ಎಲ್ಲಾ ಟೆಲಿಕಾಂ ಗ್ರಾಹಕರಿಗೂ ಇಲ್ಲಿದೆ ಗುಡ್ ನ್ಯೂಸ್. ಇನ್ನು ಮುಂದೆ ಯಾವುದೇ ಟೆಲಿಕಾಂ ಸಂಸ್ಥೆಗಳೂ ಕೂಡ ತಮ್ಮ ಸೇವೆಯನ್ನು ಕ್ಲೋಸ್ ಮಾಡುವ ಮುನ್ನ 30 ದಿನಗಳ ಮುಂಚೆ ನೋಟಿಸ್ ನೀಡಬೇಕು ಎಂದು ಸರ್ಕಾರ ಸೂಚನೆ ನೀಡಿದೆ. 

ನವದೆಹಲಿ : ಎಲ್ಲಾ ಟೆಲಿಕಾಂ ಸಂಸ್ಥೆಯ ಗ್ರಾಹಕರಿಗೆ ಇಲ್ಲಿದೆ ಗುಡ್ ನ್ಯೂಸ್. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸರ್ಕಾರ ಎಲ್ಲಾ ಟೆಲಿಕಾಂ ಸಂಸ್ಥೆಗಳಿಗೆ ಖಡಕ್ ಆದೇಶವೊಂದನ್ನು ಹೊರಡಿಸಿದೆ. ಇದರಿಂದ ಗ್ರಾಹಕರಿಗೆ ಸಾಕಷ್ಟು ಅನುಕೂಲ ಒದಗಲಿದೆ. 

ಯಾವುದೇ ಟೆಲಿಕಾಂ ಸಂಸ್ಥೆಯು ತನ್ನ ಸೇವೆಯನ್ನು ಬಂದ್ ಮಾಡುವುದಿದ್ದಲ್ಲಿ 30 ದಿನಗಳ ಮುಂಚೆಯೇ ನೋಟಿಸ್ ನೀಡಬೇಕು ಎಂದು ಸೂಚನೆಯನ್ನು ನೀಡಿದೆ. 

ಈ ಹಿಂದೆ ಅನೇಕ ಟೆಲಿಕಾಂ ಸಂಸ್ಥೆಗಳು ತಮ್ಮ ಗ್ರಾಹಕರಿಗೆ ಯಾವುದೇ ರೀತಿಯ ಮುಂಚಿತ ಮಾಹಿತಿ ನೀಡದೇ ತಮ್ಮ ಸೇವೆಗಳನ್ನು ಬಂದ್ ಮಾಡಿದ್ದು ಇದರಿಂದ ಗ್ರಾಹಕರು ಸಮಸ್ಯೆ ಎದುರಿಸಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಹಾಗೂ ಟೆಲಿಕಾಂ ಸಂಸ್ಥೆಗಳು ಸಭೆಯನ್ನು ನಡೆಸಿ ಈ ತೀರ್ಮಾನ ಕೈಗೊಂಡಿವೆ.