ಬೆಂಗಳೂರು[ಡಿ.07]  ಶಾಸಕ ಭೈರತಿ ಬಸವರಾಜ್ ಭೂ ಅಕ್ರಮವೊಂದು ಬಯಲಿಗೆ ಬಂದಿದೆ.  ಸರ್ಕಾರಿ ಜಮೀನಿನಲ್ಲಿ ಖಾಸಗೀ ಲೇಔಟ್ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಶಾಸಕ ಭೈರತಿ ಬಸವರಾಜ್ ಮತ್ತು ಬೆಂಬಲಿಗರಿಂದ ಭಾರೀ ಅಕ್ರಮ ಆಗಿದೆ ಎಂಬ ಮಾತು ಕೇಳಿ ಬಂದಿದೆ.

ಮೇಡಹಳ್ಳಿ ಸರ್ವೇ ನಂಬರ್ 89ರಲ್ಲಿ ಅಕ್ರಮವಾಗಿದೆ ಎಂದು ಹೇಳಲಾಗಿದೆ. 14.5 ಎಕರೆ ಸರ್ಕಾರಿ ಜಮೀನಿನಲ್ಲಿ ಖಾಸಗೀ ಲೇಔಟ್ ನಿರ್ಮಾಣ ಮಾಡಲಾಗಿದೆ ಎಂಬ ಆರೋಪ ಬಂದಿದೆ. ಈ ಹಿಂದೆ 2013ರಲ್ಲಿ ವಿವಿಧ ಸಮುದಾಯಗಳಿಗೆ ಹಂಚಿಕೆ ಯಾಗಿದ್ದ ಭೂಮಿ ಇದಾಗಿದ್ದು ಖಾಸಗಿ ಭೂಮಿಯಾಗಿ ಪರಿವರ್ತನೆ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಲಾಗಿದೆ.

ಕರಾವಳಿ ಜನಕೂಟ, ಕೇರಳ ಸಮಾಜ, ಸವಿತಾ ಸಮಾಜ, ಬಲಿಜ ಸಮಾಜ,ವಾಲ್ಮೀಕಿ ಸಮಾಜ, ಒಕ್ಕಲಿಗ ಸಮಾಜ, ಭೋವಿ ಸಮುದಾಯಕ್ಕೆ ಹಂಚಿಕೆ ಮಾಡಲು ತೀರ್ಮಾನಿಸಲಾಗಿತ್ತು. ಶಾಸಕ ಭೈರತಿ ಬಸವರಾಜ್ ಮತ್ತು ಸ್ಥಳೀಯ ಕಾರ್ಪೋರೇಟರ್‌ಗಳು ಲೇಔಟ್ ನಿರ್ಮಾಣ ಮಾಡುತ್ತಿದ್ದಾರೆ. ಸ್ಥಳೀಯ ತಹಶಿಲ್ದಾರ್ ಮತ್ತು ಶಾಸಕ ಭೈರತಿ ಬಸವರಾಜ್ ರಿಂದ ಅಕ್ರಮ ದಾಖಲೆ ಸೃಷ್ಟಿಸಲಾಗಿದೆ ಎಂದು ಹೇಳಲಾಗಿದೆ.

ಸರ್ಕಾರಿ ಭೂಮಿಯ ಇಂದಿನ ಮೌಲ್ಯ 150ಕೋಟಿಗೂ ಹೆಚ್ಚಿದ್ದು ಅಕ್ರಮ ಆಗಿದೆ  ಎಂದು ತಹಶೀಲ್ದಾರ್ ಗೆ ದಾಖಲೆ ಸಮೇತ ಮನವಿ ಮಾಜಿ ಶಾಸಕ ನಂದೀಶ್ ರೆಡ್ಡಿ ಮನವಿ ಮಾಡಿದ್ದು ದೂರು ದಾಖಲಾಗಿದೆ.