2ಜಿ ಹಗರಣದಲ್ಲಿ ಆರೋಪ ಹೊತ್ತಿದ್ದ ಕನಿಮೋಳಿಗೆ ಇದೀಗ ಪ್ರಕರಣದಿಂದ ಮುಕ್ತಿ ಸಿಕ್ಕಿದೆ. ಅವರನ್ನು ಆರೋಪ ಮುಕ್ತ ಮಾಡಿ ಕಾಪಾಡುವಲ್ಲಿ ಒಬ್ಬರ ಪಾತ್ರ ಹೆಚ್ಚಿದೆಯಂತೆ, ಅವರ್ಯಾರು ಗೊತ್ತಾ..?

ಉಡುಪಿ (ಡಿ.24): 2ಜಿ ಹಗರಣದಲ್ಲಿ ಆರೋಪ ಹೊತ್ತಿದ್ದ ಕನಿಮೋಳಿಗೆ ಇದೀಗ ಪ್ರಕರಣದಿಂದ ಮುಕ್ತಿ ಸಿಕ್ಕಿದೆ. ಅವರನ್ನು ಆರೋಪ ಮುಕ್ತ ಮಾಡಿ ಕಾಪಾಡುವಲ್ಲಿ ಒಬ್ಬರ ಪಾತ್ರ ಹೆಚ್ಚಿದೆಯಂತೆ, ಅವರ್ಯಾರು ಗೊತ್ತಾ ಉಡುಪಿಯ ಶ್ರೀ ಕೃಷ್ಣ..! ಕನಕನಿಗೆ ಒಲಿದ ಶ್ರೀ ಕೃಷ್ಣ ಇದೀಗ ಕನಿಮೋಳಿಗೆ ಒಲಿದಿದ್ದಾನಂತೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಪ್ರಕರಣದ ಅಡಿಯುಲ್ಲಿ ಕನಿಮೋಳಿ ತಿಹಾರ್ ಜೈಲು ಸೇರಿದ್ದಾಗ, ಕನಿಮೋಳಿಯ ತಾಯಿ ರಜತಿ ಅಮ್ಮಾಳ್ ಕೃಷ್ಣ ದೇವರ ದರ್ಶನಕ್ಕೆ ಆಗಮಿಸಿದ್ದರು. 2011ರಲ್ಲಿ ದೇವರ ಸನ್ನಿಧಾನಕ್ಕೆ ಬಂದು ತಮ್ಮ ಕಷ್ಟವನ್ನು ಹೇಳಿಕೊಂಡು ಹಸರುವಂತೆ ಕೇಳಿಕೊಂಡಿದ್ದರು.

ಈ ವೇಳೆ ಇಲ್ಲಿನ ಶಿರೂರು ಸ್ವಾಮೀಜಿ ನಿಮ್ಮ ಮಗಳು 48 ದಿನಗಳಲ್ಲಿ ಬಿಡುಗಡೆಯಾಗುತ್ತಾರೆ ಎಂದು ಹೇಳಿದ್ದರಂತೆ. ಅದು ನಿಜವಾಗಿದ್ದು, ಇದೀಗ ಕನಿಮೋಳಿ ಖುಲಾಸೆಗೊಂಡಿದ್ದಾರೆ. ಹೊತ್ತ ಹರಕೆಯೂ ಕೂಡ ಈಡೇರಿದೆ.