Asianet Suvarna News Asianet Suvarna News

ಇಂದು ದುನಿಯಾ ವಿಜಿಗೆ ಪರಪ್ಪನ ಆಗ್ರಹಾರ ಜೈಲ್ ಗತಿ

ಜಿಮ್ ಟ್ರೈನರ್ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅರೆಸ್ಟ್ ಆಗಿರುವ ನಟ ದುನಿಯಾ ವಿಜಯ್ ಗೆ ಇಂದು ಪರಪ್ಪನ ಆಗ್ರಹಾರ ಜೈಲ್ ಗತಿ.

Kannada Actor Duniya Vijay To Be Shifted To Central Jail
Author
Bengaluru, First Published Sep 23, 2018, 10:43 AM IST
  • Facebook
  • Twitter
  • Whatsapp

ಬೆಂಗಳೂರು, [ಸೆ.23]:  ಜಿಮ್ ಟ್ರೈನರ್ ಮೇಲೆ ಹಲ್ಲೆ ಮಾಡಿದ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದುನಿಯಾ ವಿಜಯ್ ಗೆ ಪರಪ್ಪನ ಆಗ್ರಹಾರ ಜೈಲ್ ಗತಿ.

ಪಾನಿಪೂರಿ ಕಿಟ್ಟಿ ಅಣ್ಣನ ಮಗನನ್ನು ಕಿಡ್ನಾಪ್ ಮಾಡಿ ಮಾರಣಾಂತಿಕವಾಗಿ ಹಲ್ಲೆ ಮಾಡಿದ ಹಿನ್ನೆಲೆಯಲ್ಲಿ ಬಂಧನಕ್ಕೆ ಒಳಪಡಿಸಲಾಗಿದೆ. 

ಇಂದು ಭಾನುವಾರ ಆಗಿದ್ದರಿಂದ ಕೋರ್ಟ್ ರಜೆ ಇದೆ. ಈ ಹಿನ್ನೆಲೆಯಲ್ಲಿ ಪೊಲೀಸರು ದುನಿಯಾ ವಿಜಿಯನ್ನು ನ್ಯಾಯಾಧೀಶರ ಮನೆಗೆ ಕರೆದೊಯ್ದು ಜಡ್ಜ್ ಮುಂದೆ  ಹಾಜರುಪಡಿಸಲಿದ್ದಾರೆ. 

ಇದನ್ನು ಓದಿ: ನಟ ದುನಿಯಾ ವಿಜಯ್ ಅರೆಸ್ಟ್

ಕೋರ್ಟ್ ರಜೆ ಇರೋದ್ರಿಂದ ಯಾವುದೇ  ಕಾರಣಕ್ಕೂ ಜಾಮೀನು ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ. ಹಾಗಾಗಿ ವಿಜಿ ಇಂದು ಪರಪ್ಪನ ಆಗ್ರಹಾರ ಸೇರುವುದು ಖಚಿತವಾಗಿದೆ.

Follow Us:
Download App:
  • android
  • ios