬಾಯಲ್ಲಿ ನಗು ಬರಿಸುವುದಷ್ಟೆ ಈ ಸುದ್ದಿಯ ಉದ್ದೇಶ.