ಮಾಂಸ ವರ್ತಕನನ್ನು ಗುಂಪೊಂದು ಥಳಿಸಿ ಹತ್ಯೆಗೈದ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಸ್ಥಳೀಯ ಬಿಜೆಪಿ ನಾಯಕ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ. ಪ್ರಕರಣದ ಇನ್ನೋರ್ವಾ ಆರೋಪಿ ನ್ಯಾಯಾಲಯದ ಮುಂದೆ ಶರಣಾಗಿದ್ದಾನೆ.
ರಾಮಗಢ, ಜಾರ್ಖಂಡ್: ಮಾಂಸ ವರ್ತಕನನ್ನು ಗುಂಪೊಂದು ಥಳಿಸಿ ಹತ್ಯೆಗೈದ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಸ್ಥಳೀಯ ಬಿಜೆಪಿ ನಾಯಕ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ. ಪ್ರಕರಣದ ಇನ್ನೋರ್ವಾ ಆರೋಪಿ ನ್ಯಾಯಾಲಯದ ಮುಂದೆ ಶರಣಾಗಿದ್ದಾನೆ.
ಬಿಜೆಪಿ ನಾಯಕ ನಿತ್ಯಾನಂದ್ ಮಹಾತೋ ಹಾಗೂ ಸಂತೋಷ್ ಸಿಂಗ್ ಎಂಬವರನ್ನು ಪೊಲೀಸರು ಬಂಧಿಸಿದ್ದರೆ, ಚೋಟು ರಾಣಾ ನ್ಯಾಯಾಲಯದ ಮುಂದೆ ಹಾಜರಾಗಿ ಶರಣಾಗಿದ್ದಾನೆ.
ಹತ್ಯೆಗೆ ಸಂಬಂಧಿಸಿ ಪೊಲೀಸರು ಇನ್ನೊಬ್ಬ ವ್ಯಕ್ತಿಯನ್ನು ವಶಕ್ಕೆ ಪಡೆದು, ವಿಚಾರಣೆಗೊಳಪಡಿಸಿದ್ದಾರೆ.
ಗೋಮಾಂಸ ಕೊಂಡೊಯ್ಯುತ್ತಿದ್ದಾನೆಂಬ ಗುಮಾನಿ ಮೇಲೆ ಹಝಾರಿಬಾಗ್ ಜಿಲ್ಲೆಯ ಮನುವಾ ಗ್ರಾಮದ ಮಾಂಸ ವರ್ತಕನೊಬ್ಬನನ್ನು ಕಳೆದ ಗುರುವಾರ ಗುಂಪೊಂದು ಸಾರ್ವಜನಿಕವಾಗಿ ಥಳಿಸಿ ಹತ್ಯೆಗೈದಿತ್ತು, ಹಾಗೂ ಆತನ ವಾಹನಕ್ಕೆ ಬೆಂಕಿಯಿಟ್ಟಿತ್ತು.
