Asianet Suvarna News Asianet Suvarna News

ಕೊನೆಗೂ ದುನಿಯಾ ವಿಜಿಗೆ ಸಿಕ್ತು ಬೇಲ್: ಷರತ್ತುಗಳು ಅನ್ವಯ

ಮಾರುತಿಗೌಡ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದುನಿಯಾ ವಿಜಯ್ ಗೆ ಬಿಗ್ ರಿಲೀಫ್.

Kannada Actor Duniya Vijay Gets Bail on Maruthi Gowda assault case
Author
Bengaluru, First Published Oct 1, 2018, 3:29 PM IST
  • Facebook
  • Twitter
  • Whatsapp

ಬೆಂಗಳೂರು, (ಅ.1): ಪಾನಿಪುರಿ ಕಿಟ್ಟಿ ಸಹೋದರನ ಮಗ ಮಾರುತಿಗೌಡ ಮೇಲಿನ ಹಲ್ಲೆ ಹಾಗೂ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದುನಿಯಾ ವಿಜಯ್ ಗೆ ಬಿಗ್ ರಿಲೀಫ್ ಸಿಕ್ಕಿದೆ.ಮಾರುತಿಗೌಡ ಮೇಲಿನ ಹಲ್ಲೆ ಪ್ರಕರಣದಲ್ಲಿ ಬಂಧಿತರಾಗಿರುವ ದುನಿಯಾ ವಿಜಿಗೆ ಜಾಮೀನು ನೀಡಲಾಗಿದೆ. ಬೆಂಗಳೂರು ಸಿಟಿ ಸೆಷನ್ಸ್ ಕೋರ್ಟ್ ಇಂದು ವಿಜಿಗೆ ಷರತ್ತು ಬದ್ದ ಜಾಮೀನು ನೀಡಿ ಆದೇಶ ಹೊರಡಿಸಿದೆ.

"

2ನೇ ಪತ್ನಿಗಾಗಿ ಜೈಲಿಂದ ದುನಿಯಾ ವಿಜಿ ಪತ್ರ

ಒಂದು ಲಕ್ಷ ಬಾಂಡ್ ಹಾಗೂ ಇಬ್ಬರನ್ನು ಶ್ಯೂರಿಟಿ ನೀಡಲು ಕೋರ್ಟ್ ಸೂಚಿಸಿದೆ. ನೀವು ಹೀರೋ ಎಲ್ಲರಿಗೂ ರೋಲ್ ಮಾಡೆಲ್ ಆಗಬೇಕು. ಇಂತಹ ಪ್ರಕರಣದಡಿಯಲ್ಲಿ ನೀವು ಕೋರ್ಟ್ ಮೆಟ್ಟಿಲೇರಬೇಡಿ ದುನಿಯಾ ವಿಜಿಗೆ  ಜಡ್ಜ್ ರಾಮಲಿಂಗೇಗೌಡ ಸಲಹೆ ಮೂಲಕ ಪರೋಕ್ಷವಾಗಿ ಎಚ್ಚರಿಯನ್ನೂ ಸಹ ನೀಡಿದ್ದಾರೆ..

'ನನ್ನ ಮಕ್ಕಳ ಚಿನ್ನಾಭರಣಗಳನ್ನು ಕದ್ದು ಕೀರ್ತಿಗೌಡ ಎಸ್ಕೇಪ್'

ಜಾಮೀನು ಮಂಜೂರು ಆಗುತ್ತಿದ್ದಂತೆಯೇ ಹೊಸಕೆರೆಹಳ್ಳಿಯಲ್ಲಿರುವ ದುನಿಯಾ ವಿಜಿ ನಿವಾಸದ ಮುಂದೆ ಅವರ ಅಭಿಮಾನಿಗಳು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ.

Follow Us:
Download App:
  • android
  • ios