Asianet Suvarna News Asianet Suvarna News

ನಾಳೆ ಹೊಸ ಸಿಜೆಐ ಆಗಿ ಗೊಗೋಯ್ ಪ್ರಮಾಣ

ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನಿವೃತ್ತಿ | ನೂತನ ನ್ಯಾಯಮೂರ್ತಿಯಾಗಿ ರಂಜನ್ ಗೋಗೋಯ್ ನಾಳೆ ಪ್ರಮಾಣ ವಚನ 

Justice Ranjan Gogoi to be Next CJI
Author
Bengaluru, First Published Oct 2, 2018, 8:53 AM IST

ನವದೆಹಲಿ (ಅ. 02): ಸುಪ್ರೀಂಕೋರ್ಟ್‌ ಮುಖ್ಯನ್ಯಾಯಮೂರ್ತಿ ದೀಪಕ್‌ ಮಿಶ್ರಾ, ಸೋಮವಾರ ಕಡೆಯದಾಗಿ ತಮ್ಮ ಕರ್ತವ್ಯ ನಿರ್ವಹಿಸಿದರು. ಲೆಕ್ಕಾಚಾರದ ಪ್ರಕಾರ ಅವರು ಮಂಗಳವಾರ ನಿವೃತ್ತರಾಗಬೇಕಿತ್ತಾದರೂ, ಮಂಗಳವಾರ ಗಾಂಧೀ ಜಯಂತಿಗೆ ಸರ್ಕಾರಿ ರಜೆ ಇರುವ ಹಿನ್ನೆಲೆಯಲ್ಲಿ ಸೋಮವಾರ ಅವರ ಕಡೆಯ ಕರ್ತವ್ಯದ ದಿನವಾಗಿತ್ತು. ಬುಧವಾರ ನೂತನ ಸಿಜೆಐ ಆಗಿ ನ್ಯಾ.ರಂಜನ್‌ ಗೊಗೋಯ್‌ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಸೋಮವಾರ ಕೇವಲ 25 ನಿಮಿಷಗಳಲ್ಲಿ ಕಲಾಪ ಮುಗಿಸಿದ ನ್ಯಾ.ಮಿಶ್ರಾ ಈ ವೇಳೆ ಭಾವುಕರಾದರು. ಇದೇ ವೇಳೆ ನ್ಯಾಯವಾದಿಯೊಬ್ಬರು, ನ್ಯಾ.ಮಿಶ್ರಾ ಕುರಿತು ‘ಸಾವಿರಾರು ವರ್ಷ ಬಾಳಿ’ ಎಂಬ ಹಾಡು ಹಾಡಿದಾಗ, ಅವರನ್ನು ಅರ್ಧಕ್ಕೇ ತಡೆದ ಅವರು, ಈಗ ನಾನು ಹೃದಯದಿಂದ ಪ್ರತಿಕ್ರಿಯಿಸುತ್ತಿದ್ದೇನೆ, ಸಂಜೆ ಮನಸ್ಸಿನಿಂದ ಪ್ರತಿಕ್ರಿಯಿಸಲಿದ್ದೇನೆ ಎಂದರು.

ಮಿಶ್ರಾ ಹಿರಿಮೆ: 2017, ಆ.28ರಂದು ಸಿಜೆಐ ಆಗಿ ಅಧಿಕಾರ ಸ್ವೀಕರಿಸಿದ್ದ ನ್ಯಾ.ಮಿಶ್ರಾ, ನಿವೃತ್ತಿಯ ಅಂಚಿನಲ್ಲಿ ಕಳೆದ ವಾರ ಕೇವಲ ಐದು ದಿನಗಳಲ್ಲಿ 20 ಪ್ರಮುಖ ಪ್ರಕರಣಗಳ ತೀರ್ಪು ನೀಡಿ ಗಮನ ಸೆಳೆದಿದ್ದರು. ಇದರ ಜೊತೆಗೆ ಮೂಲಭೂತ ಹಕ್ಕುಗಳ ವ್ಯಾಪ್ತಿ ವಿಸ್ತರಿಸಿದುದು, ನ್ಯಾಯಾಂಗ ಸ್ವಾತಂತ್ರ್ಯತೆಯ ಅಧಿಕಾರ ಎತ್ತಿಹಿಡಿದುದು, ಆಧಾರ್‌ ಷರತ್ತುಬದ್ಧಗೊಳಿಸಿದುದು, ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಅವಕಾಶ, ವ್ಯಭಿಚಾರ ಅಪರಾಧವಲ್ಲ, ಸಲಿಂಗಕಾಮ ಅಪರಾಧವಲ್ಲ ಮುಂತಾದ ಹಲವು ಪ್ರಮುಖ ತೀರ್ಪುಗಳಿಗೆ ನ್ಯಾ.ಮಿಶ್ರಾ ಪ್ರಸಿದ್ಧರಾಗಿದ್ದಾರೆ. 

Follow Us:
Download App:
  • android
  • ios