ಝಡ್ ಪ್ಲಸ್ ಭದ್ರತೆ ಇದ್ದವರಿಗೆ 55 ಭದ್ರತಾ ಸಿಬ್ಬಂದಿ ಇರುತ್ತಾರೆ. ಇದರಲ್ಲಿ 10 ಎನ್‌'ಎಸ್‌'ಜಿ ಕಮಾಂಡೋಗಳಿರುತ್ತಾರೆ.

ಚಂಡೀಗಢ(ಆ.31): ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಂ ಸಿಂಗ್‌'ಗೆ 20 ವರ್ಷ ಜೈಲು ಶಿಕ್ಷೆ ಪ್ರಕಟಿಸಿದ ಸಿಬಿಐ ಕೋರ್ಟ್ ನ್ಯಾಯಾಧೀಶ ಜಗದೀಪ್ ಸಿಂಗ್ ಝಡ್ ಪ್ಲಸ್ ಭದ್ರತೆ ಒದಗಿಸಲಾಗಿದೆ.

ರಾಮ್ ರಹೀಂ ದೋಷಿ ಎಂದು ತೀರ್ಪು ಬಂದ ಬಳಿಕ ಜಗದೀಪ್ ಸಿಂಗ್ ಮತ್ತು ಅವರ ಕುಟುಂಬ ಸದಸ್ಯರಿಗೆ ಬೆದರಿಕೆ ಕರೆಗಳು ಬಂದಿರುವ ಹಿನ್ನೆಲೆಯಲ್ಲಿ ಸರ್ಕಾರ ಅವರಿಗೆ ಅತ್ಯಧಿಕ ಭದ್ರತೆ ಕಲ್ಪಿಸಿದೆ. ರಾಮ್ ರಹೀಂ ವಿರುದ್ಧ ತೀರ್ಪು ಪ್ರಕಟಿಸುವ ಸಂದರ್ಭದಲ್ಲಿ ಸಿಬಿಐ ಕೋರ್ಟ್ ನ್ಯಾಯಾಧೀಶರನ್ನು ಹೆಲಿಕಾಪ್ಟರ್ ಮೂಲಕ ರೋಹ್ತಕ್‌'ಗೆ ಕರೆದೊಯ್ಯಲಾಗಿತ್ತು.

ಝಡ್ ಪ್ಲಸ್ ಭದ್ರತೆ ಇದ್ದವರಿಗೆ 55 ಭದ್ರತಾ ಸಿಬ್ಬಂದಿ ಇರುತ್ತಾರೆ. ಇದರಲ್ಲಿ 10 ಎನ್‌'ಎಸ್‌'ಜಿ ಕಮಾಂಡೋಗಳಿರುತ್ತಾರೆ.