ಕೆಜಿಎಫ್ ಚಿತ್ರದ ಬಿಡುಗಡೆಗೆ ಸಿಟಿ ಸಿವಿಲ್ ಕೋರ್ಟ್ ತಡೆಯಾಜ್ಞೆ ನೀಡಿದ್ದರೂ, ರಿಲೀಸ್ ಮಾಡಿಯೇ ಸಿದ್ಧ ಎಂದು ಸಿನಿಮಾ ಟೀಂ ಹೇಳಿದೆ. ಹಾಗಾದ್ರೆ ಸ್ವತಃ ಕೆಜಿಎಫ್ ಚಿತ್ರದ ನಿರ್ಮಾಪಕ ಹೇಳಿದ್ದೇನು?ಇಲ್ಲಿದೆ. 

ಬೆಂಗಳೂರು, [ಡಿ.20]:  ಬಹುನಿರೀಕ್ಷಿತ KGF ಚಿತ್ರವನ್ನು 2019 ಜನವರಿ 7ರ ವರೆಗೆ ಬಿಡುಗಡೆ ಮಾಡದಂತೆ ಬೆಂಗಳೂರಿನ ಎಸಿಎಂಎಂ ಕೋರ್ಟ್ ಮಧ್ಯಂತರ ತಡೆ ನೀಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮತ್ತೊಂದೆಡೆ ನಿಗದಿಯಂತೆ ನಾಳೆ [ಡಿ.21] ಕೆಜಿಎಫ್ ಚಿತ್ರವನ್ನು ರಿಲೀಸ್ ಮಾಡಿಯೇ ಸಿದ್ಧ ಎಂದು ಚಿತ್ರ ತಂಡ ಹೇಳುತ್ತಿದೆ. ಇನ್ನು ಈ ಬಗ್ಗೆ ಮಾಧ್ಯಮ ಪ್ರಕಟಣೆ ಮೂಲಕ KGF ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರು ಪ್ರತಿಕ್ರಿಯಿಸಿದ್ದಾರೆ.

KGF ರಿಲೀಸ್‌ಗೆ ತಡೆ: ಟಿಕೆಟ್ ಬುಕ್ ಮಾಡಿ ಎಂದ ಯಶ್

View post on Instagram

ನಿರ್ಮಾಪಕ ವಿಜಯಕುಮಾರ್ ತಿಳಿಸಿದಂತೆ ಜಗತ್ತಿನಾದ್ಯಂತ 2000 ಚಿತ್ರಮಂದಿರಗಳಲ್ಲಿ ಸಿನಿಮಾವನ್ನು ಪ್ರದರ್ಶನ ಮಾಡಿಯೇ ಸಿದ್ಧ. ಕೋರ್ಟ್ ನಿಂದ ಯಾವುದೇ ಅಡತಡೆಯ ಕಾನೂನಾತ್ಮಕ ಪತ್ರಗಳು ನಮಗೆ ಬಂದಿರುವುದಿಲ್ಲ ನಾಳೆ ಎಂದಿನಂತೆ ಪ್ರದರ್ಶನ ವಿರುತ್ತದೆ. 

KGF ಚಿತ್ರಕ್ಕೆ ಸಂಕಷ್ಟ: ಡಿ.21ಕ್ಕೆ ಬಿಡುಗಡೆ ಇಲ್ಲ

ದೇಶದಾದ್ಯಂತ ಚಿತ್ರ ಬಿಡುಗಡೆಯಾಗಲಿದೆ. ಪ್ರೇಕ್ಷಕರಲ್ಲಿ ಯಾವುದೇ ರೀತಿಯ ಗೊಂದಲ ಬೇಡ ಎಂದು ಸ್ಪಷ್ಟಪಡಿಸಿದ್ದಾರೆ.