Asianet Suvarna News Asianet Suvarna News

84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಚಂದ್ರಶೇಖರ ಕಂಬಾರ್​ ಆಯ್ಕೆ

ಇದೇ  ಡಿಸೆಂಬರ್ 7,  8 ಹಾಗೂ 9ರಂದು ಧಾರವಾಡದಲ್ಲಿ ನಡೆಯಲಿರುವ  84ನೇ  ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ.

Jnanapith awardee Chandrashekhar Kambar to chair 84th Kannada Sahitya Sammelana
Author
Bengaluru, First Published Sep 27, 2018, 4:39 PM IST
  • Facebook
  • Twitter
  • Whatsapp

ಧಾರವಾಡ, [ಸೆ. 27]:   84ನೇ  ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಸಾಹಿತಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ್​ ಕಂಬಾರ್​ ಅವರನ್ನು ಆಯ್ಕೆ ಮಾಡಲಾಗಿದೆ.

 ಇಂದು [ಗುರುವಾರ] ಗದಗನಲ್ಲಿ ನಡೆದ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸರ್ವಾನುಮತದಿಂದ ಚಂದ್ರಶೇಖರ ಕಂಬಾರ್ ಅವರನ್ನು ಆಯ್ಕೆ ಮಾಡಲಾಗಿದೆ.  

 ಈ ಬಗ್ಗೆ ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ರಾಜ್ಯಾಧ್ಯಕ್ಷ ಮನು ಬಳಿಗಾರ್​ ಅಧಿಕೃತವಾಗಿ ಘೋಷಿಸಿದ್ದಾರೆ.  84ನೇ  ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಡಿಸೆಂಬರ್ 7,  8 ಹಾಗೂ 9ರಂದು ನಡೆಯಲಿದೆ.

Follow Us:
Download App:
  • android
  • ios