ಕಂಬಳಕ್ಕೆ ಹಸಿರು ನಿಶಾನೆ ದೊರಕಿದ ಬಳಿಕ ಕರಾವಳಿ ಕಂಬಳ ಪ್ರಿಯರು ವಿಜಯೋತ್ಸವದ ಉತ್ಸಾಹದಲ್ಲಿದ್ದಾರೆ. ಒಂದು ವರ್ಷವಿಡೀ ಕಂಬಳ ನಡೆಸದೆ ಬೇಸರಗೊಂಡಿದ್ದವರು ಮೊದಲ ಕಂಬಳವನ್ನು ವಿಜಯೋತ್ಸವದಂತೆ ಆಚರಿಸಲು ಸಿದ್ದತೆ ಮಾಡಿಕೊಂಡಿದ್ದಾರೆ. ಕೋಣಗಳು ರಾಜಾತಿಥ್ಯದಲ್ಲಿ ಸಿದ್ದಗೊಳ್ಳುತ್ತಿವೆ.

ಮಂಗಳೂರು(ಆ.02): ಕಂಬಳಕ್ಕೆ ಹಸಿರು ನಿಶಾನೆ ದೊರಕಿದ ಬಳಿಕ ಕರಾವಳಿ ಕಂಬಳ ಪ್ರಿಯರು ವಿಜಯೋತ್ಸವದ ಉತ್ಸಾಹದಲ್ಲಿದ್ದಾರೆ. ಒಂದು ವರ್ಷವಿಡೀ ಕಂಬಳ ನಡೆಸದೆ ಬೇಸರಗೊಂಡಿದ್ದವರು ಮೊದಲ ಕಂಬಳವನ್ನು ವಿಜಯೋತ್ಸವದಂತೆ ಆಚರಿಸಲು ಸಿದ್ದತೆ ಮಾಡಿಕೊಂಡಿದ್ದಾರೆ. ಕೋಣಗಳು ರಾಜಾತಿಥ್ಯದಲ್ಲಿ ಸಿದ್ದಗೊಳ್ಳುತ್ತಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕರಾವಳಿಯ ಜನಪದ ಕ್ರೀಡೆ ಕಂಬಳಕ್ಕೆ ಕಳೆದ ಬಾರಿ ನಿಷೇಧದ ಗೊಂದಲದಿಂದ ಎಲ್ಲಿಯೂ ಕಂಬಳ ನಡೆಯಲೇ ಇಲ್ಲ. ಬಳಿಕ ರಾಜ್ಯಾದ್ಯಂತ ನಡೆದ ಹೋರಾಟದ ಬಳಿಕ ಕಂಬಳಕ್ಕೆ ಕಾನೂನು ಬಲ ತುಂಬುದಕ್ಕೆ ರಾಜ್ಯಸರ್ಕಾರ ವಿಧಾನಮಂಡಲದಲ್ಲಿ ಕಾಯ್ದೆಗೆ ತಿದ್ದುಪಡಿ ತಂದು, ವಿಧೇಯಕ ಮಂಡಿಸಿತ್ತು. ಇದೀಗ ಆ ವಿಧೇಯಕ್ಕೆ ರಾಷ್ಟ್ರಪತಿಗಳ ಅಂಕಿತ ದೊರಕಿದೆ. ಹೀಗಾಗಿ ಕಂಬಳಕ್ಕೆ ಇದ್ದ ಅಡ್ಡಿ ನಿವಾರಣೆಯಾಗಿದೆ. ನಿಷೇಧದ ಬಳಿಕದ ಮೊದಲ ಕಂಬಳವನ್ನು ವಿಜಯೋತ್ಸವದ ರೀತಿ ನಡೆಸುವುದಕ್ಕೆ ಕಂಬಳ ಸಮಿತಿ ನಿರ್ಧರಿಸಿದ್ದು ನವೆಂಬರ್ ತಿಂಗಳಲ್ಲಿ ಮೊದಲ ಕಂಬಳ ನಡೆಯಲಿದೆ.

ಸಾಮಾನ್ಯವಾಗಿ ನವೆಂಬರ್ ತಿಂಗಳ ಮೂರನೇ ವಾರದಿಂದ ತುಳುನಾಡಿನ ಕಂಬಳ ಆರಂಭವಾಗುತ್ತೆ. ಎಪ್ರಿಲ್ 2ನೇ ವಾರದವರೆಗೂ ನಿರಂತರವಾಗಿ ನಡೆಯುತ್ತದೆ. ಆದರೆ ಕಳೆದ ಬಾರಿ ಒಂದೇ ಒಂದು ಕಂಬಳ ನಡೆದಿಲ್ಲ. ಇದರಿಂದ ಕಂಬಳ ಅಭಿಮಾನಿಗಳಿಗೆ ನಿರಾಸೆಯಾಗಿತ್ತು. ಇದೀಗ ರಾಜಾತಿಥ್ಯ ನೀಡಿ ಕೋಣಗಳನ್ನು ಹೊಸ ಹುರುಪಿನೊಂದಿಗೆ ಕಂಬಳಕ್ಕೆ ತಯಾರು ಮಾಡಲಾಗುತ್ತಿದೆ. ಕೋಣಗಳ ಈಜು, ಮೋಜು. ಆಹಾರ ಜಬರ್ದಸ್ಥಾಗಿ ನಡೆಯುತ್ತಿದೆ.

ಒಟ್ಟಿನಲ್ಲಿ, ಜಾನಪದ ಕ್ರೀಡೆಯಾದ ಕಂಬಳಕ್ಕೆ ಇದ್ದ ಅಡ್ಡಿ ನಿವಾರಣೆಯಾಗಿದೆ. ವಿಜಯೋತ್ಸವಕ್ಕೆ ಸಿದ್ಧತೆ ನಡೆದಿದೆ.