ಬೆಂಗಳೂರು :  ಕಾಂಗ್ರೆಸ್ ಹಿರಿಯ ಮುಖಂಡ ಕಾಗೋಡು ತಿಮ್ಮಪ್ಪ ರಾಜಕೀಯದಲ್ಲಿ ಸಕ್ರಿಯರಾಗಿರಬೇಕು. ರಾಜಕೀಯ ಕ್ಷೇತ್ರಕ್ಕೆ ಆಗಮಿಸುವ ಯುವಪೀಳಿಗೆಗೆ ಕಾಗೋಡು ಅವರ ಮಾರ್ಗದರ್ಶನದ ಅವಶ್ಯಕತೆ ಇದೆ ಎಂದು ಮಾಜಿ ಶಾಸಕ ಎಚ್. ಎಂ. ಚಂದ್ರಶೇಖರಪ್ಪ ಹೇಳಿದರು. ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿ, ಜಿಲ್ಲೆ ಹಾಗೂ ರಾಜ್ಯಕ್ಕೆ ಕಾಗೋಡು ತಿಮ್ಮ ಪ್ಪನವರ ಕೊಡುಗೆ ಅಪಾರ. ದೇಶಕ್ಕೆ ಆಸ್ತಿ ಯಾಗಿರುವ ಅವರು, ರಾಜಕೀಯದಲ್ಲಿ ಇನ್ನಷ್ಟು ಕಾಲ ಸಕ್ರಿಯವಾಗಿ ತೊಡಗಿಕೊಳ್ಳಬೇಕು. 

ಕಾಗೋಡು ಅವರ ರಾಜಕೀಯ ಅನುಭವ, ಮಾರ್ಗದರ್ಶನ ಯುವಪೀಳಿಗೆಗೆ ಬೇಕಿದೆ ಎಂದು ಅಭಿಪ್ರಾಯಪಟ್ಟರು. ಶಾಸಕರಾಗಿ, ಸಚಿವರಾಗಿ, ಸಭಾಧ್ಯಕ್ಷರಾಗಿ ಉತ್ತಮವಾಗಿ ಕೆಲಸ ನಿರ್ವಹಿಸಿದ ಅನುಭವವಿದೆ. ಸಭಾಧ್ಯಕ್ಷರಾಗಿದ್ದ ಅವಧಿಯಲ್ಲಿ ಶಾಸಕರುಗಳಿಗೆ ರಾಜಕೀಯ ಪಾಠವನ್ನೇ ಮಾಡುತ್ತಿ ದ್ದರು. ಅಧಿಕಾರಿಗಳಿಗೆ ಎಚ್ಚರಿಕೆ ನೀಡುತ್ತಿದ್ದರು.

ಅವರ ರಾಜಕೀಯ ಅನುಭವ ಅಪಾರವಾದದು. ಯುವಪೀಳಿಗಯನ್ನು ರಾಜಕೀಯ ಕ್ಷೇತ್ರಕ್ಕೆ ಕರೆತಂದು ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ  ತೊಡಗಿಕೊಳ್ಳಬೇಕೆಂದು ಮನವಿ ಮಾಡಿದರು. ಕಾಗೋಡು ತಿಮ್ಮಪ್ಪನವರ ಮುಂದಾಳತ್ವದಲ್ಲಿ ಜಿಲ್ಲೆಯಲ್ಲಿ ಅನೇಕ ಅಭಿವೃದ್ಧಿ ಕೆಲಸವಾಗಿದೆ. ಕುವೆಂಪು ರಂಗಮಂದಿರ, ಕುವೆಂಪು ವಿವಿ ಸ್ಥಾಪನೆ, ಜೆಎನ್‌ಎನ್ ಎಂಜಿನಿಯರಿಂಗ್ ಕಾಲೇಜು, ಮಾಚೇನಹಳ್ಳಿಯಲ್ಲಿ ಕೈಗಾರಿಕಾ ವಲಯ, ಮೆಗ್ಗಾನ್ ಆಸ್ಪತ್ರೆ ಮೇಲ್ದರ್ಜೆಗೆ, ತುಂಗಾ ನದಿಗೆ ಗಾಜನೂರಿಗೆ ಹೊಸ ಅಣೆಕಟ್ಟು, ಆಶ್ರಯ ಬಡಾವಣೆ ನಿರ್ಮಾಣ ಹೀಗೆ ಹಲವು ಕೊಡುಗೆ ನೀಡಿದ್ದಾರೆ ಎಂದರು.

ಭೂ ಸುಧಾರಣಾ ಕಾಯ್ದೆಯ ಮೂಲಕ ರೈತರ ಹಿತ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ರೈತರು ನೆಮ್ಮದಿಯಾಗಿದ್ದಾರೆ. ಅಲ್ಲದೇ ಬಗರ್ ಹುಕುಂ ಸಮಸ್ಯೆ ಬಗೆಹರಿಸುವಲ್ಲಿ ಅವರ ಪಾತ್ರ ಸಾಕಷ್ಟಿದೆ. ಕಾಂಗ್ರೆಸ್ ಪಕ್ಷ ಹಿನ್ನಡೆ ಅನುಭವಿಸುತ್ತಿದ್ದಾಗ ನಾವೆಲ್ಲರು ಮತ್ತೆ ಪಕ್ಷವನ್ನು ಕಟ್ಟಿ ಬೆಳೆಸಿದ್ದೇವೆ. ಮುಂದಿನ ದಿನದಲ್ಲೂ ಪಕ್ಷ ಸಂಘಟನೆಗೆ ಅವರ ಅವಶ್ಯಕತೆ ಇದೆ ಎಂದು ಹೇಳಿದರು. ಜಿಲ್ಲೆಯಲ್ಲಿ ಇನ್ನು ಸಾಕಷ್ಟು ಜ್ವಲಂತ ಸಮಸ್ಯೆಗಳಿವೆ. 

ಮರಳಿನ ಸಮಸ್ಯೆ ಹಾಗೆ ಉಳಿದಿದೆ. ಸಾಮಾನ್ಯ ಜನರಿಗೆ ಸುಲಭವಾಗಿ ಮರಳು ಲಭ್ಯವಾಗುವಂತಾಗಬೇಕು. ಸ್ಮಾಟ್ ಸಿರ್ಟಿ ಯೋಜನೆಯಲ್ಲಿ ಕಾಮಗಾರಿ ನಿರೀಕ್ಷಿತ ವೇಗದಲ್ಲಿ ಸಾಗುತ್ತಿಲ್ಲ. ವಿಮಾನ ನಿಲ್ದಾಣ ಕಾಮಗಾರಿ ಕುಂಠಿತಗೊಂಡಿದೆ. ಇವುಗಳಿಗೆ ಪರಿಹಾರ ದೊರಕಬೇಕು. ಕಾಗೋಡು ತಿಮ್ಮಪ್ಪರವರು ಮೊದಲಿನಿಂದಲೂ ಹೋರಾಟದ ಹಿನ್ನಲೆಯಿಂದ ಬಂದವರು, ಅವರು ಸದಾ ನಮ್ಮೊಂದಿಗೆ ಇರಬೇಕು.

 ಸಧ್ಯದಲ್ಲಿಯೇ ಅವರನ್ನು ಭೇಟಿಯಾಗಿ ಚರ್ಚಿಸಲಾಗುವುದು ಎಂದರು. ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಹಸನ್ ಅಲಿಖಾನ್, ರಾಜಗೋಪಾಲ್, ಶಿವಾಜಿರಾವ್, ಶ್ರೀನಿವಾಸ್, ದೇವೇಂದ್ರಪ್ಪ, ಮಹಮ್ಮದ್ ಇಕ್ಬಾಲ್ ಮತ್ತಿತರರು ಉಪಸ್ಥಿತರಿದ್ದರು.