ಪರಿಷತ್'ಗೆ ಜೆಡಿಎಸ್'ನಿಂದ ಇಬ್ಬರು, 11 ಮಂದಿ ಅವಿರೋಧ ಆಯ್ಕೆ ಖಚಿತ

JDS  Releases Two names for the MLC Elections.
Highlights

ಜೂನ್.11 ರಂದು ನಡೆಯುವ ಚುನಾವಣೆಗೆ ಮೂರು ಪಕ್ಷಗಳಿಂದ 11 ಮಂದಿ ಕಣದಲ್ಲಿದ್ದು ಎಲ್ಲರೂ ಅವಿರೋಧ ಆಯ್ಕೆಯಾಗುವುದು ಖಚಿತವಾಗಿದೆ.

ಬೆಂಗಳೂರು(ಮೇ.30): ದೇವೇಗೌಡರ ಪರಮಾಪ್ತರಾಗಿರುವ ವೈ.ಎಸ್.ವಿ. ದತ್ತಾಗೆ ಜೆಡಿಎಸ್'ನಿಂದ ಈ ಬಾರಿ ವಿಧಾನ ಪರಿಷತ್ ಸ್ಥಾನ ತಪ್ಪಿದೆ.  
ಮಂಗಳೂರಿನ ಉದ್ಯಮಿ ಬಿ.ಎಂ.ಫಾರೂಕ್ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಡಾ.ಎಸ್.ಸುಬ್ರಹ್ಮಣ್ಯ ಅವರು ಜೆಡಿಎಸ್ ಅಭ್ಯರ್ಥಿಯಾಗಿದ್ದಾರೆ.ಜೂನ್.11 ರಂದು ನಡೆಯುವ ಚುನಾವಣೆಗೆ ಮೂರು ಪಕ್ಷಗಳಿಂದ 11 ಮಂದಿ ಕಣದಲ್ಲಿದ್ದು ಎಲ್ಲರೂ ಅವಿರೋಧ ಆಯ್ಕೆಯಾಗುವುದು ಖಚಿತವಾಗಿದೆ. ಅಂದು ಸಂಜೆ 5 ಗಂಟೆಗೆ ಚುನಾವಣಾಧಿಕಾರಿಗಳು ಅಧಿಕೃತವಾಗಿ ಪ್ರಕಟಿಸಲಿದ್ದಾರೆ.  
ಕಣದಲ್ಲಿರುವ ಮೂರು ಪಕ್ಷದ ಅಭ್ಯರ್ಥಿಗಳು
ಬಿಜೆಪಿ:  ರಘುನಾಥ್ ರಾವ್ ಮಲ್ಕಾಪುರೆ, ಎನ್.ರವಿಕುಮಾರ್, ಎಸ್. ರುದ್ರೇಗೌಡ, ಕೆ.ಪಿ.ನಂಜುಂಡಿ, ತೇಜಸ್ವಿನಿ ಗೌಡ
ಕಾಂಗ್ರೆಸ್:  ಸಿ.ಎಂ.ಇಬ್ರಾಹಿಂ, ಕೆ.ಗೋವಿಂದರಾಜ್, ಅರವಿಂದ ಕುಮಾರ್ ಅರಳಿ, ಕೆ.ಹರೀಶ್ ಕುಮಾರ್
ಜೆಡಿಎಸ್: ಬಿ.ಎಂ.ಫಾರೂಕ್,ಡಾ.ಎಸ್.ಸುಬ್ರಹ್ಮಣ್ಯ 

loader